- Friday
- November 22nd, 2024
ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಿಂದ ಫೆ.18ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಫೆ.12 ಶನಿವಾರದಂದು ರಾತ್ರಿ 8.00ಕ್ಕೆ ಧ್ವಜಾರೋಹಣ ನಡೆಯಲಿದ್ದು ನಂತರ ಬಲಿ ಹೊರಟು ಉತ್ಸವ,...
ಕೈಗಾರಿಕೀಕರಣದ ಈ ಸಂದರ್ಭದಲ್ಲಿ ನಮ್ಮ ಹಿರಿಯರು ಹಾಡುತ್ತಿದ್ದ ಪಾಡ್ದನಗಳು ಇಂದು ಸಮಾಜದಿಂದ ಮರೆಯಾಗುತ್ತಾ ಇದೆ. ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ನಾವೆಲ್ಲ ಕೈ ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಾಪಿತಗೊಂಡ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇಂದು ಅರ್ಥಪೂರ್ಣವಾಗಿ ಉದ್ಘಾಟನೆಗೊಂಡಿದೆ. ಎಂದು ಸ.ಪ.ಪೂ. ಕಾಲೇಜು ಪಂಜದ ಪ್ರಭಾರ ಪ್ರಾಂಶುಪಾಲ ಶ್ರೀ ವೆಂಕಪ್ಪ ಕೇನಾಜೆ ಹೇಳಿದರು. ಅವರು ಜ.21ರಂದು ಕಡ್ಲಾರುವಿನಲ್ಲಿ...
ಸುಳ್ಯ ನಾಗಪಟ್ಟಣದ ನಿವಾಸಿ 64 ವರ್ಷ ಪ್ರಾಯದ ರಾಧಾ ಎಂಬ ಮಹಿಳೆ ಮೂತ್ರಪಿಂಡದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಚಿಕಿತ್ಸೆ ಮಾಡಬೇಕಾಗಿರುತ್ತದೆ. ಈ ಬಡ ಜೀವಕ್ಕೆ ವಾರ್ಷಿಕವಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮೊತ್ತದ ಹಣ ಖರ್ಚಾಗುತ್ತಿದ್ದೂ, ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ರಾಧಾ ರವರು ಚಿಕಿತ್ಸೆಗೆಂದು ದಾನಿಗಳ ನೆರವು ನಿರೀಕ್ಷೆಯಲ್ಲಿದ್ದಾರೆ....
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಫೆ.06ರಂದು ದೊಡ್ಡಿಹಿತ್ಲು ಕುಟುಂಬದವರಿಂದ ಶ್ರಮಸೇವೆ ನಡೆಯಿತು.
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಫೆ.06ರಂದು ಕಾಯಾರ ಕಲ್ಲೇರಿತ್ತಾಯ ಮಾಡದಲ್ಲಿ ಭಗವದ್ಭಕ್ತರಿಂದ ಶ್ರಮಸೇವೆ ನಡೆಯಿತು.
ಅರಂತೋಡು ಗ್ರಾಮ ಪಂಚಾಯತ್ ನ ಅಡ್ತಲೆ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಅಂಗಾರರವರು ಫೆ.5 ರಂದು ಚಾಲನೆ ನೀಡಿದರು. ರೂಪಾಯಿ 20.00 ಲಕ್ಷ ಅನುದಾನದ ಪಿಂಡಿಮನೆ - ಅರಮನೆಗಯ ರಸ್ತೆಯ ಕಾಂಕ್ರಿಟೀಕರಣ, ರೂಪಾಯಿ 22.50 ಲಕ್ಷ ಅನುದಾನದಲ್ಲಿ ಪಿಂಡಿಮನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಆಣೆಕಟ್ಟು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ರೂಪಾಯಿ 7.00 ಲಕ್ಷ ಅನುದಾನದಲ್ಲಿ...
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಇಂದು(ಫೆ.05) ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ರಾತ್ರಿ ದೇವಳದಲ್ಲಿ ದೀಪೋತ್ಸವ, ಮಹಾಪೂಜೆ ನಡೆಯಿತು. ಬಳಿಕ ಶ್ರೀ ದೇವರ ಬಲಿ ಹೊರಟು ವಸಂತಕಟ್ಟೆ ಪೂಜೆ, ಕಾಜುಕುಜುಂಬ ಹಾಗೂ ಶಿರಾಡಿ ದೈವಗಳ ನರ್ತನ ಸೇವೆ ನಡೆದು ಶ್ರೀ ದೇವರ ಉತ್ಸವ...
ಸುಳ್ಯ ಬಿಜೆಪಿಯ ಹಿರಿಯ ಮುತ್ಸದ್ದಿ ,ಆದರ್ಶ ಕಾರ್ಯಕರ್ತ ಆರ್ ಉಮೇಶ್ ವಾಗ್ಲೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.5 ರಂದು ಸುಳ್ಯ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ "ಎಂದಿಗೂ ಅಚ್ಚಾಗಿ ಉಳಿಯುವಂತೆ ಮಾಡಿದ ಸಾಧಕ ಹಾಗೂ ಸಮಾಜದ ಮೇಲಿನ ಜವಾಬ್ದಾರಿಯಿಂದ ಸಂಘಟನೆಯ...
ಗುತ್ತಿಗಾರು ಗ್ರಾಮದ ವಳಲಂಬೆ ಕುವೆಕೋಡಿ ನಿವಾಸಿ ಶೂರಪ್ಪ ಟೈಲರ್ ಅವರ ಪುತ್ರ ಜಗದೀಶ್ (30) ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.4 ರಂದು ನಿಧನರಾದರು. ಮೃತರು ತಂದೆ, ತಾಯಿ ಮನೋರಮ, ಪತ್ನಿ ಲಾವಣ್ಯ, ಪುತ್ರಿ ಜ್ಞಾನ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್ ಕೋನಡ್ಕಪದವು ಅಚ್ಚುತ ಪಾಟಾಳಿ (47ವರ್ಷ) ಹಸಿ ಮೀನು ವ್ಯಾಪಾರ ಮಾಡುತ್ತಿದ್ದು ಇವರಿಗೆ ಮಾರಕ ಬಾಯಿಯ ಕ್ಯಾನ್ಸರ್ ಬಾಧಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಪ್ರಥಮ ಶಸ್ತ್ರಚಿಕಿತ್ಸೆಯು ನಡೆಸಿದ್ದು ತುರ್ತು ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುವುದಾಗಿ ಆಸ್ಪತ್ರೆಯಿಂದ ತಿಳಿಸಿರುತ್ತಾರೆ. ಮುಂದಿನ ಚಿಕಿತ್ಸಾ ಖರ್ಚು ಅಂದಾಜು 5 ಲಕ್ಷ ಬರಬಹುದು. ಸದ್ಯ...
Loading posts...
All posts loaded
No more posts