
ಸುಳ್ಯದ ಓಡಬಾಯಿಯಲ್ಲಿ ಅದೈತ ಹುಂಡೈ ಚತುಶ್ಯಕ್ರ ವಾಹನದ ಶೋರೂಂ ಆ. 18ರಂದು ಧನಲಕ್ಷ್ಮೀ ಪೂಜೆ, ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು. ಆ. 17ರಂದು ಸಂಜೆ ವಾಸ್ತುಹೋಮ ಮತ್ತು ಸುದರ್ಶನ ಹೋಮ ನೆರವೇರಿತು. ಈ ಶುಭಸಂದರ್ಭದಲ್ಲಿ ಸಂಸ್ಥೆಯ
ಸರ್ವಿಸ್ ವಿಭಾಗದ ಮುಖ್ಯಸ್ಥರಾದ ಶಶಿಕಾಂತ್ ಶೆಟ್ಟಿ, ಮಾರಾಟ ವಿಭಾಗದ ಮುಖ್ಯಸ್ಥರಾದ ಶಿವಪ್ರಸಾದ್, ಮಂಗಳೂರು ವಿಭಾಗದ ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಸುಳ್ಯ ಸೇಲ್ಸ್ ಮತ್ತು ಸರ್ವಿಸ್ ವಿಭಾಗದ ಮುಖ್ಯಸ್ಥರಾದ ಸುರೇಶ್ ವಿ.ಆರ್ ಮತ್ತು ನವನೀತ್ ಬಿ.ಎಂ. ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.