Ad Widget

ಸರಕಾರಿ ಪ್ರೌಢ ಶಾಲೆ ಎಣ್ಮೂರು: ಶಾಲಾ ವಾರ್ಷಿಕೋತ್ಸವ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ರಾಮಕೃಷ್ಣ ಭಟ್ ಚೂಂತಾರು ಇವರಿಂದ ದಿಕ್ಸೂಚಿ ಭಾಷಣ

 ಎಣ್ಮೂರು ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ರಂಗಮಂದಿರ, ವೆಹಿಕಲ್ ಶೆಡ್, ಶುದ್ಧ ಕುಡಿಯುವ ನೀರಿನ ಫಿಲ್ಟರ್  ಮತ್ತು ಕೈ ತೊಳೆಯುವ ನೀರಿನ ಘಟಕ ಇದರ ಉದ್ಘಾಟನಾ ಸಮಾರಂಭ ಡಿಸೆಂಬರ್ 29ರಂದು ನಡೆಯಿತು. 

ಬಾಲ್ಯದ ಶಿಕ್ಷಣ ನಮ್ಮ ಭವಿಷ್ಯದ ಜೀವನಕ್ಕೆ ತಳಹದಿ , ಕೇವಲ ಹಣ ಅಥವಾ ಆಸ್ತಿ ಸಂಪಾದನೆಗಿಂತ ಜ್ಞಾನ ಗಳಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು. ಉತ್ತಮ ವಿದ್ಯಾರ್ಥಿಗಳಾಗಿ ದೇಶದ ಪ್ರಗತಿಗೆ ಕೈ ಜೋಡಿಸಿ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ರಾಮಕೃಷ್ಣ ಭಟ್ ಚೂಂತಾರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಮೇಶ್ ಬಿ.ಇ ರವರು ಎಣ್ಮೂರು ಪ್ರೌಢಶಾಲೆ ತಾಲೂಕಿನ ಒಂದು ಉತ್ತಮ ಪ್ರೌಢ ಶಾಲೆಯಾಗಿದ್ದು ಎಲ್ಲಾ ವಿಭಾಗಗಳಲ್ಲೂ ಮುಂದಿರುವುದು ಶ್ಲಾಘನೀಯ ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕ್ರಮದ ಅತಿಥಿಯಾಗಿದ್ದ ಶ್ರೀ ಸಚಿನ್ ರಾಜ್ ಶೆಟ್ಟಿರವರು ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ವಸಂತ ಗೌಡ ನಡುಬೈಲು ನೂತನ ರಂಗಮಂದಿರ ಉದ್ಘಾಟಿಸಿ ಶುಭ ಹಾರೈಸಿದರು.
ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಿತಾ ಸುವರ್ಣ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ , ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಲತಾ ಮತ್ತು ಶ್ರೀ ಸಚಿನ್ ರಾಜ್ ಶೆಟ್ಟಿ ಕ್ರಮವಾಗಿ ವೆಹಿಕಲ್ ಶೆಡ್, ಶುದ್ಧ ಕುಡಿಯುವ ನೀರಿನ ಫಿಲ್ಟರ್ ಮತ್ತು ಕೈ ತೊಳೆಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ಪೂದೆ ವಹಿಸಿದ್ದರು. ವೇದಿಕೆಯಲ್ಲಿ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ, ಶ್ರೀಮತಿ ಸಂಧ್ಯಾ ಕುಮಾರಿ , ಶ್ರೀ ಜಯಂತ ಕೆ , ತಾಯಂದಿರ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಯನಾ ರೈ, SDMC ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಶ್ರೀ ಲಿಂಗಪ್ಪ ಬೆಳ್ಳಾರೆ ಶಾಲಾ ವಾರ್ಷಿಕ ವರದಿ ವಾಚಿಸಿದರು.ಹಿರಿಯ ಶಿಕ್ಷಕಿ ಶ್ರೀಮತಿ ಕವಿತಾ ಡಿ.ಎಂ ಅತಿಥಿಗಳನ್ನು ಪರಿಚಯಿಸಿದರು . ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಸ್ವಾಗತಿಸಿ, ಶ್ರೀಮತಿ ಉಷಾ ಕೆ ಎಸ್ ಮತ್ತು ಶ್ರೀ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀ ಮೋಹನ ಗೌಡ, ಶ್ರೀಮತಿ ದಿವ್ಯಾ ಎಂ.ಕೆ. ಶ್ರೀಮತಿ ಗುಣಶ್ರೀ, ಶ್ರೀ ರಾಮಚಂದ್ರ ಗೌಡ ಪಿ.ಎನ್, ಶ್ರೀಮತಿ ರೂಪಲತಾ ಮತ್ತು ಕುಮಾರಿ ಪ್ರೇಮಲತಾ ಸಹಕರಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!