Ad Widget

ಬೊಳುಬೈಲು : ಶ್ರೀ ಮಹಾವಿಷ್ಣು ಮೂರ್ತಿ ಗ್ರಾನೈಟ್ಸ್ ಶುಭಾರಂಭ

ಜಾಲ್ಸೂರು ಗ್ರಾಮ ಬೊಳುಬೈಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಮಾಲಕತ್ವದ ಶ್ರೀ ಮಹಾವಿಷ್ಣುಮೂರ್ತಿ ಗ್ರಾನೈಟ್ಸ್ ಫೆ. 23 ರಂದು ಶುಭಾರಂಭಗೊಂಡಿದೆ. ಇಲ್ಲಿ ವಿವಿಧ ದರ್ಜೆಯ ಗ್ರಾನೈಟ್ ಗಳು ಲಭ್ಯವಿದೆ ಎಂದು ಮಾಲಕರಾದ ಬಬ್ಲು ತಿಳಿಸಿದ್ದಾರೆ.

ಫೆ. 25 ರಂದು ಗುತ್ತಿಗಾರಿನಲ್ಲಿ ರಕ್ತದಾನ ಶಿಬಿರ

ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಫೆ. 25ರಂದು ಬೆಳಿಗ್ಗೆ 10ರಿಂದ ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರಿನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.
Ad Widget

ಹರಿಹರ ಪಲ್ಲತ್ತಡ್ಕ :- ಹರಿಹರೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಪನ್ನ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಿತು.ಫೆ.20 ರಂದು ಬೆಳಿಗ್ಗೆ 9:00 ಗಂಟೆಯಿಂದ ಹಸಿರು ಕಾಣಿಕೆ ಪ್ರಾರಂಭ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ,...

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ ಗೌರವಧನ ನೀಡಿದ ಗ್ರಾ.ಪಂ.ಸದಸ್ಯರು

ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಫೆ.20 ರಂದು ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಮತ್ತು ಶ್ರೀಮತಿ ಮಾಲಿನಿ ವಿನೋದ್ ಕುಮಾರ್ ಉಳುವಾರು ಮಲ್ಲಡ್ಕ ಇವರು ತಮ್ಮ ಎರಡು ತಿಂಗಳ ಗೌರವಧನ ನೀಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬಾಬು ಮಡಿವಾಳ ತಳೂರು ನಿಧನ

ದೇವಚಳ್ಳ ಗ್ರಾಮದ ತಳೂರು ಹಲಸಿನಡ್ಕ ಬಾಬು ಮಡಿವಾಳ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.19 ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಹಲವಾರು ವರ್ಷಗಳಿಂದ ಗ್ರಾಮದ ದೈವ ಹಾಗೂ ದೇವರ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪುತ್ರರಾದ ಪದ್ಮನಾಭ, ತೀರ್ಥರಾಮ, ಪುತ್ರಿ ಭಾರ್ಗವಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ನೂತನ ಆಡಳಿತ ಮಂಡಳಿ ರಚನೆ : ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ- ಉಪಾಧ್ಯಕ್ಷ ಸುರೇಶ್ ಕಣೆಮರಡ್ಕ

ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಫೆ. 11 ರಂದು ಮೀನುಗಾರಿಕಾ ಸಚಿವರಾದ ಎಸ್. ಅಂಗಾರರವರ ಸುಳ್ಯದ ಕಛೇರಿಯಲ್ಲಿ ನಡೆದ ಸಭೆಯಲ್ಲಿ "ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್” ಇದರ ನೂತನ ಆಡಳಿತ ಮಂಡಳಿಯ ರಚನೆ ನಡೆಯಿತು. ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳಾಗಿ 11 ಜನರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್‌ ಕುಮಾರ್‌ ಮೇನಾಲ, ಉಪಾಧ್ಯಕ್ಷರಾಗಿ...

ಮಾ.05: ಮೂಲೆಮಜಲು ದೋಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ

ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಕಾಲಾವಧಿ ನಡೆಯುವ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವವು ಮಾ.05ರಂದು ನಡೆಯಲಿದೆ. ನೇಮೋತ್ಸವದ ಅಂಗವಾಗಿ ಮಾ.04ರಂದು ಪೂರ್ವಾಹ್ನ ಗಂಟೆ 10.00ಕ್ಕೆ ನಾಗತಂಬಿಲ ಹಾಗೂ ರಕ್ತೇಶ್ವರಿ ದೈವದ ತಂಬಿಲ ನಡೆಯಲಿದೆ. ರಾತ್ರಿ ಗಂಟೆ 9.00ಕ್ಕೆ ಪಾಷಾಣಮೂರ್ತಿ ಹಾಗೂ ಕೊಡಮಣಿತ್ತಾಯ ದೈವದ ನೇಮ ನಡೆಯಲಿದೆ. ಮಾ.05ರಂದು ಪೂರ್ವಾಹ್ನ ಗಂಟೆ 10.00ಕ್ಕೆ ಬ್ರಹ್ಮರ ಉತ್ಸವ, ಸಂಜೆ...

ಬಂದಡ್ಕ : ಪಾಲಾರ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಶುಭಾರಂಭ

ಡಾ| ಶರಣ್ಯ ಅಖಿಲೇಶ್ ಭಟ್ ಪಾಲಾರ್ ಮಾಲಕತ್ವದ ನೂತನ ಡೆಂಟಲ್ ಕ್ಲಿನಿಕ್ ಬಂದಡ್ಕದ ಜಬಲ್ ನೂರ್ ಕಾಂಪ್ಲೆಕ್ಸ್ ನಲ್ಲಿ ಫೆ.14 ರಂದು ಶ್ರೀ ಗಣಪತಿ ಹವನ ಹಾಗೂ ಶ್ರೀ ಧನಲಕ್ಷ್ಮಿ ಪೂಜಾ ವಿಧಿಯೊಂದಿಗೆ ಶುಭಾರಂಭಗೊಂಡಿತು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾ| ಮುರಳಿ ಮೋಹನ್ ಚೂಂತಾರು ಮಾತನಾಡಿ ವೈದ್ಯರುಗಳಿಗೆ ಕೇವಲ ನೋವನ್ನು ಶಮನ...

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶಿಕ್ಷಕ ಗುರುರಾಜ್ ನ್ಯಾಯಾಲಯಕ್ಕೆ ಶರಣು

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಆರೋಪದಲ್ಲಿ ನ್ಯಾಯಾಲಯದಿಂದ ಬಂಧನ ವಾರೆಂಟ್ ಗೊಳಗಾಗಿ ತಲೆಮರೆಸಿಕೊಂಡಿದ್ದ ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಗುರುರಾಜ್ ಇಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ಮಾಡಿದ ಆರೋಪಕ್ಕೊಳಗಾಗಿ ಬಂಧನಕ್ಕೊಳಗಾಗಿದ್ದು, ಒಂದೇ ದಿನದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಅದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯ ಮನೆಯವರು ಹೈಕೋರ್ಟ್ ಮೊರೆ ಹೋಗಿ ಆರೋಪಿಯ...

ಶುಭವಿವಾಹ: ಮುರಳಿಕೃಷ್ಣ-ಸತ್ಯವತಿ(ಸರಿತಾ)

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಮೋಹನಕುಮಾರ ಗೌಡರ ಸುಪುತ್ರ ಚಿ|ರಾ|ಮುರಳಿಕೃಷ್ಣ ಅವರ ವಿವಾಹವು ಕಡಬ ತಾಲೂಕು ಎಡಮಂಗಲ ಗ್ರಾಮದ ನಾಗನಕಜೆ ಶ್ರೀಮತಿ ಉಮಾವತಿ ಮತ್ತು ಶ್ರೀ ನಾರ್ಣಪ್ಪ ಗೌಡರ ಸುಪುತ್ರಿ ಚಿ|ಸೌ|ಸತ್ಯವತಿ(ಸರಿತಾ) ರೊಂದಿಗೆ ಫೆ.21ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!