Ad Widget

ಫೆ.18 : ಆಲೆಟ್ಟಿಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ- ಆಲೆಟ್ಟಿ ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದಂದು 10ನೇ ವರುಷದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬೆಳ್ಳಾರೆ : ರಬ್ಬರ್ ಸಾಗಾಟದ ಲಾರಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಮೃತ್ಯು

ಬೆಳ್ಳಾರೆ ಸಮೀಪದ ಪಂಜಿಗಾರು ತಿರುವಿನಲ್ಲಿ ರಬ್ಬರ್ ಸಾಗಾಟದ ಲಾರಿ ಭೀಕರ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ಚಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ವೆಲ್ಲೂರು ನಿವಾಸಿ ಮುರುಗೇಶನ್.ಡಿ ಎಂದು ಗುರುತಿಸಿದ್ದು, ಮೃತ ವ್ಯಕ್ತಿಗೆ ಸುಮಾರು 40 ವರ್ಷ ವಯಸ್ಸಾಗಿತ್ತು ಎಂದು ಅಮರಸುದ್ದಿಗೆ...
Ad Widget

ಸುಬ್ರಹ್ಮಣ್ಯ : ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರಿಗೆ ಸನ್ಮಾನ

ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಾರ್ಕಳದ ಉದಯವಾಣಿ ವರದಿಗಾರ ಬಾಲಕೃಷ್ಣ ಭೀಮಗುಳಿಯವರಿಗೆ ಸುಬ್ರಹ್ಮಣ್ಯದಲ್ಲಿ ಫೆ.15 ರಂದು ಸನ್ಮಾನ ಕಾರ್ಯಕ್ರಮ ನಡೆಯಿತು.ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲಾ ವಿಭಾಗ ಇದರ ವತಿಯಿಂದ ವಲ್ಲೀಶ ಸಭಾಭವನದಲ್ಲಿ ನಿವೃತ್ತ ಪ್ರಾಂಶುಪಾಲರು, ಸಿಬಂದಿಗಳಿಗೆ ವಿದಾಯ, ಸನ್ಮಾನ ಕಾರ್ಯಕ್ರಮ, ದತ್ತಿನಿಧಿ ವಿತರಣೆ ಕಾರ್ಯಕ್ರಮದಲ್ಲಿ...

ಬೆಳ್ಳಾರೆ : ರಬ್ಬರ್ ಸಾಗಾಟದ ಲಾರಿ ಭೀಕರ ಅಪಘಾತ- ಚಾಲಕ ಗಂಭೀರ

ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ರಬ್ಬರ್ ಸಾಗಾಟದ ಲಾರಿ ಭೀಕರ ಅಪಘಾತವಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರ್ ಎಂಬಲ್ಲಿ ಫೆ.15ರಂದು ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿ ಪಂಜಿಗಾರು ಎಂಬಲ್ಲಿ ಪಲ್ಟಿಯಾಗಿದೆ.ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ರಬ್ಬರ್ ಎಲ್ಲಾ ಕಡೆ...

ಕುಲ್ಕುಂದ : ಮಾ. 2 ರಿಂದ 4 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕುಲ್ಕುಂದದಲ್ಲಿ ಇದೇ ಬರುವ ದಿನಾಂಕ 02-03-2022ರ ಬುಧವಾರದಂದು ಕೊರತಿ ದೈವದ 7ನೇ ವರ್ಷದ ನೇಮೋತ್ಸವ ಹಾಗೂ 03-03-2022ನೇ ಗುರುವಾರದಿಂದ 04-03-2022ನೇ ಶುಕ್ರವಾರದವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 53ನೇ ವರ್ಷದ ಒತ್ತೆಕೋಲ ನಡೆಯಲಿದ್ದು, ಮೊದಲನೇ ದಿನವಾದ 02-03-2022ನೇ ಬುಧವಾರದಂದು ರಾತ್ರಿ 7:30 ರಿಂದ ಶ್ರೀ ಕೊರತಿ ದೈವದ ನಡಾವಳಿ ಹಾಗೂ ರಾತ್ರಿ 9:30...

ಶ್ರಾವ್ಯ ಶೇಡಿಕಜೆ ಎಂ.ಬಿ.ಬಿ.ಎಸ್ ಗೆ ಆಯ್ಕೆ

2021-22ನೇ ಸಾಲಿನ ಮೆಡಿಕಲ್ ಕೋರ್ಸ್ ಗೆ ನಡೆಸುವ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಶ್ರಾವ್ಯ ಶೇಡಿಕಜೆಯವರು ಎಂ.ಬಿ.ಬಿ.ಎಸ್ ಕೋರ್ಸ್ ಗೆ ಆಯ್ಕೆಯಾಗಿರುತ್ತಾರೆ. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಈಕೆ ರಾಷ್ಟ್ರೀಯ ಕರಾಟೆ ಹಾಗೂ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಭಾಗವಹಿಸಿರುತ್ತಾರೆ. ಸಾಂಸ್ಕೃತಿಕವಾಗಿ ನೃತ್ಯ, ಸಂಗೀತ, ಭಾಷಣ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಇವರು ಗಳಿಸಿರುತ್ತಾರೆ. 'ಇಂಡಿಯನ್ ಇನ್‌ಸ್ಟಿಟ್ಯೂಟ್...

ಭಕ್ತಿ, ಸಡಗರದ ಕಾಂಚೋಡು ಜಾತ್ರೋತ್ಸವ ಸಂಪನ್ನ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದು ಫೆ.14ರಂದು ಸಂಪನ್ನಗೊಂಡಿತು. ಜಾತ್ರೋತ್ಸವದ ಅಂಗವಾಗಿ ಫೆ.11ರಂದು ಸಂಜೆ ತಂತ್ರಿಗಳವರ ಆಗಮನದ ಬಳಿಕ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇವರಿಂದ ಚೆಂಡೆವಾದನದೊಂದಿಗೆ ಹಸಿರುವಾಣಿಯನ್ನು...

ಗುತ್ತಿಗಾರು : ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ.ಸಿ. ಟ್ರಸ್ಟ್ ಗುತ್ತಿಗಾರು ವಲಯದ ಗುತ್ತಿಗಾರಿನಲ್ಲಿ ಗ್ರಾಹಕ ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇವತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಲ್ಯಾಪ್ ಟಾಪ್ ಹಸ್ತಾಂತರಿಸಿದರು. ವಲಯ ಮೇಲ್ವಿಚಾರಕ ಮುರಳೀಧರ ರವರು ಸರಕಾರದ ಹಾಗೂ ಯೋಜನೆ ಕಾರ್ಯಕ್ರಮಗಳ...

ಸುಳ್ಯ : ಸೌಭಾಗ್ಯ ವಿಕಲಚೇತನರ ಸಹಕಾರ ಸಂಘದ ಸದಸ್ಯರ ಪ್ರಥಮ ಸಭೆ

ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಸುಳ್ಯ ಇದರ ಸರ್ವಸದಸ್ಯರ ಸಭೆ ಫೆ.10 ರಂದು ಸುಳ್ಯದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುಖ್ಯ ಪ್ರವರ್ತಕ ಬಾಲಚಂದ್ರ ( ಭರತ್) ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯು ಸೂಚನ ಪತ್ರದ ನಿಯಮಗಳ ಪ್ರಕಾರ ನಡೆದು ನಿಬಂಧಕರು ಅನುಮೋದಿಸಿದ ಉಪನಿಯಮಗಳು, ನೊಂದಾವಣಿ ಪ್ರಮಾಣ ಪತ್ರದ ಕುರಿತು ಹಾಗೂ ನೋಂದಾವಣೆ ಮುನ್ನ ಹೊಂದಿದ...

ಐವರ್ನಾಡು: ಕ್ರಿಕೆಟ್ ಪಂದ್ಯಾಟ

ಐವರ್ನಾಡಿನ ಮಾಡತ್ತಕಾನ ಸ್ಪೋಟ್ಸ್ ಕ್ಲಬ್ ಇದರ ಸಹಕಾರದೊಂದಿಗೆ, ಐಪಿಎಲ್ ಸಮಿತಿ ಇದರ ಆಶ್ರಯದಲ್ಲಿ ಆರನೇ ವರ್ಷದ ಆರು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು ಫೆ.13 ರಂದು ಐವರ್ನಾಡು ‌ಫ್ರೌಡಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.ಪಂದ್ಯಾಟದ ಉದ್ಘಾಟನೆಯನ್ನು ಐವರ್ನಾಡು ಪ್ರಾ.ಕೃ.ಪ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ ನೆರವೇರಿಸಿದರು. ಪಂದ್ಯಾಟದಲ್ಲಿ ಕರುಣಾಕರ ಮಡ್ತಿಲ ಮಾಲಕತ್ವದ ಮಡ್ತಿಲ ಬ್ಲಾಸ್ಟಸ್೯, ವಾಸುದೇವ ಬೊಳುಬೈಲು...
Loading posts...

All posts loaded

No more posts

error: Content is protected !!