ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇವುಗಳ ಸಹಯೋಗದಲ್ಲಿ ದಿನಾಂಕ 24 ಮತ್ತು 25 ನವಂಬರ್ 2023 ರಂದು ಎರಡು ದಿನಗಳ ಕಾಲ ಸ್ಕೌಟ್ ಗೈಡ್ ,ಕಬ್ ಬುಲ್ ಬುಲ್ ಹಾಗೂ ರೋವರ್ ರೇಂಜರ್ ವಿದ್ಯಾರ್ಥಿಗಳ ವಾರ್ಷಿಕ ಮೇಳವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಆಯೋಜಿಸಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ಅಭ್ಯಾಗತರಾಗಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್, ಸ್ಕೌಟ್ ಗೈಡ್ಸ್ ಜಿಲ್ಲಾ ನೋಡಲ್ ಅಧಿಕಾರಿ ಡಯಟ್ ಉಪನ್ಯಾಸಕರಾದ ಶ್ರೀ ಪೀತಾಂಬರ ಕೆ, ಕುಕ್ಕೆ ಶ್ರೀ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಂಗಯ್ಯ ಶೆಟ್ಟಿಗಾರ್, ಸ್ಕೌಟ್ ರಾಷ್ಟ್ರೀಯ ತರಬೇತುದಾರ ಶ್ರೀ ಗುರುಮೂರ್ತಿ ನಾಯ್ಕಾಪು, ಸ್ಕೌಟ್ ಗೈಡ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ ಭಾಗವಹಿಸಿ ಶುಭ ಹಾರೈಸಿದರು.
ಎಸ್ ಎಸ್ ಪಿ ಯು ಕಾಲೇಜು ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಶಿರಾಡಿ, ಸ್ಕೌಟ್ ಗೈಡ್ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ವಿಮಲಾ ರಂಗಯ್ಯ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಮೇಳದ ಸಂಯೋಜಕ ಶ್ರೀ ಪ್ರವೀಣ್ ಮುಂಡೋಡಿ, ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಹೇಮಳ, ಶ್ರೀ ಸೋಮಶೇಖರ ನೆರಳ, ಶ್ರೀ ಬಾಲಕೃಷ್ಣ ರೈ ಬಿರ್ಕಿ ಉಪಸ್ಥಿತರಿದ್ದರು.
ಎಸ್ ಎಸ್ ಪಿ ಯು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೋಮಶೇಖರ್ ನಾಯಕ್ ಸ್ವಾಗತಿಸಿ, ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಾಧವ ಬಿ ಕೆ ವಂದಿಸಿದ ಈ ಉದ್ಘಾಟನಾ ಕಾರ್ಯಕ್ರಮವನ್ನು ಸ್ಕೌಟ್ ಶಿಕ್ಷಕಿ ಸುಜಯಶ್ರೀ ಮತ್ತು ಶಿಕ್ಷಕಿ ಶುಭಾ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಉದಯಕುಮಾರ್ ರೈ ಎಸ್ ಇವರನ್ನು ಸನ್ಮಾನಿಸಲಾಯಿತು.
ಧ್ವಜ ವಂದನೆಯಿಂದ ಆರಂಭಗೊಂಡು
ಗುಡಾರ ತಯಾರಿ, ಗ್ಯಾಜೆಟ್ ರಚನೆ, ಗೂಡು ದೀಪ ತಯಾರಿ, ಗಾಳಿಪಟ ತಯಾರಿ, ಕೊಲಾಜ್ ರಚನೆ, ಕರಕುಶಲ ವಸ್ತು ತಯಾರಿ, ಪೇಪರ್ ಕ್ರಾಫ್ಟ್ ಈ ಚಟುವಟಿಕೆಗಳನ್ನು ನಡೆಸಲಾಯಿತು.
ಸಾಹಸಮಯ ಚಟುವಟಿಕೆಗಳಾದ ಮೇರಿಗೂ ರೌಂಡ್, ವಾಚ್ ಟವರ್, ಸೋಲ್ಜರ್ ನೆಟ್, ಮೊನೋಪೋಲ್ ಟವರ್, ಬ್ಯಾಲೆನ್ಸ್ ವಾಕ್, ಟ್ರಿ ಟವರ್, ಕಮಾಂಡೋ ಬ್ರಿಜ್, ಜೋಕಾಲಿ, ಟೈಯರ್ ವಾಲ್, ಹ್ಯಾಂಗಿಂಗ್ ಬ್ರಿಜ್ ಇವುಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು.
ಮನೋರಂಜನೆಯ ಆಟಗಳಾದ ನೀರು ಮತ್ತು ಬಳೆ, ಗೂಟಕ್ಕೆ ರಿಂಗ್ ತೊಡಿಸುವುದು, ಬಾಟಲಿಗೆ ನೀರು ತುಂಬಿಸುವುದು, ಮೂರು ಕಾಲಿನ ಓಟ, ಗೋಣಿಚೀಲ ಓಟ, ಹಾಳೆ ಆಟ, ಚಮಚ ಮತ್ತು ನಿಂಬೆ ಮೊದಲಾದವುಗಳಲ್ಲಿ ಭಾಗವಹಿಸಿ ಖುಷಿ ಪಟ್ಟರು.
ಸಂಜೆ ಎಲ್ಲ ಶಿಬಿರಾರ್ಥಿಗಳು ನಗರ ಮೆರವಣಿಗೆ ಹೊರಟರು. ಈ ನಗರ ಮೆರವಣಿಗೆಯನ್ನು ಸುಬ್ರಹ್ಮಣ್ಯದ ಸಬ್ ಇನ್ಸ್ಪೆಕ್ಟರ್ ಶ್ರೀ ಕಾರ್ತಿಕ್ ಕೆ ಉದ್ಘಾಟಿಸಿದರು.
ಸಂಜೆ ನಡೆದ ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿನ ಸದಸ್ಯ ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಸೌಮ್ಯ ಭಾಗವಹಿಸಿ ಶುಭ ಹಾರೈಸಿದರು ಹಾಗೂ ಅನುಗ್ರಹ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್ ಶಿಬಿರಾಗ್ನಿಯನ್ನು ಉದ್ಘಾಟಿಸಿದರು. ಬಳಿಕ ಎಸ್ ಎಸ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಹಾಗೂ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಪ್ರಸ್ತುತಗೊಂಡವು. ಶಿಬಿರಾಗ್ನಿ ಕಾರ್ಯಕ್ರಮವನ್ನು ರೇಷ್ಮಾ ಬಂಗ್ಲೆಗುಡ್ಡೆ, ಸಹನಾ ಬಾಳಿಲ ನಿರೂಪಿಸಿದರು.
ಮರುದಿನ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಎಸ್ ಎಸ್ ಪಿ ಯು ಕಾಲೇಜಿನ ಉಪನ್ಯಾಸಕರಾದ ಶ್ರೀ ಪ್ರಜ್ವಲ್ ಜೆ, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ಉಮರ್ ಖಾನ್, ಸ್ಕೌಟ್ ಶಿಕ್ಷಕರಾದ ಶ್ರೀ ನೆಲ್ಸನ್ ಕ್ಯಾಸ್ಟಲಿನೋ ಭಾಗವಹಿಸಿ ಅವರವರ ಧರ್ಮದ ಸಾರವನ್ನು ಶಿಬಿರಾರ್ಥಿಗಳ ಮುಂದೆ ಹಂಚಿಕೊಂಡರು.
ಮಧ್ಯಾಹ್ನ ನಡೆದ ಸಮರೂಪ ಸಮಾರಂಭವು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಸ್ಕೌಟ್ ಗೈಡ್ ಕಾರ್ಯದರ್ಶಿ ಎಂಜಿ ಕಜೆ ಸಮಾರೋಪ ಭಾಷಣಗೈದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವೆಂಕಟೇಶ್ ಎಚ್ ಎಲ್, ರಾಜ್ಯ ಗೈಡ್ಸ್ ಸಂಘಟನಾ ಆಯುಕ್ತರಾದ ಶ್ರೀಮತಿ ಮಂಜುಳಾ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ, ವಿಟಿಯು ಬೆಳಗಾವಿಯ ಪ್ರಾಂತೀಯ ನಿರ್ದೇಶಕರಾದ ಡಾ. ಶಿವಕುಮಾರ್ ಹೊಸಳಿಕೆ, ಬಳ್ಪ ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಸಂತೋಷ್ ಕುಮಾರ್ ರೈ, ಸುಳ್ಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಕುಮಾರಿ,ಸುಳ್ಯ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ತೀರ್ಥರಾಮ ಎಚ್, ಕೆಎಸ್ಎಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ತುಕಾರಾಮ ಯೇನೇಕಲ್ಲು, ಅನುಗ್ರಹ ಕನ್ ಸ್ಟ್ರಕ್ಷನ್ ಮಾಲಕ ಡಾ. ರವಿ ಕಕ್ಕೆಪದವು, ಸಂಸ್ಥೆ ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್ ಭಾಗವಹಿಸಿ ಸ್ಕೌಟ್ ಗೈಡ್ಸ್ ಚಟುವಟಿಕೆಗಳ ನ್ನು ಪ್ರಶಂಶಿಸಿದರು. ಶಿಕ್ಷಕರಕ್ಷಕ ಸಮಿತಿಯ ಅಧ್ಯಕ್ಷ ದಿನೇಶ್ ಶಿರಾಡಿ, ಸಂಯೋಜಕ ಪ್ರವೀಣ್ ಮಂಡೋಡಿ, ಸಾಹಸಮಯ ಚಟುವಟಿಕೆಯ ರೂವಾರಿ ದಾಮೋದರ ನೆರಳ, ಸಹಾಯಕ ಕಾರ್ಯದರ್ಶಿ ಶಿವಪ್ರಸಾದ್ ಜಿ ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರ ನಿರ್ದೇಶಕ ಸುಬ್ರಹ್ಮಣ್ಯ ಕೆಎನ್ ಎರಡು ದಿನಗಳ ಸಮಗ್ರ ವರದಿಯನ್ನು ಸಭೆ ಮಂದಿಟ್ಟರು. ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎರಡು ದಿನದ ವಾರ್ಷಿಕ ಮೇಳದ ಅನುಭವಗಳನ್ನು ಹಂಚಿಕೊಂಡರು.
ವಿಮಲ ರಂಗಯ್ಯ ಸ್ವಾಗತಿಸಿ ಕಾರ್ಯದರ್ಶಿ ಉದಯಕುಮಾರ್ ರೈ ವಂದಿಸಿದರು. ಸುಜಯಶ್ರೀಬೆಳ್ಳಾರೆ ಮತ್ತು ಶುಭ ಬಾಳಿಲ ನಿರೂಪಿಸಿದರು.
262 ಸ್ಕೌಟ್ಸ್ 233 ಗೈಡ್ಸ್ 15 ಬುಲ್ ಬುಲ್ 9 ಕಬ್ಸ್ ಹಾಗೂ 78 ರೋವರ್ ರೇಂಜರ್ಸ್ ಮತ್ತು 41ಸ್ಕೌಟ್ಸ್ ಗೈಡ್ ಶಿಕ್ಷಕರು ಒಟ್ಟು 638 ಮಂದಿ ಭಾಗವಹಿಸಿದ್ದರು.
ಸ್ಕೌಟ್ ಶಿಕ್ಷಕ ಸತೀಶ್, ಗೈಡ್ ಶಿಕ್ಷಕಿ ಸ್ಮಿತಾ ಹಾಗೂ ರೇಂಜರ್ ಲೀಡರ್ ಸವಿತಾ ಶಿಬಿರ ನಾಯಕರುಗಳಾಗಿ ಸಹಕರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ,
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು,ಉಪನ್ಯಾಸಕರು, ಸಹಶಿಕ್ಷಕರು ಶಿಕ್ಷಕರಕ್ಷಕ ಸಮಿತಿ, ಪೋಷಕ ವೃಂದ ಹಾಗೂ ವಿದ್ಯಾರ್ಥಿಗಳು ವಾರ್ಷಿಕ ಮೇಳದ ಯಶಸ್ಸಿಗೆ ಸಹಕರಿಸಿದರು.
ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ ಶಿಕ್ಷಕರು ಶಿಬಿರ ಸಹಾಯಕರಾಗಿ ವಾರ್ಷಿಕ ಮೇಳದ ಸಂಯೋಜನೆಯಲ್ಲಿ ಸಹಕರಿಸಿದರು. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರೋವರ್ ರೇಂಜರ್ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರೋವರ್ ರೇಂಜರ್ ವಿದ್ಯಾರ್ಥಿಗಳು ಪಯೋನಿಯರಿಂಗ್ ಪ್ರೊಜೆಕ್ಟಗಳನ್ನು ಸಿದ್ಧಪಡಿಸುವುದರೊಂದಿಗೆ ವಾರ್ಷಿಕ ಮೇಳದುದ್ದಕ್ಕೂ ಸ್ವಯಂಸೇವಕರಾಗಿ ಸಹಕರಿಸಿದರು.