ಏನೆಕಲ್ಲು : ಉಚಿತ ಹೊಲಿಗೆ ತರಬೇತಿ ಉದ್ಘಾಟನೆ

ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಮತ್ತು ರೈತ ಯುವಕ ಮಂಡಲ ಎನೆಕಲ್ಲು ಇವುಗಳ ಸಹಯೋಗದಲ್ಲಿ ಮಾ.19 ರಂದು ರೈತ ಯುವಕ ಮಂಡಲ ಏನೆಕಲ್ಲಿನಲ್ಲಿ ಉಚಿತ ಹೊಲಿಗೆ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ವಹಿಸಿದ್ದರು....

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದ “ವಾರ್ಷಿಕ ಜಾತ್ರಾ ಮಹೋತ್ಸವ”ದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಲ್ಕುಂದ ಶ್ರೀ ಕ್ಷೇತ್ರ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.19 ಹಾಗೂ ಏ.20ರಂದು “ವಾರ್ಷಿಕ ಜಾತ್ರಾ ಮಹೋತ್ಸವ”ವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾ.27ರಂದು ದೇವಳದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಿರಿಧರ ಸ್ಕಂದ, ಪ್ರಧಾನ ಅರ್ಚಕರಾದ ಗಣೇಶ್ ದೀಕ್ಷಿತ್ ಹಾಗೂ ಊರಿನವರು, ಭಕ್ತಾದಿಗಳು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್...
Ad Widget

ಮುಳ್ಳುಬಾಗಿಲು : ಮಾ.29 ಹಾಗೂ 30 ರಂದು “ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ”

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಎಂಬಲ್ಲಿ ಮಾ.29 ಆದಿತ್ಯವಾರ ಹಾಗೂ ಮಾ.30 ಸೋಮವಾರದಂದು “ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ”ವು ನಡೆಯಲಿದ್ದು, ಮಾ.29 ಆದಿತ್ಯವಾರದಂದು ರಾತ್ರಿ 7:00 ಗಂಟೆಯಿಂದ ಸುದರ್ಶನ ಹೋಮ, ವಾಸ್ತು ಹೋಮ, ಆವಾಹನೆ, ಭಾದಾ ಉಚ್ಚಾಟನೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ನಾಗ ದೇವರ ಸಾನ್ನಿಧ್ಯದಲ್ಲಿ ಆಶ್ಲೇಷ ಬಲಿ ಹಾಗೂ ರಾತ್ರಿ...

“ಅಮರ ಸುದ್ದಿ ವಿಶೇಷ ವರದಿ” ; ಸುಳ್ಯ ತಾಲೂಕಿನ ಬಾಳುಗೋಡು, ಮಡಪ್ಪಾಡಿ, ಅರಂತೋಡು, ಶಾಂತಿನಗರ, ಜಾಲ್ಸೂರು ಹಾಗೂ ಅಜ್ಜಾವರ ಸೇರಿದಂತೆ ಹಲವು ಕಡೆಗಳಲ್ಲಿ ಕಂಡುಬರುತ್ತಿವೆ “ಮತದಾನ ಬಹಿಷ್ಕಾರದ ಬ್ಯಾನರ್ ಗಳು” – “ಅಭಿವೃದ್ಧಿ ಇಲ್ಲದೇ ಮತವಿಲ್ಲ” ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಮತದಾರರು

ಉಲ್ಲಾಸ್ ಕಜ್ಜೋಡಿಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಇನ್ನಿತರ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ “ಮತದಾನ ಬಹಿಷ್ಕಾರದ ಕೂಗು” ಕೇಳಿಬರುತ್ತಿದ್ದು, ಜನಪ್ರತಿನಿಧಿಗಳ ವಿರುದ್ಧ ಮತದಾರರು “ಅಭಿವೃದ್ಧಿ ಇಲ್ಲದೇ ಮತವಿಲ್ಲ” ಎಂದು “ಮತದಾನ ಬಹಿಷ್ಕಾರದ ಬ್ಯಾನರ್” ಗಳನ್ನು ಅಳವಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹರಿಹರ ಪಳ್ಳತ್ತಡ್ಕ ಗ್ರಾಮದ...

ಕೇರಳಕ್ಕೆ ಅಕ್ರಮ ಗೋಸಾಗಾಟ – ಪೋಲೀಸರ ಕಾರ್ಯಾಚರಣೆ – ಮೂವರ ಬಂಧನ

ಖಚಿತ ಮಾಹಿತಿ ಪಡೆದ ಸುಳ್ಯ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ಮೂವರು ಆರೋಪಿಗಳ ಬಂಧನ - ಪಿಕಪ್ ವಾಹನ ಹಾಗೂ ಗೋವುಗಳು ವಶಕ್ಕೆ ಸುಳ್ಯದಿಂದ ಆಲೆಟ್ಟಿ ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಕುರಿತಂತೆ ಖಚಿತವಾದ ಮಾಹಿತಿ ಪಡೆದ ಸುಳ್ಯ ಪೊಲೀಸ್ ಉಪನಿರೀಕ್ಷರು ಮತ್ತು ಪೊಲೀಸ್ ಸಿಬ್ಬಂದಿಗಳು ಮೂವರನ್ನು ಬಂಧಿಸಿ, ಪಿಕಪ್ ವಾಹನ ಹಾಗೂ ಗೋವುಗಳನ್ನು ವಶಕ್ಕೆ...

ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ – ಮಾ. 30ರ ಬದಲು ಮಾ.31ರಂದು ಎಸ್.ಎಸ್.ಎಲ್.ಸಿ‌. ತೃತೀಯ ಭಾಷೆ ಪರೀಕ್ಷೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ವತಿಯಿಂದ ನಡೆದಲ್ಪಡುತ್ತಿರುವ 2025 -26ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್. ಎಲ್.ಸಿ. ವಾರ್ಷಿಕ ಪರೀಕ್ಷೆಯು ನಡೆಯುತ್ತಿದ್ದು, ಸದರಿ ವೇಳಾಪಟ್ಟಿಯ ಅನ್ವಯ ತೃತೀಯ ಭಾಷಾ ಪರೀಕ್ಷೆಯನ್ನು ಮಾ.30ರಂದು ನಡೆಸಲು ನಿರ್ಧರಿಸಲಾಗಿತ್ತು.ಆದರೆ ಸರ್ಕಾರದ ಅಧಿಸೂಚನೆಯಂತೆ ಮಾ.31ರಂದು ಮಹಾವೀರ ಜಯಂತಿಯ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜೆಯನ್ನು ಮಾ.30ರಂದು ಸಾರ್ವತ್ರಿಕ...

1ನೇ ತರಗತಿ ದಾಖಲಾತಿಗೆ ವಯಸ್ಸಿನ ಮಿತಿ ಸಡಿಲಿಕೆಗೆ ನಿರ್ಧರಿಸಿದ ಸರ್ಕಾರ ; ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿದ ಸಚಿವ ಮಧು ಬಂಗಾರಪ್ಪ

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರು ಸದನದಲ್ಲಿ ಮಾತನಾಡಿ “2026-27ನೇ ಸಾಲಿನ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 60 ದಿವಸದ ವಿನಾಯಿತಿಯನ್ನು ನೀಡಲಾಗಿದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲಿಯೂ ಬದಲಾವಣೆ ಮಾಡಲಾಗುವುದು. ಎಲ್.ಕೆ.ಜಿ, ಯು.ಕೆ.ಜಿ ದಾಖಲಾತಿಗೂ ತೊಂದರೆಯಾಗುತ್ತಿದ್ದು, ಅಲ್ಲಿಗೂ ಕೂಡಾ ಕಾನೂನನ್ನು ತರಲಾಗುವುದು” ಎಂದು ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ.

ವಳಲಂಬೆ : ಸತ್ಯನಾರಾಯಣ ದೇವರ ಪೂಜೆ, ದೈವಗಳ ನೇಮೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರಂದು ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಮಾ.25 ರಂದು ದೈವಗಳ ನೇಮೋತ್ಸವ ನಡೆಯಿತು.ಮಾ.24 ರಂದು ಗಣಪತಿ ಹೋಮ ಮತ್ತು ಶತರುದ್ರಾಭಿಷೇಕ ಹಾಗೂ 41ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ, ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ...

ಇಂದಿನ(ಮಾರ್ಚ್ 26) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 26 ಮಾರ್ಚ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮಾರ್ಚ್ 26) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-455-470ಹಳೆ ಅಡಿಕೆ...

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ಮೂವರು ವಿದ್ಯಾರ್ಥಿಗಳು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಇನ್‌ಸ್ಟೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಗಿರೀಶ್.ಕೆ( 9ನೇ) ಈತ ಮಂಡೆಕೋಲು ಗ್ರಾಮದ ಕಾಯರ್ತೋಡಿ ಭಾಸ್ಕರ ಮತ್ತು ಸೌಮ್ಯ ದಂಪತಿಗಳ ಪುತ್ರ, ವಂಶಿತಾ(8ನೇ) ಈಕೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ವಸಂತ ಮತ್ತು ಭವಾನಿ ದಂಪತಿಗಳ ಪುತ್ರಿ, ಜಸ್ಮಿತಾ.ಕೆ(10ನೇ) ಈಕೆ...
Loading posts...

All posts loaded

No more posts

error: Content is protected !!