

ಸೇವಾಜೆ ಶ್ರೀಕೃಷ್ಣ ಸಾಂಸ್ಕ್ರತಿಕ ಸೇವಾ ಸಮಿತಿ ಇದರ ನೂತನ ಪದಾಧಿಕಾರಿಗಳನ್ನು ಆ.13 ರಂದು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಕ್ಷಿತ್ ಪಟ್ಟೆ, ಕಾರ್ಯದರ್ಶಿಯಾಗಿ ಮೋಹನ ಹೊನ್ನೆಮೂಲೆ ಉಪಾಧ್ಯಕ್ಷರಾಗಿ ಹಿತೇಶ್ ಬೊಮ್ಮೆಟ್ಟಿ, ಉಪ ಕಾರ್ಯದರ್ಶಿಯಾಗಿ ರೋಹಿತ್ ಮಂಜೊಳ್ಕಜೆ ಇವರುಗಳನ್ನು ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಶ್ರೀ ಕೃಷ್ಣನ ಫೋಟೋವನ್ನು ಹಸ್ತಾಂತರ ಮಾಡುವ ಮೂಲಕ, ಸಾಂಕೇತಿಕವಾಗಿ ಜವಾಬ್ದಾರಿಯ ವರ್ಗಾವಣೆ ಮಾಡಲಾಯಿತು.