ನಾಲ್ಕೂರು ಗ್ರಾಮದ ಮರಕತ ಕುಡಿಯುವ ನೀರಿನ ಡ್ಯಾಮ್ ನಲ್ಲಿ ಮಳೆಗಾಲದಲ್ಲಿ ಬೃಹತ್ತಾದ ಮರಗಳು ಬಂದು ತುಂಬಿಕೊಂಡಿದ್ದು, ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ತೆರವುಗೊಳಿಸಿದ್ದು, ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ, ಪ್ರತಿನಿಧಿ ಸತೀಶ್, ಸ್ವಯಂಸೇವಕರಾದ ಕಾರ್ತಿಕ್, ಲೋಹಿತ್, ಅಶ್ವಥ್, ಪ್ರಜ್ವಲ್, ದೀಪಕ್, ಶೇಷಪ್ಪ ನಾಯ್ಕ್, ಚಂದ್ರಶೇಖರ, ಭರತ್, ಕರುಣಾಕರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಸರ್ ಪಂಚಾಯತ್ ಸದಸ್ಯರಾದ ವಿಜಯಕುಮಾರ್ ಚಾರ್ಮತ, ಹರೀಶ್ ಕ್ಯೊಲ ಭೇಟಿ ನೀಡಿದರು.