10ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತುಳು ವಿಕಿಪೀಡಿಯಾ – ಪ್ರಸ್ತುತ ತುಳು ವಿಕಿಪೀಡಿಯಾದಲ್ಲಿ 3,700ಕ್ಕೂ ಅಧಿಕ ಲೇಖನ ಲಭ್ಯ

ವಿಶ್ವದಾದ್ಯಂತ ತುಳು ಭಾಷೆಯಲ್ಲಿ ಉಚಿತ ಜ್ಞಾನವನ್ನು ಹಂಚುತ್ತಿರುವ ತುಳು ವಿಕಿಪೀಡಿಯಾ ತನ್ನ 10ನೇ ವಾರ್ಷಿಕೋತ್ಸವವನ್ನು ಆಗಸ್ಟ್ 6, 2026ರಂದು ಆಚರಿಸುತ್ತಿದೆ. 2016ರಲ್ಲಿ ಆರಂಭವಾದ ತುಳು ವಿಕಿಪೀಡಿಯಾ, ಕಳೆದ ಒಂದು ದಶಕದಲ್ಲಿ ಸ್ವಯಂಸೇವಕರ ನಿರಂತರ ಶ್ರಮದಿಂದ ಗಮನಾರ್ಹ ಬೆಳವಣಿಗೆ ಸಾಧಿಸಿದೆ.

. . . . . . . . .

ಪ್ರಸ್ತುತ ತುಳು ವಿಕಿಪೀಡಿಯಾದಲ್ಲಿ 3,700ಕ್ಕೂ ಅಧಿಕ ಲೇಖನಗಳು ಲಭ್ಯವಿದ್ದು, ಭಾಷೆ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ, ಭೂಗೋಳ, ಜೀವನಚರಿತ್ರೆ, ಅರೋಗ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಚಿತ ಮಾಹಿತಿಯನ್ನು ಒದಗಿಸುತ್ತಿದೆ. ಸುಮಾರು 25 ಸಕ್ರಿಯ ಸಂಪಾದಕರು ಈ ಯೋಜನೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ತುಳು ಭಾಷೆಯ ಡಿಜಿಟಲ್ ಜ್ಞಾನ ಸಂಪತ್ತನ್ನು ವಿಸ್ತರಿಸುತ್ತಿದ್ದಾರೆ.

. . . . . . .

ಈ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸಲು ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ವತಿಯಿಂದ 2026ರ ಸೆಪ್ಟೆಂಬರ್ 12 ಮತ್ತು 13ರಂದು ವಿಶೇಷ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ವಿಕಿಮೀಡಿಯನ್ನರು, ಭಾಷಾಭಿಮಾನಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಲಿದ್ದು, ತುಳು ವಿಕಿಪೀಡಿಯಾದ ದಶಕದ ಪಯಣವನ್ನು ಸ್ಮರಿಸುವುದರೊಂದಿಗೆ ಸ್ವಯಂಸೇವಕರ ಸೇವೆಯನ್ನು ಗೌರವಿಸಲಾಗುವುದು. ಜೊತೆಗೆ, ತುಳು ಭಾಷೆಯ ವಿಕಿಮೀಡಿಯಾ ಯೋಜನೆಗಳ ಮುಂದಿನ ಬೆಳವಣಿಗೆ ಕುರಿತು ಚರ್ಚೆಗಳು ನಡೆಯಲಿವೆ.

ಕಳೆದ ಹತ್ತು ವರ್ಷಗಳಲ್ಲಿ ತುಳು ವಿಕಿಪೀಡಿಯಾ, ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿ, ಉಚಿತ ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಮಹತ್ವದ ವೇದಿಕೆಯಾಗಿ ಬೆಳೆದಿದೆ. ಈ ದಶಮಾನೋತ್ಸವವು ಇನ್ನಷ್ಟು ಹೊಸ ಸ್ವಯಂಸೇವಕರನ್ನು ಸೆಳೆಯುವ ಮೂಲಕ ತುಳು ಭಾಷೆಯ ಡಿಜಿಟಲ್ ಜ್ಞಾನ ವಿಸ್ತರಣೆಗೆ ಹೊಸ ಉತ್ತೇಜನ ನೀಡಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading