Ad Widget

ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಸಲ್ಲಿಸುವ ಸೇವೆಯು ಪರಮ ಪವಿತ್ರ –  ಸೋಮಶೇಖರ ನಾಯಕ್

ಸುಬ್ರಹ್ಮಣ್ಯ: ಉಪನ್ಯಾಸಕ ವೃತ್ತಿಯನ್ನು ಆಯ್ದುಕೊಳ್ಳುವುದು ನೈಜವಾಗಿ ಪುಣ್ಯದ ಕಾರ್ಯ.ಕುಕ್ಕೆ ದೇವಳದ ಆಡಳಿತದ ವಿದ್ಯಾಸಂಸ್ಥೆಯಲ್ಲಿ ಆರಂಭಿಕವಾಗಿ ಸೇವೆ ಸಲ್ಲಿಸಲು ದೊರಕುವ ಅವಕಾಶವು ಜೀವಿತಾವಧಿಯ ಪುಣ್ಯ ಕಾರ್ಯ.ಎಳೆಯ ವಯಸ್ಸಿನಲ್ಲಿ ಉತ್ಕೃಷ್ಠ ಮಟ್ಟದ ಬೋಧನೆ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಕರ್ತವ್ಯ ನಿರ್ವಹಿಸುವುದು ಶ್ರೇಷ್ಠ ಕಾರ್ಯ.ಇಂತಹ ಕಾರ್ಯವು ಬದುಕಿನ ವೃತ್ತಿ ಜೀವನಕ್ಕೆ ಔನತ್ಯವನ್ನು ತಂದು ಕೊಡುತ್ತದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಕಳೆದ ಮೂರು ತಿಂಗಳಿನಿಂದ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸಿ ಇತರ ಸಂಸ್ಥೆಯಲ್ಲಿ ಉದ್ಯೋಗಕ್ಕೆ ತೆರಳಲಿರುವ ಜೀವಶಾಸ್ತ ಉಪನ್ಯಾಸಕಿ ಅನುಶ್ರೀ ಅವರಿಗೆ ವಿದ್ಯಾಸಂಸ್ಥೆಯಲ್ಲಿ ಬುಧವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಕರ್ತವ್ಯ ನಿಷ್ಠೆ ಸದಾ ಗೌರವವನ್ನು ತಂದು ಕೊಡುತ್ತದೆ.ವಿದ್ಯಾರ್ಥಿಗಳ ಮನಸನ್ನು ಅರಿತುಕೊಂಡು ಜ್ಞಾನ ಬೋಧನೆ ಮಾಡಿದಾಗ ಅವರ ಪ್ರಗತಿಗೆ ದ್ಯೋತಕವಾದ ವಿದ್ಯೆ ಅವರಿಗೆ ಲಭಿಸುತ್ತದೆ ಅನ್ನುವ ಜ್ಞಾನ ಗುರುಗಳಲ್ಲಿ ಅನವರತ ಅನುರಣಿತವಾಗಿರಬೇಕು ಎಂದರು.
ಬಳಿಕ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಜಯಪ್ರಕಾಶ್ ಆರ್, ಶ್ರೀಧರ್ ಪುತ್ರನ್, ಪೂರ್ಣಿಮಾ, ಸವಿತಾ ಕೈಲಾಸ್, ಮನೋಜ್ ಕುಮಾರ್ ಬಿ.ಎಸ್, ಜ್ಯೋತಿ.ಪಿ.ರೈ , ಸೌಮ್ಯಾ ದಿನೇಶ್ ಅನುಶ್ರೀ ಅವರ ಸೇವೆಯನ್ನು ಶ್ಲಾಘಿಸಿ ಮಾತನಾಡಿದರು.
ಗೌರವಾರ್ಪಣೆ:
ಬಳಿಕ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೊಡಮಾಡಿದ ಶಾಲು, ಶ್ರೀ ದೇವರ ಬೆಳ್ಳಿಯ ಪೋಟೋ ಮತ್ತು ದೇವರ ಪ್ರಸಾದ ನೀಡಿ ಪ್ರಾಚಾರ್ಯ ಸೋಮಶೇಖರ್ ನಾಯಕ್ ಅವರು ಉಪನ್ಯಾಸಕಿ ಅನುಶ್ರೀ ಅವರನ್ನು ಸನ್ಮಾನಿಸಿ ಗೌರವಿಸುವುದರ ಮೂಲಕ ಹರಸಿದರು.
ಈ ಸಂದರ್ಭ ಉಪನ್ಯಾಸಕರಾದ ರತ್ನಾಕರ ಸುಬ್ರಹ್ಮಣ್ಯ, ಯೋಗಣ್ಣ ಎಂ.ಎಸ್, ಪ್ರವೀಣ್ ಎರ್ಮಾಯಿಲ್, ಸುಧಾ, ಸೌಮ್ಯಾ ಕೀರ್ತಿ, ಭವ್ಯಶ್ರೀ ಕುಲ್ಕುಂದ, ಸಿಬ್ಬಂಧಿಗಳಾದ ಜಯಂತಿ ಜಯಪ್ರಕಾಶ್, ಸವಿತಾ, ಸುನೀತಾ, ಮೋಹನ್, ಮಹೇಶ್ ಕೆ.ಎಚ್, ಶಶಿಧರ ಕತ್ತಿಮಲು, ಗುರುಪ್ರಸಾದ್, ಕೇಶವ ಪೆರುವಾಜೆ, ಗಿರಿಯಪ್ಪ ಮತ್ತು ಹನುಮಂತು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!