Ad Widget

‘ಸಾಂಸ್ಕೃತಿಕ ಸಂಗತಿಗಳು ಲೋಕಾನುಭವ ಹೆಚ್ಚಿಸುತ್ತವೆ’ರಂಗಮನೆ ರಂಗಸಂಭ್ರಮ ಸಮಾರೋಪದಲ್ಲಿ ಡಾ.ಬಿ.ಎ.ಕುಮಾರ ಹೆಗ್ಡೆ

    ಸೋಶಿಯಲ್ ಮೀಡಿಯಾದ ಅತಿ ಬಳಕೆ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯ. ಅಲ್ಲದೆ ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಜಾನಪದ ಮುಂತಾದುವು ನಮ್ಮ ಲೋಕಾನುಭವನ್ನು ಹೆಚ್ಚಿಸಲು ಸಹಕಾರಿ” ಎಂದು ಎಸ್.ಡಿ.ಎಂ.ಸ್ವಾಯತ್ತ ಕಾಲೇಜು ಉಜಿರೆ ಇಲ್ಲಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
     ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ನಾಲ್ಕು ದಿನಗಳ ರಂಗಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
     ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರಾದ ಎಸ್. ಅಂಗಾರ ಮಾತನಾಡಿ ‘ ಕಳೆದ 23 ವರ್ಷಗಳಿಂದ ರಂಗಮನೆಯ ಚಟುವಟಿಕೆಯನ್ನು ಗಮನಿಸುತ್ತಾ ಸ್ವತ: ಪಾಲ್ಗೊಳ್ಳುತ್ತಾ ಬಂದವನು ನಾನು. ರಂಗಮನೆಯ ಮೂಲಕ ಒಳ್ಳೆಯ ಸದಭಿರುಚಿಯ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿದ ಜೀವನ್ ರಾಂ ಅಭಿನಂದನಾರ್ಹರು. ಅವರೆಂದೂ ಪ್ರಶಸ್ತಿಗಾಗಿ ಶಿಪಾರಸ್ಸು ಕೇಳಲು ಬಂದವರಲ್ಲ. ಸುಳ್ಯದಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಒಂದು ಕಲಾ ಗ್ರಾಮವನ್ನೇ ನಿರ್ಮಾಣ ಮಾಡಬೇಕೆನ್ನುವ ಯೋಜನೆ ನಮ್ಮಲ್ಲಿದೆ’ ಎಂದರು.
       ಮುಖ್ಯ ಅತಿಥಿಯಾಗಿದ್ದ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇಲ್ಲಿನ ನೃತ್ಯ ಗುರು ವಿದ್ವಾನ್ ಚಂದ್ರಶೇಖರ ನಾವುಡರು ಮಾತನಾಡಿ ‘ ತನ್ನ ವಾಸದ ಮನೆಯನ್ನೇ  ಸಾಂಸ್ಕೃತಿಕ ತಾಣವನ್ನಾಗಿಸಿದ ಉದಾಹರಣೆ ಬೇರೆಲ್ಲೂ ಸಿಗಲಾರದು. ಇಲ್ಲಿನ ಸಮಯಪ್ರಜ್ಞೆ ಅಚ್ಚುಕಟ್ಟುತನ ಕಾರ್ಯಕ್ರಮದ ಗುಣಮಟ್ಟ ಎಲ್ಲವೂ  ಸಂಘಟಕರಿಗೆ ಮಾದರಿಯಾಗಿದೆ’ ಎಂದರು.

ರಂಗಮನೆಯ ಅಧ್ಯಕ್ಷ ಡಾ.ಜೀವನರಾಮ ಸುಳ್ಯ ಪ್ರಸ್ತಾವನೆಯೊಂದಿಗೆ  ಎಲ್ಲರನ್ನೂ ಸ್ವಾಗತಿಸಿದರು.ರವೀಶ್ ಪಡ್ಡಂಬೈಲು ವಂದಿಸಿದರು.ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿದಿನ ತುಂಬಿ ತುಳುಕಿದ ರಂಗಮನೆ

ರಂಗಸಂಭ್ರಮದ ನಾಲ್ಕು  ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗಮನೆಯ ಸಭಾಂಗಣ ಪ್ರೇಕ್ಷಕರಿಂದ ತುಂಬಿ ತುಳುಕಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಾಯಿಮರಿ ನಾಟಕ, ಮೈಸೂರು ನಟನ ತಂಡದ ಕಣಿವೆಯ ಹಾಡು ನಾಟಕ, ರಾಮಕೃಷ್ಣ ಕಾಟುಕುಕ್ಕೆಯವರಿಂದ 999 ನೇ ದಾಸ ಸಂಕೀರ್ತನೆ, ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಅಭಿನಯದ ಶೂರ್ಪಣಖಾಯನ ನಾಟಕ, ಆಳ್ವಾಸ್ ನ ಏಕಾದಶಾನನ ನಾಟಕ, ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರಿಂದ ದಶಾವತಾರ ನೃತ್ಯ ರೂಪಕ ಮುಂತಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಬಹು ಮೆಚ್ಚುಗೆಗೆ ಪಾತ್ರವಾದವು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!