ಆಲೆಟ್ಟಿ ಗ್ರಾಮದ ಅರಂಬೂರು ಮುಖ್ಯ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದನ್ನು ಸ್ಥಳೀಯ ಗ್ರಾ.ಪಂ.ಸದಸ್ಯರಾದ ಸುಧೀಶ್ ಅರಂಬೂರು ಇವರ ನೇತೃತ್ವದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿಸಿದ್ದರು. ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಕವರ್ ನಲ್ಲಿ ತಂದು ಸುರಿದಿದ್ದು ಅದರಲ್ಲಿ ಅವರ ಹೆಸರು ಇದೆ ಅವೆಲ್ಲವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ತಿಂಗಳುಗಳೇ ಮೂರು ಕಳೆದರು ಇನ್ನು ಕ್ರಮ ಜರುಗಿಸಿಲ್ಲ ಹಾಗೂ ಯಾವುದೇ ದಂಡವನ್ನು ಕೂಡ ಹಾಕಿಲ್ಲ. ಇದರ ಬಗ್ಗೆ ಕಳೆದ ನಾಲ್ಕು ತಿಂಗಳಿನ ಹಿಂದೆ ಸಾಕ್ಷಿ ನೀಡಿದ್ದರೂ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಸ್ವಚ್ಛ ಭಾರತದ ಕಡೆಗೆ ಗಮನಹರಿಸುವುದನ್ನು ಬಿಟ್ಟು ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ ಅಲ್ಲವೇ. ಕಳೆದ ಎರಡು ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಎಲ್ಲಾ ಸದಸ್ಯರು ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಧರಿಸಿರುತ್ತಾರೆ.ಆದರೇ ಆಲೆಟ್ಟಿ ಪಂಚಾಯತ್ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿರುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಸುಧೀಶ್ ಅರಂಬೂರು ಅಮರ ಸುದ್ದಿಗೆ ತಿಳಿಸಿದ್ದಾರೆ.
- Thursday
- November 21st, 2024