
ಶ್ರೀ ವಾಣಿ ವನಿತಾ ಸಮಾಜ(ರಿ) ಸುಬ್ರಮಣ್ಯ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಸುಳ್ಯ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ (ರಿ) ಸುಬ್ರಮಣ್ಯ, ಅಂಬಿಕಾ ಗೊಂಚಲು ಸಮಿತಿ ಸುಬ್ರಮಣ್ಯ (ಸ್ತ್ರೀಶಕ್ತಿ), ಅಂಗನವಾಡಿ ಕೇಂದ್ರ ಸುಬ್ರಮಣ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮವನ್ನು ಸುಬ್ರಮಣ್ಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಇದರ ಅಧ್ಯಕ್ಷ ವಿಶ್ವನಾಥ ನಡುತೋಟ ಚೆನ್ನೆಮಣೆ ಆಡುವುದರ ಮೂಲಕ ಉದ್ಘಾಟಿಸಿ, ಮಾತನಾಡಿದರು. ವೇದಿಕೆಯಲ್ಲಿ ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಪಿ. ದಾಮ್ಲೆ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತಿ ಒಕ್ಕೂಟದ ಅಧ್ಯಕ್ಷ ಸುಜಾತ ಗಣೇಶ್, ಪಂಚಾಯತ್ ಉಪಾಧ್ಯಕ್ಷೆ ಸವಿತಾ ಭಟ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಶಾಲಾಕ್ಷಿ, ಶ್ರಿ ವಾಣಿ ವನಿತಾ ಸಮಾಜದ ಅಧ್ಯಕ್ಷ ಹೇಮಾವತಿ, ವೇದಿಕೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀದೇವಿ,ಜಯಲಕ್ಷ್ಮಿ ಪಿ ಎಸ್, ಹರಿಣಾಕ್ಷಿ, ಶೀಲಾ ,ಪೂರ್ಣಿಮಾ, ವಿಜಯ ಕಲ್ಲೂರಾಯ, ಜಯಂತಿ, ಪರಮೇಶ್ವರಿ ,ಸುಶೀಲ, ಶಶಿಕಲಾ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ (ಅಂಗನವಾಡಿ) ಯಶೋದಾ, ಚಂದ್ರಿಕಾ ,ಶರಣ್ಯ ,ಮೋಹಿನಿ, ನಾಗಮ್ಮ ,ಜಯಂತಿ (ಆಶಾ ಕಾರ್ಯಕರ್ತೆ) ಮೊದಲಾದವರು ಹಾಜರಿದ್ದರು.
ಶ್ರೀ ವಾಣಿ ವನಿತಾ ಸಮಾಜದ ಅಧ್ಯಕ್ಷೆ ಹೇಮಾವತಿ ಸ್ವಾಗತಿಸಿ ಕಾರ್ಯದರ್ಶಿ ಪುಷ್ಪ ರವರು ವಂದನಾರ್ಪಣೆ ನಡೆಸಿದರು. ಸವಿತಾ ಭಟ್ ಮತ್ತು ಕುಸುಮ ಭಟ್ ಪ್ರಾರ್ಥನೆಯನ್ನು ನೆರವೇರಿಸಿದರು. ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಶೋಭ ನಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯ ಕ್ರಮದಲ್ಲಿ ಮಹಿಳೆಯರಿಗೆ ಆಟಿ ಅಡುಗೆ, ದೇಶ ಭಕ್ತಿ ಗೀತೆ, ಜಾನಪದ ಗೀತೆ , ಚೆನ್ನೆಮಣೆ ಸ್ಪರ್ದೆ, ನಡೆಸಿ ಬಹುಮಾನ ವಿತರಿಸಲಾಯಿತು .


