ಬರ ಪೀಡಿತ ತಾಲೂಕು ಪಟ್ಟಿಯಿಂದ ಸುಳ್ಯವನ್ನು ಕೈಬಿಟ್ಟು ರೈತರಿಗೆ ವಂಚನೆ – ವೆಂಕಟ್ ವಳಲಂಬೆ ಖಂಡನೆ ; ಸುಳ್ಳು ಹೇಳಿಕೆ ಬಿಟ್ಟು ಸಹಕಾರಿ ಸಂಘಗಳಿಗೆ ಬಾಕಿ ಪಾವತಿಸಲು ಆಗ್ರಹ

. . . . . . . . .

ಕೇಂದ್ರ ಸರಕಾರಕ್ಕೆ ನಮ್ಮ ರಾಜ್ಯದ ಬರ ಪೀಡಿತ ತಾಲೂಕಿನ ವರದಿ ಸಲ್ಲಿಸುವ ಸಮಯದಲ್ಲಿ ನಮ್ಮ ವಿಧಾನ ಸಭಾ ಕ್ಷೇತ್ರಕ್ಕಿಂತ ಹೆಚ್ಚು ಮಳೆಯಾಗಿರುವ ತಾಲೂಕನ್ನು ಬರ ಪೀಡಿತವೆಂದು ಸೇರಿಸಿದ್ದರೂ ನಮ್ಮ ವಿಧಾನ ಸಭಾ ಕ್ಷೇತ್ರವನ್ನು ಉದ್ದೇಶ ಪೂರ್ವಕವಾಗಿ ಕೈ ಬಿಟ್ಟಿದ್ದು ಕ್ಷೇತ್ರದ ಜನತೆಗೆ ಕಾಂಗ್ರೆಸ್ ಸರಕಾರ ಅಪಚಾರವೆಸಗಿದೆ ಹಾಗೂ ಸುಳ್ಳು ಹೇಳಿಕೆ ಬಿಟ್ಟು ಸಹಕಾರಿ ಸಂಘಗಳಿಗೆ ಬಾಕಿ ಇರುವ ಸಬ್ಸಿಡಿ ಹಣ ಕೂಡಲೇ ಪಾವತಿಸಲಿ ಎಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿದ್ದಾರೆ.

. . . . . . .

ಕೇಂದ್ರ ಸರಕಾರದ ಹಣ ಬಿಡುಗಡೆ ಮಾಡಲು ಈ ವರದಿಯ ಆಧಾರದಲ್ಲಿ ಸಾಧ್ಯವಿದ್ದರೂ ಸರಿಯಾದ ಮಾಹಿತಿಯನ್ನು ಅಧಿಕರಿಗಳು ನೀಡಿದ್ದರೂ ಲೋಪ ಎಸಗಲಾಗಿದೆ. ನಮ್ಮ ಕ್ಷೇತ್ರದ ರೈತರು ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ರೋಗದಿಂದ ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದರೂ ಮಾನ್ಯತೆ ನೀಡದಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಎಸಗಿದಂತಾಗಿದೆ. ತಕ್ಷಣ ಮರು ಪರಿಶೀಲಿಸಿ ನಮ್ಮ ವಿಧಾನ ಸಭಾ ಕ್ಷೇತ್ರವನ್ನು ಕೂಡ ಬರ ಪೀಡಿತ ಕ್ಷೇತ್ರವಾಗಿ ಮಾಡಿ ಸರಕಾರದಿಂದ ರೈತಾಪಿ ವರ್ಗಕ್ಕೆ ನೀಡಲ್ಪಡುವ ಅನುದಾನವನ್ನು ಇನ್ನಾದರೂ ಮುಂದಿನ ಅಧಿವೇಶನದಲ್ಲಿ ನಿರ್ಧರಿಸಿ ಸುಳ್ಯ ಕ್ಷೇತ್ರದ ಜನತೆಗೆ ನ್ಯಾಯವನ್ನು ಒದಗಿಸಬೇಕಾಗಿ ಆಗ್ರಹಿಸುತ್ತಿದ್ದೇನೆ.
ಮಾತ್ರವಲ್ಲದೇ ಮುಖ್ಯ ಮಂತ್ರಿಗಳು ವೈಯಕ್ತಿಕವಾಗಿ ಸಹಕಾರಿ ಸಂಘದ ಸದಸ್ಯರುಗಳಿಗೆ ಬಡ್ಡಿ ರಹಿತ ಸಾಲ ಮತ್ತು ಶೇಕಡಾ 3% ರ ಮಿತಿ ಪ್ರತಿಯೊಂದು ಕುಟುಂಬಕ್ಕೆ 3 ರಿಂದ 5 ಲಕ್ಷದ ತನಕ ನೀಡುತ್ತಿದ್ದೇನೆ ಎಂದು ಸುಳ್ಳು ಭರವಸೆ ನೀಡುತ್ತಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ. ಈಗಾಗಲೇ 3 ವರ್ಷದಿಂದ ಸಬ್ಸಿಡಿ ಸಾಲದ ವಾರ್ಷಿಕ ಮೊತ್ತವನ್ನು ಆಯಾ ವಾರ್ಷಿಕ ಅವಧಿಗೆ ಮುಂದೆ ಸಹಕಾರಿ ಸಂಘಕ್ಕೆ ನೀಡದೇ ಸಹಕಾರಿ ಸಂಘಗಳು ಕೂಡಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಾ ಬಾಕಿ ಕಂತುಗಳನ್ನು ಮರುಪಾವತಿ ಮಾಡಿ ರೈತರಿಗೆ ಪ್ರತಿಯೊಂದು ಸಹಕಾರಿ ಸಂಘಕ್ಕೆ ಸ್ಪಷ್ಟವಾದ ರೀತಿಯ ಮಾರ್ಗಸೂಚಿಯನ್ನು ನೀಡುವುದು ಬಿಟ್ಟು, ಸುಳ್ಳು ಆಶ್ವಸನೆಗಳನ್ನು ನೀಡಿ ಕೃಷಿಕರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದೆಂದು ಮತ್ತು ಈ ಮೂಲಕ ಕರ್ನಾಟಕ ಸರಕಾರ ರೈತರಿಗೆ ನ್ಯಾಯವನ್ನು ನೀಡಬೇಕಾಗಿ ಆಗ್ರಹಿಸುತ್ತಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading