ಮುಳ್ಳುಬಾಗಿಲು : ಮಾ.29 ಹಾಗೂ 30 ರಂದು “ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ”

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಎಂಬಲ್ಲಿ ಮಾ.29 ಆದಿತ್ಯವಾರ ಹಾಗೂ ಮಾ.30 ಸೋಮವಾರದಂದು “ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ”ವು ನಡೆಯಲಿದ್ದು, ಮಾ.29 ಆದಿತ್ಯವಾರದಂದು ರಾತ್ರಿ 7:00 ಗಂಟೆಯಿಂದ ಸುದರ್ಶನ ಹೋಮ, ವಾಸ್ತು ಹೋಮ, ಆವಾಹನೆ, ಭಾದಾ ಉಚ್ಚಾಟನೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ನಾಗ ದೇವರ ಸಾನ್ನಿಧ್ಯದಲ್ಲಿ ಆಶ್ಲೇಷ ಬಲಿ ಹಾಗೂ ರಾತ್ರಿ 9:00 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಾ.30 ಸೋಮವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಗಣಹೋಮ, ಕಲಶಪೂಜೆ, ದೈವಗಳ ಪುನರ್ ಪ್ರತಿಷ್ಠೆ, ನಾಗದೇವರ ಪುನರ್ ಪ್ರತಿಷ್ಠೆ, ತಂಬಿಲಸೇವೆ ಹಾಗೂ ಮದ್ಯಾಹ್ನ 12:00 ಗಂಟೆಯಿಂದ ಪ್ರಸಾದ ವಿತರಣೆ ನಡೆದು ಮದ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆ ನಡೆಯುವುದರೊಂದಿಗೆ “ಶ್ರೀ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ”ವು ಸಂಪನ್ನಗೊಳ್ಳಲಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading