8/08/23 ರಂದು ಜರುಗಿದ 22-23 ನೇ ವರ್ಷದ ಪ್ರಥಮ ಗ್ರಾಮಸಭೆಯು ದೊಡ್ಡೇರಿ ಶಾಲೆಯ ಅನುದಾನ ಮತ್ತು ಕೆಲ ಇಲಾಖಾಧಿಕಾರಿಗಳ ಗೈರು ಹಾಜರಿಯಾದ ಹಿನ್ನಲೆಯಲ್ಲಿ ಗ್ರಾಮ ಸಭೆಯನ್ನು ಮುಂದೂಡಲಾಗಿದ್ದು. ದೊಡ್ಡೇರಿ ಶಾಲೆಗೆ ಅನುದಾನವು ಆರ್ಥಿಕ ವರ್ಷ ಅಂತ್ಯದ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್ ಅಂಗಾರರವರ ಆದೇಶದನ್ವಯ ಮಳೆ ಹಾನಿ ಪರಿಹಾರದಲ್ಲಿ ನನ್ನ ಮನವಿಗೆ ಸ್ಪಂದಿಸಿ 7 ಲಕ್ಷ ಅನುದಾನವನ್ನು ಅವರು ನೀಡಿದ್ದು ಆದಾದ ಬಳಿಕ ಎಂಜಿನಿಯರ್ ಗಳು ಬಂದು ನೋಡಿ ಇದರ ಬಳಿಕ ನಮ್ಮ ದೊಡ್ಡೇರಿ ಶಾಲೆಗೆ ಅನುದಾನ ಬಂದಿದ್ದು ಅದು ವರ್ಷಾಂತ್ಯವಾದ ಕಾರಣ ಸರಕಾರಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಇಂಜಿನಿಯರಿಂಗ್ ವಿಭಾಗ ನಮ್ಮ ಪಂಚಾಯತ್ ಖಾತೆಗೆ ಜಮೆ ಮಾಡಿದ್ದರು ಅದು ನಮಗೆ ತಿಳಿದಿದ್ದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಸುಳ್ಯ ತಾಲೂಕು ಕಛೇರಿಯಲ್ಲಿ ಇದ್ದ ಕಾರಣ ನಾವು ಗಮನಿಸಿದ್ದು ಅವರು ಕಛೇರಿಯ ಕೆಲಸಕ್ಕೆ ಹಾಜರಾದ ಬಳಿಕ ಆ ನಂತರ ನಾವು ಇದನ್ನು ಶೀಘ್ರವಾಗಿ ಟೆಂಡರ್ ಮಾಡಲು ಹೇಳಿದ್ದೆವೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಕೆಲಸ ಕಾರ್ಯಗಳು ಮಾಡಲು ಆಗುವುದಿಲ್ಲಾ ಹಾಗಾಗಿ ಟೆಂಡರ್ ಮತ್ತು ಕಾಮಾಗಾರಿ ಮಾಡಲು ಅಗಿಲ್ಲಾ ಆ ನಂತರ ನಾವು ಹಣವನ್ನು ಇಂಜಿನಿಯರಿಂಗ್ ವಿಭಾಗಕ್ಕೆ ಮರುಪಾವತಿ ಮಾಡುವ ಸಂದರ್ಭದಲ್ಲಿ ನಾವು ಅವರ ಮನವಿ ಮೇರೆಗೆಯೇ ನೀಡಿದ್ದು ಈ ಸಂದರ್ಭದಲ್ಲಿ ಸರಕಾರ ಬದಲಾಗಿ ಹೊಸ ಟೆಂಡರ್ ಗಳಿಗೆ ಅನುಮತಿ ಇಲ್ಲದ ಕಾರಣ ಈಗಲು ಈ ಸಮಸ್ಯೆ ಇದೆ ಸರಕಾರ ಆದಷ್ಟು ಬೇಗ ಟೆಂಡರ್ ಮಾಡಲು ಅನುಮತಿ ನೀಡಿದಲ್ಲಿ ಶಾಲೆಯ ಕಟ್ಟಡ ರಚನೆ ಕೆಲಸ ಪ್ರಾರಂವವಾಗಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ತಿಳಿಸಿದ್ದಾರೆ.
- Friday
- November 1st, 2024