ಅನ್ಸಾರ್ ವತಿಯಿಂದ ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಇ – ತ್ಯಾಜ್ಯ ನಿರ್ವಹಣೆ ಕಾರ್ಯಾಗಾರವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ, ಕರಪತ್ರ ವಿತರಣೆ – “ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಶುಚಿತ್ವ ಕೂಡ ಅಷ್ಟೇ ಮುಖ್ಯ ಗಾಂಧೀಜಿ ಕನಸು” : ಎಂ.ಬಿ ಸದಾಶಿವ

ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ವತಿಯಿಂದ ನಡೆಯಲಿರುವ ಸ್ವಚ್ಛತಾ ಮಾಸಾಚಾರಣೆ ಅಂಗವಾಗಿ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ ತ್ಯಾಜ್ಯ ಗಳ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ಮುತ್ತು ವಿದ್ಯಾರ್ಥಿ ಗಳಿಗೆ ರಸ ಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ಸಂಸ್ಥೆ ಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ವಹಿಸಿದ್ದರು.

. . . . . . . . .

ಮುಖ್ಯ ಅತಿಥಿಗಳಾಗಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ ಮುಸ್ತಫ ವಿಷಯ ಪ್ರಸ್ತಾವನೆ ಗೈದರು. ಉಪನ್ಯಾಸ ನೀಡಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ. ಬಿ ಸದಾಶಿವ ಮಾತನಾಡಿ “ಗಾಂಧೀಜಿ ಯವರು ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಸ್ವಚ್ಛತೆ ಕೂಡ ಅಷ್ಟೇ ಮುಖ್ಯ ಎಂಬ ಪರಿಕಲ್ಪನೆಯನ್ನು ದೇಶಕ್ಕೆ ತೋರಿಸಿ ಕೊಟ್ಟವರು” ಎಂದರು. “ಇಂದಿನ ದೊಡ್ಡ ಸವಾಲು ತ್ಯಾಜ್ಯ ವಿಲೇವಾರಿ ವಿದ್ಯಾರ್ಥಿ ಜೀವನ ದಿಂದಲೇ ಇದು ಪ್ರಾರಂಭಗೊಳ್ಳಲಿ” ಎಂದು ಕರೆ ನೀಡಿದರು.

. . . . . . .

ವೇದಿಕೆಯಲ್ಲಿ ಆಂದೋಲನದ ಸಂಚಾಲಕ ಯಾಕೂಬ್ ಎಸ್ ಟಿ, ಶಾಲಾ ಸಂಯೋಜಕ ಕೆ. ಎಸ್. ಉಮ್ಮರ್, ಎಂ ಜೆ ಎಂ ಖಜಾoಚಿ ಎಸ್ ಎಂ ಅಬ್ದುಲ್ ಹಮೀದ್ ಅನ್ಸಾರ್ ಪದಾಧಿಕಾರಿಗಳಾದ ಅಬ್ದುಲ್ ಬಶೀರ್ ಸಪ್ನ,ಕಾರ್ಯಕ್ರಮ ಸಂಯೋಜಕ ಅಬ್ದುಲ್ ಮಜೀದ್ ಕೆ.ಬಿ, ಶಹೀದ್ ಪಾರೆ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ಸ್ವಾಗತಿಸಿ, ಶಿಕ್ಷಕ ರಂಜಿತ್ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading