Ad Widget

ಸುಳ್ಯ ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್ ವತಿಯಿಂದ ಅಖಂಡ ಭಾರತ ಸಂಕಲ್ಪದೊಂದಿಗೆ ದೊಂದಿ ಮೆರವಣಿಗೆ .

. . . . . . .

ಅಖಂಡ ಭಾರತ ನಿರ್ಮಾಣ ಸಂಕಲ್ಪದೊಂದಿದೆ ಸುಳ್ಯ ನಗರದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ವತಿಯಿಂದ ಪಂಜಿನ ಮೆರವಣಿಗೆ ಹಾಗು ಸಭಾ ಕಾರ್ಯಕ್ರಮವು ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಪಂಜಿನ ಮೆರವಣಿಗೆಯು ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಗಾಂಧಿನಗರಕ್ಕೆ ತೆರಳಿ ಅಲ್ಲಿಂದ ಚೆನ್ನಕೇಶವ ದೇವಾಲಯದ ವರೆಗೆ ಮೆರವಣಿಗೆ ನೂರಾರು ಸಂಖ್ಯೆಯ ಕಾರ್ಯಕರ್ತರ ಪಂಜು ಹಿಡಿದು ನಡೆದರು. ಸಭಾಕಾರ್ಯಕ್ರಮವನ್ನು ನಿವೃತ್ತ ಸೈನಿಕ ಲೋಕೇಶ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತುಗಳನ್ನಾಡುತ್ತಾ ದೇಶವನ್ನು ಮೂರು ಭಾಗಗಳಾಗಿ ಮಾಡಿದೆ ಅಖಂಡ ಭಾರತ ನಿರ್ಮಾಣಮಾಡುವ ದೃಷ್ಟಿಯಿಂದ ನಾವು ಈ ಸಂಕಲ್ಪವನ್ನು ಮಾಡುತ್ತಾ ಬರುತ್ತಾ ಇದ್ದೇವೆ ಪಂಜು ಹಿಡಿದು ನಡೆದ ತಕ್ಷಣ ಅಖಂಡ ಭಾರತ ಅಸಾಧ್ಯ ಎಂದು ಕಳಂಕಿತ ಕಟ್ಟಡ ಕಳಚಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವುದು ನಮ್ಮ ಸೌಭಾಗ್ಯ ಇದೇ ರೀತಿಯಲ್ಲಿ ಮುಂದಡಿಯಿಟ್ಟರೆ ಭಾರತದ ಪುಣ್ಯ ಮಣ್ಣುಗಳಿಂದ ಬೇರ್ಪಟ್ಟ ಕೋಡಲೇ ಬದಲಾಗಿ ಹೋಯ್ತು ಬ್ರಿಟಿಷರು ಭಾರತವನ್ನು ಅನಕ್ಷರಸ್ತರು ಎಂದು ಕರೆದಿದ್ದರು ಎಂದು ಪ್ರಾಸ್ತವಿಕ ಮತ್ತು ಸ್ವಾಗತ ಮಾತುಗಳಲ್ಲಿ ಸಂದೀಪ್ ವಳಲಂಬೆ ಹೇಳಿದರು.

ಉದ್ಘಾಟಕರ ಮಾತುಗಳಲ್ಲಿ ಬಯತ್ಪೋದನೆ ಕಾಲಕಾಲಕ್ಕೆ ಬಣ್ಣ ಬದಲಾವಣೆ ಮಾಡುತ್ತದೆ ಪುಲ್ವಾಮ ದಾಳಿಯ ಸಂದರ್ಭದಲ್ಲಿ ನನು ಇದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ ಮುಂದೆ ಇಂತಹ ಘಟನೆಗಳು ಆಗಬಾರದು ಇದಕ್ಕೆ ತಕ್ಕ ಉತ್ತವನ್ನು ಭಾರತದ ಸೇನೆ ನೀಡಲಿದೆ ಎಂದು ನಿವೃತ್ತ ಸೈನಿಕ ಲೋಕೇಶ್ ಇರಂತಮಜಲು ಹೇಳಿದರು.

ಕಾರ್ಯಕ್ರಮದ ದಿಕ್ಸೂಚಿ ಮಾತುಗಳಲ್ಲಿ ಸುಳ್ಯದ ವೀರ ಸ್ವಾತಂತ್ರ್ಯ ಹೊರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪರಂಪರೆ ಹಾಗೂ ಸುಳ್ಯದ ಹೋರಾಟದ ಕುರಿತು ಹೇಳಿದರು , ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಇಸ್ಲಾಂ ಧರ್ಮದವರಿಗೆ ಪಾಕಿಸ್ತಾನ ನೀಡುತ್ತಾರೆ ದೇಶ ಪಿತಮಹರಾಗಿ ಮಹತ್ಮಾ ಗಾಂಧಿಯವರನ್ನು ಘೋಷಣೆ ಮಾಡಲಾಗುತ್ತೆ ಎಂದು ಸ್ವಾತಂತ್ರ್ಯ ಸಂದರ್ಭದಲ್ಲಿನ ಸಾವು ನೋವುಗಳ ಕುರಿತಾಗಿ ಮಾತನಾಡಿದರು , ಸೈನಿಕರಿಗೆ ದೇಶ ಭಾಗವಾದ ಮೇಲೆ ಯಾವ ರೀತಿಯಲ್ಲಿ ದಾಳಿಮಾಡುತ್ತೆ, ಅವಮಾನ ಮಾಡಲಾಗುತ್ತೆ ಎಂಬುವುದನ್ನು ಬಿಡಿಬಿಡಿಯಾಗಿ ಎಳೆಎಳೆಯಾಗಿ ಹೇಳಿದರು . ಸಂಘದ ಕಾರ್ಯಕರ್ತರು ಕಾಲಿಗೆ ಚಪ್ಪಲಿ ಹಾಗದೇ ನಡೆದು ಸಂಘಟಿಸಿದ ಕಾರಣ ಇಂದು ಹಿಂದು ಸಮಾಜ ಮತ್ತು ಭಾರತ ತಲೆ ಎತ್ತಿ ನಡೆಯುವಂತಾಗಿದೆ . ಶಿಕ್ಷಣ ಪಡೆದವನು ಕೊಲೆ , ಅತ್ಯಚಾರ ಮಾಡಿದ್ದಾರೆ ಅವರು ಬರೇ ಶಿಕ್ಷಣ ಪಡೆದಿದ್ದಾರೆ ಅಷ್ಟೇ ಆದರೆ ಒಬ್ಬ ಸಂಘದ ಶಿಕ್ಷಣ , ಸಂಸ್ಕಾರ ಪಡೆದವನು ಯಾವತ್ತು ಕೂಡ ಅಂತಹ ದುಷ್ಕೃತ್ಯಗಳ ಕೆಲಸಗಳು ಮಾಡುವುದಿಲ್ಲಾ ಎಂದರು , ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಜಿಹಾದಿಗಳಿಂದ ರಕ್ಷಿಸಲು ದುರ್ಗಾ ವಾಹಿನಿಯಂತಹ ಪರಿವಾರ ಸಂಘಟನೆಗಳಲ್ಲಿ ಶಿಕ್ಷಣ ನೀಡಬೇಕು ಎಂದು ಶಿವಪ್ರಸಾದ್ ಮಲೆಬೆಟ್ಟು ಹೇಳಿದರು.

ಸಭಾ ವೇದಿಕೆಯಲ್ಲಿ ಸುಳ್ಯ ವಿಶ್ವಹಿಂದು ಪರಿಶತ್ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕಾ , ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ , ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ , ಯುವ ಮೋರ್ಚ ಮುಖಂಡ ಸುನೀಲ್ ಕೇರ್ಪಳ್ಳ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಸ್ಪಮೇದಪ್ಪ , ನಗರ ಪಂಚಾಯತ್ ಸದಸ್ಯರಾದ ವಿನಯ್ ಕುಮಾರ್ ಕಂದಡ್ಕ, ಗೋಪಾಲ್ , ಭಾನುಪ್ರಕಾಶ್ , ಹರೀಶ್ ಬೂಡುಪನ್ನೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!