ಕೇರಳಕ್ಕೆ ಅಕ್ರಮ ಗೋಸಾಗಾಟ – ಪೋಲೀಸರ ಕಾರ್ಯಾಚರಣೆ – ಮೂವರ ಬಂಧನ

. . . . . . . . .

ಖಚಿತ ಮಾಹಿತಿ ಪಡೆದ ಸುಳ್ಯ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

. . . . . . .

ಮೂವರು ಆರೋಪಿಗಳ ಬಂಧನ – ಪಿಕಪ್ ವಾಹನ ಹಾಗೂ ಗೋವುಗಳು ವಶಕ್ಕೆ

ಸುಳ್ಯದಿಂದ ಆಲೆಟ್ಟಿ ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಕುರಿತಂತೆ ಖಚಿತವಾದ ಮಾಹಿತಿ ಪಡೆದ ಸುಳ್ಯ ಪೊಲೀಸ್ ಉಪನಿರೀಕ್ಷರು ಮತ್ತು ಪೊಲೀಸ್ ಸಿಬ್ಬಂದಿಗಳು ಮೂವರನ್ನು ಬಂಧಿಸಿ, ಪಿಕಪ್ ವಾಹನ ಹಾಗೂ ಗೋವುಗಳನ್ನು ವಶಕ್ಕೆ ಪಡೆದ ಘಟನೆ ಮಾ.25ರಂದು ರಾತ್ರಿ ಸಂಭವಿಸಿದೆ.

ಸುಳ್ಯದಿಂದ ಮಾ.25ರಂದು ರಾತ್ರಿ ಪಿಕಪ್ ವಾಹನದಲ್ಲಿ ಆಲೆಟ್ಟಿ ಮಾರ್ಗವಾಗಿ ಕೇರಳಕ್ಕೆ ಗೋವುಗಳನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತವಾದ ಮಾಹಿತಿ ಪಡೆದ ಸುಳ್ಯ ಪೊಲೀಸರು ಸುಳ್ಯದಿಂದಲೇ ಪಿಕಪ್ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ಆಲೆಟ್ಟಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಅಡ್ಡಗಟ್ಟಿ ಪರಿಶೀಲನೆ ನಡೆಸಿದರೆನ್ನಲಾಗಿದೆ.
ಈ ವೇಳೆ ಪಿಕಪ್ ಒಳಗೆ ಮೂರು ಗೋವುಗಳನ್ನು ಹಗ್ಗದಿಂದ ಹಿಂಸೆ ನೀಡುವ ರೀತಿಯಲ್ಲಿ ಕಟ್ಟಿ ಹಾಕಿದ್ದರೆನ್ನಲಾಗಿದೆ.
ಪೊಲೀಸರು ಪಿಕಪ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಪಿಕಪ್ ನಲ್ಲಿದ್ದ ಓರ್ವ ಆರೋಪಿ ಓಡಿ ಅಲ್ಲಿಂದ ತಪ್ಪಿಸಿಕೊಂಡನೆನ್ನಲಾಗಿದೆ.
ಬಳಿಕ ಪೊಲೀಸರು ಪಿಕಪ್ ಚಾಲಕ ಕೇರಳದ ಇಸಾಕ್ ಮತ್ತು ಪಿಕಪ್ ವಾಹನವನ್ನು ಗೋವುಗಳ ಸಮೇತ ವಶ ಪಡೆದು ಸುಳ್ಯ ಠಾಣೆಗೆ ತಂದು ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.
ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿದಂತೆ ಪಿಕಪ್ ಚಾಲಕ ಇಸಾಕ್ ನನ್ನು ವಿಚಾರಣೆ ನಡೆಸಿದ ವೇಳೆ ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಹಾಗೂ ಅಮರಮುಡ್ನೂರಿನ ಮುಂಡಕಜೆ ಸಂತೋಷ್ ಭಟ್ ಎಂಬವರ ಕೈವಾಡ ಇರುವ ಮಾಹಿತಿ ತಿಳಿದು ಅವರಿಬ್ಬರೂ ಸೇರಿದಂತೆ ಮೂವರನ್ನು ಬಂಧಿಸಿ, ಕೇಸು ದಾಖಲಿಸಿರುವುದಾಗಿ ತಿಳಿದುಬಂದಿದೆ.

ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಸುಳ್ಯ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಸಿ., ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಪ್ರಕಾಶ್, ಸತೀಶ್, ಅನುಕುಮಾರ್ ಅವರು ಭಾಗಿಯಾಗಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading