Ad Widget

ಎನ್ ಎಸ್ ಎಸ್ ಸೇವಾಸಂಗಮದಿಂದ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಸುಳ್ಯದ ಕುರಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ (ರಿ.) ಇದರ ವತಿಯಿಂದ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಲಾಯಿತು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು...

ಮೀಟರ್ ನುಗ್ಗೆಕಾಯಿ

ನುಗ್ಗೆಕಾಯಿ ಎಂಬ ಕ್ಷಣ ನಮಗೆ ಅದರ ಔಷಧೀಯ ಗುಣಗಳು ನೆನಪಿಗೆ ಬರುತ್ತದೆ ಹಾಗೆ ನುಗ್ಗೆ ಸೊಪ್ಪಿನಲ್ಲಿ ರಕ್ತಹೀನತೆಗೆ ಒಳ್ಳೆಯ ಔಷಧಿ ಕ್ಯಾಲ್ಸಿಯಂ ವಿಟಮಿನ್ ಎ ವಿಟಮಿನ್ ಇ ಪೊಟ್ಯಾಷಿಯಂ ಲೈಂಗಿಕ ಕಾಯಿಲೆಗಳಿಗೆ ನುಗ್ಗೇಕಾಯಿ ರಾಮಬಾಣ ನುಗ್ಗೆಕಾಯಿಯನ್ನು ತಿನ್ನುವುದರಿಂದ ಏನಾಗುತ್ತದೆ ಸಿಡುಬು ಬರುವುದಿಲ್ಲ ಮೂಳೆಗಳ ಬಲ ಹೆಚ್ಚುತ್ತದೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಮದುಮೇಹಿಗಳಿಗೆ ಉತ್ತಮಚೋಟುದ್ದ ವಿದ್ದ ನುಗ್ಗೆಕಾಯಿ...
Ad Widget

ಕನಕಮಜಲು : ಸ್ವಚ್ಛತಾ ಕಾರ್ಯ

ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ ಕನಕಮಜಲು  ಹಾಗೂ ಗ್ರಾಮ ಪಂಚಾಯತ್ ಕನಕಮಜಲು  ಇದರ ಸಹಯೋಗದಲ್ಲಿ ಅ. 1ರಂದು ಕೇಂದ್ರ ಸರಕಾರದ "ಸ್ವಚ್ಛತಾ ಹಿ ಸೇವಾ"  ಎಂಬ ವಿಶೇಷ ಆಂದೋಲನದ ಅಂಗವಾಗಿ ಕನಕಮಜಲು ಗ್ರಾಮ  ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆ ನಡೆಸಲಾಯಿತು. ಸ್ವಚ್ಛತೆ ಕಾರ್ಯದಲ್ಲಿ ಯುವಕಮಂಡಲದ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು, ಹಾಗೂ ಇನ್ನಿತರ...

ಪಂಜದಲ್ಲಿ ಸಮುದಾಯ ಆಸ್ಪತ್ರೆಗಾಗಿ ಗಾಂಧಿ ಜಯಂತಿಯಂದೆ ಉಪವಾಸ ಸತ್ಯಾಗ್ರಹ

ಪಂಜದಲ್ಲಿ ಇರುವ ಏಕೈಕ ಸಮುಚ್ಚಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಸಮುದಾಯ ಆಸ್ಪತ್ರೆಯನ್ನಾಗಿ ದಿನದ 24 ಗಂಟೆಯೂ ಸೇವೆಯನ್ನು ಒದಗಿಸುವಂತೆ ಮಾಡಲು ಪಂಜ ಗಾಂಧಿ ವಿದ್ಯಾಪೀಠದ ವತಿಯಿಂದ ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಪಂಜ ಗಾಂಧಿ ವಿದ್ಯಾಪೀಠದ ಅಧ್ಯಕ್ಷ ಪುರುಷೋತ್ತಮ ಮುಡೂರು ಅವರು ಮಾತನಾಡಿ" ಇಲ್ಲಿ ಈಗಾಗಲೇ ಆರೋಗ್ಯ ಸಮುಚ್ಚಯ ಆಸ್ಪತ್ರೆ ಇದ್ದು ದಿನದ 24...

ಕಮಿಲದಿಂದ ಗುತ್ತಿಗಾರು ವರೆಗೆ ಸ್ವಚ್ಚತಾ ಕಾರ್ಯ

ಗಾಂಧಿ ಜಯಂತಿ ಅಂಗವಾಗಿ ಕಮಿಲದಿಂದ ಗುತ್ತಿಗಾರು ವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಗ್ರಾ.ಪಂ.ಸದಸ್ಯರು, ಅಂಗನವಾಡಿ, ಆಶಾ ಕಾರಗಯಕರ್ತೆಯರು, ಗ್ರಾಮಸ್ಥರು, ಸ್ಥಳೀಯ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ನೆಲ್ಲೂರು ಕೆಮ್ರಾಜೆ :  ಸ್ವಚ್ಚತಾ ಕಾರ್ಯ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿಯವರ ಜನ್ಮ ದಿನದ ಪ್ರಯುಕ್ತ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಅ.1 ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರು , ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಲ್ಲುಗುಂಡಿ : ಸ್ವಚ್ಚತಾ ಕಾರ್ಯ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಲಯನ್ಸ್ ಕ್ಲಬ್ ಜಂಟಿ ಅಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಸರ್ವರನ್ನು ಸ್ವಾಗತಿಸಿದರು....

ಅರಂತೋಡು : ಗಾಂಧಿ ಜಯಂತಿ ಆಚರಣೆ ಹಾಗೂ ಯೋಧ ನಮನ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯತ್ ಸುಳ್ಯ, ಆರಂತೋಡು ಗ್ರಾಮ ಪಂಚಾಯತ್ ಮತ್ತು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಸಹಯೋಗದಲ್ಲಿ ಅರಂತೋಡು ಅಮೃತ ಸಭಾ ಭವನದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹಿ ಸೇವಾ ವಿಶೇಷ ಗ್ರಾಮ ಸಭೆ ಹಾಗೂ ಯೋಧ ನಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ...

ಹಿರಿಯ ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ – ಅ.07 ರಂದು ಪ್ರಶಸ್ತಿ ಪ್ರದಾನ

ವರದಿ : ಉಲ್ಲಾಸ್ ಕಜ್ಜೋಡಿ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತಿಗೆ ಅನುಗುಣವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ಕಳೆದ 50 ವರ್ಷಗಳಿಂದ ಸಮಾಜಿಕ ಕಳಕಳಿಯಿಂದ ನಡೆಸಿಕೊಂಡು ಬರುತ್ತಿರುವವರು, ವಾಹನ ಸಂಚಾರವಿಲ್ಲದ ಕಾಲಘಟ್ಟದಲ್ಲಿ ತನ್ನ ಬೈಕಿನಲ್ಲಿ ರೋಗಿಗಳ ಮನೆಗೆ ತೆರಳಿ ಶುಶ್ರೂಷೆ ನೀಡುತ್ತಾ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದ್ದ ಸಮಯದಲ್ಲಿ ಜನರಿಗೆ ಅರಿವು-ನೆರವು-ಚಿಕಿತ್ಸೆಯನ್ನು...

ಸಂಪಾಜೆ: ಸ್ವಚ್ಚತಾ ಕಾರ್ಯಕ್ರಮ

ಸಂಪಾಜೆ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಗಾಂಧಿಜೀ ಜಯಂತಿ ಪ್ರಯುಕ್ತ ಸ್ವಚತಾ ಕಾರ್ಯಕ್ರಮ ನಡೆಯಿತು. ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಅರ್ಚನಾ ರವರ ನೇತೃತ್ವ ದಲ್ಲಿ ಸ್ವಚತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ಆರೋಗ್ಯ ಕಾರ್ಯಕರ್ತೆಯರು     ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯರು, ಭಾಗವಹಿಸಿದ್ದರು.
Loading posts...

All posts loaded

No more posts

error: Content is protected !!