
ಎ.ಕೆ.ಸಿಂಗ್ ಅಡಿಷನಲ್ P.C.C.F IFS ಅರಣ್ಯ ಭವನ ಬೆಂಗಳೂರು ರವರು ಇಂದು ಸುಳ್ಯ ರಬ್ಬರ್ ಪ್ಲಾಂಟೇಶನ್ ಮತ್ತು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .ಈ ಸಂದರ್ಭದಲ್ಲಿ ತೋಟ ತೊಳಿಲಾಲರ್ ಸಂಘ ಸುಳ್ಯ T.T.S. ಕಾರ್ಮಿಕ ಸಂಘದ ಅಧ್ಯಕ್ಷರು ಚಂದ್ರಲಿಂಗಮ್ ಮತ್ತು ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಕಾರ್ಮಿಕರ ಇ.ಎಸ್.ಐ ಸೌಲಭ್ಯದ ಬಗ್ಗೆ ಮತ್ತು ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಬಗ್ಗೆ ಅವರಲ್ಲಿ ಚರ್ಚಿಸಿದರು. ಅಲ್ಲದೇ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತಂದಿದ್ದು ಈ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.