ಕುಕ್ಕೆ ಸುಬ್ರಹ್ಮಣ್ಯ : ಬಸ್ ನಿಲ್ದಾಣದಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚತೆ ; ಜಾರಿ ಬೀಳುತ್ತಿದ್ದ ಪ್ರಯಾಣಿಕರ ಸಮಸ್ಯೆಗೆ ಸ್ಪಂದನೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನಂಪ್ರತಿ ಆಗಮಿಸುವ ಸಾವಿರಾರು ಭಕ್ತಾದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಥಳೀಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಸ್ ನಿಲ್ದಾಣದ ಆವರಣದಲ್ಲಿ ಸಂಚರಿಸುವುದೇ ಸಾರ್ವಜನಿಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬಸ್ ನಿಲ್ದಾಣದ ಇಕ್ಕೆಲಗಳಲ್ಲಿ, ಎದುರುಗಡೆಯ ಮಾರ್ಗದ ಬದಿಗಳಲ್ಲಿ ಹಾಗೂ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳಗಳಲ್ಲಿ ಪಾಚಿ/ಹಾವಸೆ ತುಂಬಿ ಕಾಲಿಟ್ಟರೆ ಜಾರಿ ಬೀಳುವ ವಾತಾವರಣ ನಿರ್ಮಾಣಗೊಂಡು ಹಲವು ಪ್ರಯಾಣಿಕರು ಜಾರಿಬಿದ್ದ ಘಟನೆಗಳು ನಡೆದಿತ್ತು. ಈ ಬಗ್ಗೆ ಕಳೆದೆರಡು ದಿನಗಳ ಹಿಂದೆ “ಅಮರ ಸುದ್ದಿ” ಪತ್ರಿಕೆಯು ವರದಿಯನ್ನು ಪ್ರಕಟಿಸಿತ್ತು. ಇದೀಗ ಪ್ರಯಾಣಿಕರ ಸಮಸ್ಯೆಯನ್ನು ಮನಗಂಡ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಚಿ/ಹಾವಸೆ ತುಂಬಿದ್ದ ಜಾಗಗಳಿಗೆ ಸುಣ್ಣ ಹಾಗೂ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚಗೊಳಿಸಿದ್ದು, ಈ ಮೂಲಕ ಭಕ್ತಾದಿಗಳ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading