ಸುಳ್ಯ ರಥಬಿದಿಯಿಂದ ಕೆರೆಮೂಲೆ ತೆರಳುವ ರಸ್ತೆಯಲ್ಲಿ ಇದೀಗ ಕೊಳಚೆ ನೀರು ಹರಿಯುತ್ತಿದೆ . ತಾಲೂಕಿನಾದ್ಯಾಂತ ಎಲ್ಲೆಡೆ ವೈರಲ್ ಫಿವರ್ ಬರುತ್ತಿದ್ದು ಈ ಕುರಿತಂತೆ ಆರೋಗ್ಯ ಇಲಾಖೆ ಮನೆ ಮನೆ ತೆರಳಿ ನೀರು ನಿಲ್ಲದಂತೆ ಶುಚಿತ್ವದ ಬಗ್ಗೆ ಮಾಹಿತಿ ನೀಡುತ್ತಿದೆ. ಆದರೆ ತಾಲೂಕು ಆಡಳಿತ ಹಾಗೂ ಎಲ್ಲಾ ಇಲಾಖೆಗಳು ಇಲ್ಲೆ ಇದ್ದರೂ ಸುಳ್ಯದ ಚರಂಡಿ ಸಮಸ್ಯೆಯ ಕುರಿತಾಗಿ ಯಾರು ಗಮನಹರಿಸುತ್ತಿಲ್ಲ.
ಸುಳ್ಯದ ನಗರ ಪಂಚಾಯತ್ ಸ್ವಚ್ಚತೆಗೆ ಬಹಳಷ್ಟು ಆದ್ಯತೆಯನ್ನು ನೀಡುತ್ತಿದೆ ಎಂದು ಹೇಳುತ್ತಿದೆ. ಆದರೇ ರಥಬೀದಿಯಲ್ಲಿನ ಚರಂಡಿ ನೀರು ಕೆರೆಮೂಲೆ ತಿರುಗುವ ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆಯಲ್ಲಿ ಶಾಲಾ ಅದೇ ಕೊಳಚೆ ನೀರಿನ ಮೇಲೆ ನಡೆಯುವಂತಾಗಿದೆ. ಇಲ್ಲಿನ ಈ ಸಮಸ್ಯೆಗಳಿಗೆ ಯಾವುದೇ ಪರಿಹಾರವನ್ನು ಒದಗಿಸಿಲ್ಲ ನಗರಾಡಳಿತ. ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಆಡಳಿತ ಇನ್ನಾದರು ಎಚ್ಚೆತ್ತು ಮುಂದೆ ಉಂಟಾಗಲಿರುವ ಅನಾಹುತಗಳನ್ನು ಮನಗಂಡು ಆದಷ್ಟು ಬೇಗ ಸರಿಪಡಿಸಬೇಕಿದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಿದೆ.