ಸುಳ್ಯ:  ಎನ್ನೆಂಸಿಯಲ್ಲಿ ಆಟಿ ಆಚರಣೆ “ಆಟಿನ ನೆನಪು– ಸಂಪ್ರದಾಯದ ಮೆಲುಕು” ಕಾರ್ಯಕ್ರಮ

ಸಂಸ್ಕೃತಿ – ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಯುವಜನತೆಯಿಂದಾಗಲಿ – ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ

. . . . . . . . .

ಜನಪದ ಸಂಸ್ಕೃತಿ, ಪ್ರಕೃತಿಯೊಂದಿಗಿನ ಸಂಬಂಧ ಅಮೂಲ್ಯ – ಶ್ರೀಮತಿ ಗೀತಾ ಮೋಂಟಡ್ಕ

. . . . . . .

           ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಇವರ ಆಶ್ರಯದಲ್ಲಿ ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ, ಕನ್ನಡ ಸಂಘ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಘದ ಸಹಯೋಗದೊಂದಿಗೆ ‘ಆಟಿನ ನೆನಪು – ಸಂಪ್ರದಾಯದ ಮೆಲುಕು’ ಎಂಬ ಶೀರ್ಷಿಕೆಯಲ್ಲಿ ಆಟಿ ಆಚರಣೆ ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಎ.ಒ ಎಲ್.ಐ. (ರಿ.), ಸುಳ್ಯದ ಪ್ರಧಾನ ಕಾರ್ಯದರ್ಶಿ  ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ದೀಪ ಬೆಳಗಿ, ಹಿಂಗಾರ ಅರಳಿಸಿ  ಉದ್ಘಾಟಿಸಿ ಮಾತನಾಡುತ್ತಾ,
ಇಂದಿನ ಆಧುನಿಕ ಜೀವನಶೈಲಿಯ ನಡುವೆ ನಮ್ಮ ಮೂಲ ಸಂಸ್ಕೃತಿ ಮತ್ತು ಪರಂಪರೆ ಮರೆಯಾಗದಂತೆ ನೋಡಿಕೊಳ್ಳಬೇಕು.  ಸಂಸ್ಕೃತಿ – ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಯುವಜನತೆಯಿಂದಾಗಬೇಕು. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು ಮತ್ತು ಸಾಮಾಜಿಕ ಐಕ್ಯತೆಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ
ಡಾ. ಎನ್ ಎ ಜ್ಞಾನೇಶ್  ಮಾತನಾಡಿ, “ಆಟಿ ಕೇವಲ ಒಂದು ತಿಂಗಳ ಆಚರಣೆಯಲ್ಲ; ಅದು ನಮ್ಮ ಮಣ್ಣಿನ ಬದುಕು, ಆಹಾರ ಪದ್ಧತಿ, ಜನಪದ ಸಂಸ್ಕೃತಿ, ಪ್ರಕೃತಿಯೊಂದಿಗಿನ ಸಂಬಂಧ. ಇಂತಹ ಆಚರಣೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಅರಿತುಕೊಳ್ಳಬೇಕು” ಎಂದು ಹೇಳಿದರು.

ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ ಹಿರಿಯ ರಂಗಭೂಮಿ ಕಲಾವಿದೆ, ಎನ್ನೆಂಸಿಯ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ದೇವಜನ ಗೀತಾ ಮೋಂಟಡ್ಕ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕುವುದರೊಂದಿಗೆ,
“ಆಟಿ ತಿಂಗಳ ಪ್ರತಿಯೊಂದು ಆಚರಣೆಯಲ್ಲೂ ನಮ್ಮ ಪೂರ್ವಜರ ಬದುಕಿನ ಜ್ಞಾನ ಅಡಗಿದೆ. ಜನಪದ ಕಲೆ, ಆಹಾರ, ಆಚರಣೆ ಮತ್ತು ನಂಬಿಕೆಗಳು ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಭಾಗವಾಗಿವೆ. ಅವುಗಳನ್ನು ಕೇವಲನೆನಪಿಸಿಕೊಳ್ಳುವುದಷ್ಟೇ  ಅಲ್ಲ,  ಅರ್ಥಮಾಡಿಕೊಂಡು ಉಳಿಸಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು , ಪ್ರಾಂಶುಪಾಲ  ಡಾ. ರುದ್ರತುಮಾರ್ ಎಂ ಎಂ, ಅಕಾಡೆಮಿ ಸದಸ್ಯೆ ಲತಾ ಪ್ರಸಾದ್ ಕುದ್ರಾಜೆ, ಕಾಲೇಜಿನ ಐಕ್ಯೂಎಸಿ  ಸಂಚಾಲಕಿ ಡಾ. ಮಮತಾ ಕೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶಶ್ಮಿ ಭಟ್, ಕಾರ್ಯಕ್ರಮ ಸಂಘಟಕಿ,  ಕನ್ನಡ ವಿಭಾಗ ಮುಖ್ಯಸ್ಥೆ ಡಾ.  ಅನುರಾಧಾ ಕುರುಂಜಿ ಮೊದಲಾದವರು ಉಪಸ್ಥಿತರಿದ್ದರು.
ಜಯಪ್ರಕಾಶ್ ಕುಕ್ಕೆಟ್ಟಿ ತೀರ್ಪುಗಾರರಾಗಿ ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಆಟಿ ಕಳೆಂಜ
ಪ್ರದರ್ಶನ, ವಸ್ತು ಪ್ರದರ್ಶನ, ಆಟಿ ಆಹಾರ ಮೇಳ, ಚೆನ್ನೆಮಣೆ ಸ್ಪರ್ಧೆ, ಸೋಬಾನೆ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಚೆನ್ನೆಮಣೆ ಸ್ಪರ್ಧೆಯನ್ನು ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಚೆನ್ನೆಮಣೆ ಆಡುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ರೆಡ್ ಕ್ರಾಸ್ ಸದಸ್ಯರಾದ ಹವ್ಯಾ, ಧೃತಿ, ಕೃತಿ, ಸೌಪರ್ಣಿಕಾ ಪ್ರಾರ್ಥಿಸಿ, ಅಕಾಡೆಮಿಯ ಸದಸ್ಯ ಸಂಚಾಲಕಿ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕಿ ಡಾ.  ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಟಿ ಎಂದರೆ ಕೇವಲ ತಿಂಗಳಲ್ಲ, ಅದು ನಮ್ಮ ನೆಲ, ನಮ್ಮ ಸಂಸ್ಕೃತಿ, ನಮ್ಮ ಜೀವನ ಪದ್ಧತಿಯ ಪ್ರತೀಕ. ಇದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ,  ಅಳಿದುಹೋಗುತ್ತಿರುವ ಗ್ರಾಮೀಣ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕನ್ನಡ ಉಪನ್ಯಾಸಕಿ ಪ್ರೇಮಲತಾ ಎಂ ವಂದಿಸಿ ರೆಡ್ ಕ್ರಾಸ್ ಸದಸ್ಯರಾದ ಪ್ರತೀಕ್ಷಾ ಹಾಗೂ ಮೋನಿಷಾ ನಿರೂಪಿಸಿದರು. ಈ ಸಂದರ್ಭದಲ್ಲಿ ಗೀತಾ ಮೋಂಟಡ್ಕ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಪುಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾಲೇಜಿನ ಬೋಧಕ- ಬೋಧಕೇತರ ವೃಂದದವರು, ವಿದ್ಯಾರ್ಥಿಗಳು,  ಯುವ ರೆಡ್‌ಕ್ರಾಸ್ ಘಟಕದ ಸದಸ್ಯರು ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading