ಏನೆಕಲ್ಲು : ಉಚಿತ ಹೊಲಿಗೆ ತರಬೇತಿ ಉದ್ಘಾಟನೆ

ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಮತ್ತು ರೈತ ಯುವಕ ಮಂಡಲ ಎನೆಕಲ್ಲು ಇವುಗಳ ಸಹಯೋಗದಲ್ಲಿ ಮಾ.19 ರಂದು ರೈತ ಯುವಕ ಮಂಡಲ ಏನೆಕಲ್ಲಿನಲ್ಲಿ ಉಚಿತ ಹೊಲಿಗೆ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ವಹಿಸಿದ್ದರು. ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್ ಅಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಜೀವಿತ್ ಪರಮಲೆ ಅಧ್ಯಕ್ಷರು ರೈತ ಯುವಕ ಮಂಡಲ ಎನೆಕಲ್ಲು, ಶಿವರಾಂ.ಸಿ ಉಪಾಧ್ಯಕ್ಷರು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಏನೆಕಲ್ಲು ವೇದಿಕೆಯಲ್ಲಿದ್ದರು. ರೋಟರಿ ಕ್ಲಬ್ ನ ಸದಸ್ಯರಾದ ಸುದರ್ಶನ್ ಶೆಟ್ಟಿ ಮತ್ತು ಹೊಲಿಗೆ ತರಬೇತಿ ತರಗತಿಯ ಶಿಕ್ಷಣಾರ್ಥಿಗಳು ಹಾಗೂ ಮೇಲ್ವಿಚಾರಕರು ಭಾಗವಹಿಸಿದ್ದರು.‌ 
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀಮತಿ ಸುಹಾನ ಅವರು “ತಾವು ದುಡಿದದರಲ್ಲಿ ಒಂದಿಷ್ಟು ಸಮಾಜಕ್ಕೆ ಕೊಡಬೇಕು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ಈ ಒಂದು ತರಬೇತಿ ಬಹಳ ಪ್ರಾಮುಖ್ಯವಾಗಿದೆ” ಎನ್ನುತ್ತಾ ಟ್ರಸ್ಟ್ ನ ಎಲ್ಲಾ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ಮಾತನಾಡಿ “ರೋಟರಿ ಅಂತರಾಷ್ಟ್ರೀಯ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಈ ತರಬೇತಿಯನ್ನು ಪಡೆದು ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು” ಎಂದು ಶುಭ ಹಾರೈಸಿದರು.‌ 
ಟ್ರಸ್ಟಿನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಮಾತನಾಡಿ “ರೋಟರಿ ಕ್ಲಬ್ ಸುಬ್ರಹ್ಮಣ್ಯ ನಮ್ಮ ಈ ಟ್ರಸ್ಟ್ ನ ಬೆನ್ನೆಲುಬಾಗಿ ನಿಂತಿರುವುದರ ಬಗ್ಗೆ ಶ್ಲಾಘಿಸುತ್ತಾ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂಬುದರ ಬಗ್ಗೆ ಸಾವಿತ್ರಿಬಾಯಿ ಪುಲೆಯವರು ಮಾಡಿದ ಹೋರಾಟದ ಬಗ್ಗೆ ಸ್ಮರಿಸಿಕೊಂಡರು. ಅದೇ ರೀತಿ ಮುಂದೆ ತರಬೇತಿ ಪಡೆದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಟ್ರಸ್ಟ್ ಇನ್ ಮುಂದೆ ಕೂಡ ಹೆಚ್ಚೆಚ್ಚು ಸಮಾಜ ಮುಖಿ ಕೆಲಸಗಳ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇವೆ” ಎಂದು ತಿಳಿಸಿದರು.
ಬ್ರಾಹ್ಮಿ ನೆಕ್ರಾಜೆ ಪ್ರಾರ್ಥಿಸಿದರು ಟ್ರಸ್ಟ್ ನ ಕಾರ್ಯದರ್ಶಿ ಪುನೀತ್ ಕರ್ನಾಜೆ ಸ್ವಾಗತಿಸಿ, ಟ್ರಸ್ಟಿನ ಖಜಾಂಜಿಯಾದ ನಾಗರಾಜ ಪರಮಾಲೆ ಧನ್ಯವಾದ ಸಮರ್ಪಿಸಿದರು. ವಿಜಯ್ ಕುಮಾರ್ ಆಮೈ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ನ ನಿರ್ದೇಶಕರಾದ ಭರತ್ ನೆಕ್ರಾಜೆ, ಚಂದ್ರಶೇಖರ್ ನಾಯರ್, ವಿಜಯ್ ಕುಮಾರ್ ಆಮೈ ಉಪಸ್ಥಿತರಿದ್ದರು.‌

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading