Ad Widget

ಲವಪ್ಪ ಪೈಲಾರು ನಿಧನ

ಅಮರಮುಡೂರು ಗ್ರಾಮದ ಪೈಲಾರು ನಿವಾಸಿ ಮೂಕಮಲೆ ಲವಪ್ಪ ಗೌಡ ರವರು ಫೆ.20 ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಹಲವಾರು ವರ್ಷಗಳಿಂದ ಪೈಲಾರಿನಲ್ಲಿ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ ಶ್ರೀಮತಿ ನೀಲಾವತಿ, ಓರ್ವ ಪುತ್ರ ಜಯಪ್ರಕಾಶ್ ಪೈಲಾರು,ಸಹೋದರ,ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಹರಿಹರಪಲ್ಲತ್ತಡ್ಕ : ದೇವಸ್ಥಾನಕ್ಕೆ ಇನ್ವರ್ಟರ್ ಕೊಡುಗೆ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಫೆ.20 ರಂದು ತಿಶೋರ್ ಕುಮಾರ್ ಮುಚ್ಚಾರ ಮತ್ತು ಶಿವಪ್ರಸಾದ್ ಗೋಳ್ಯಾಡಿ ಅವರು ಇನ್ವರ್ಟರ್ ಅನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಡಾ| ಚಂದ್ರಶೇಖರ ಕಿರಿಭಾಗ, ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್...
Ad Widget

ದುಗಲಡ್ಕ ನೀರಬಿದಿರೆ ರಸ್ತೆ ಬಗ್ಗೆ ಕಾಂಗ್ರೆಸ್ ನಿಂದ ಪ್ರತಿಭಟನೆಯ ದೊಂಬರಾಟ : ಬಿಜೆಪಿ ವ್ಯಂಗ್ಯ

ಹಲವು ವರ್ಷಗಳ ಬೇಡಿಕೆ ಯಾಗಿರುವ ಜಟ್ಟಿಪಳ್ಳ ನೀರಬಿದಿರೆ ದುಗ್ಗಲಡ್ಕ ರಸ್ತೆಯು ಹಂತ ಹಂತದಲ್ಲಿ ಅಭಿವೃದ್ಧಿ ಗೊಳ್ಳುತ್ತಿದ್ದು ಕೆಲಸ ಮಾಡಲು ತಿಳಿಯದ ಕಾಂಗ್ರೆಸ್ಸಿಗರು ಪ್ರತಿಭಟನೆ -ಪಾದಯಾತ್ರೆ ಯ ದೊಂಬರಾಟ ಮಾಡುತ್ತಿದ್ದಾರೆಈ ರಸ್ತೆಯ ಆಯ್ದ ಭಾಗದಲ್ಲಿ ಕಾಂಕ್ರಿಟಿಕರಣ ನಡೆದಿದ್ದು ಈ ರಸ್ತೆಯು ಸುಳ್ಯ ನಗರದಿಂದ ಸುಬ್ರಹ್ಮಣ್ಯ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ರಿ ರಸ್ತೆಯನ್ನು ಆಗಲ...

ಎನ್ ಎಂ ಸಿ: ವೃತ್ತಿ ಮಾರ್ಗದರ್ಶನ ತರಬೇತಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ಲೇಸ್ಮೆಂಟ್ ಮತ್ತು ಕೆರಿಯರ್ ಗೈಡೆನ್ಸ್ ಸೆಲ್ ವತಿಯಿಂದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತುಮಂಗಳೂರು ವಿಶ್ವವಿದ್ಯಾನಿಲಯದ ಎಂಪ್ಲಾಯ್ಮೆಂಟ್ ಆಫೀಸರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಸ್ ಜೆ  ಹೇಮಚಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಉದ್ಯೋಗಾವಕಾಶದ ಕುರಿತು ಮಾಹಿತಿ ನೀಡಿದರು. ...

ಅಮರ ಸುಳ್ಯ ವಾಹನ ಚಾಲಕ ಮಾಲಕರ ಸಂಘದ ಮಹಾಸಭೆ : ಅಧ್ಯಕ್ಷರಾಗಿ ಪಿ.ಜಿ.ಜಯರಾಮ ಪುನರಾಯ್ಕೆ

ಅಮರ ಸುಳ್ಯ ವಾಹನ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಪಾರ್ಕಿಂಗ್ ಸ್ಥಳದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಜಿ.ಜಯರಾಮ ರವರು ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪಿ.ಜಿ.ಜಯರಾಮ, ಕಾರ್ಯದರ್ಶಿ ಯಾಗಿ ನಝೀರ್ ಶಾಂತಿನಗರ ಪುನರಾಯ್ಕೆಯಾದರು. 13 ಜನ ನಿರ್ದೇಶಕ ರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ನಝೀರ್ ಶಾಂತಿನಗರ...

ಬೆಳ್ಳಾರೆ : ಹಿರಿಯ ಗೃಹರಕ್ಷಕರಿಗೆ ಸನ್ಮಾನ : ಪ್ರಭಾಕರ, ರಾಮಚಂದ್ರ,ನಾರಾಯಣ ಮಣಿಯಾಣಿ ಯವರನ್ನು ಸನ್ಮಾನಿಸಿದ ಡಾ| ಮುರಲೀ ಮೋಹನ್ ಚೂಂತಾರು

https://youtu.be/Xweyxr0EJzc ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ಫೆ.20 ರಂದು ಸನ್ಮಾನ ಕಾರ್ಯಕ್ರಮವು ಬೆಳ್ಳಾರೆ ಗೃಹರಕ್ಷಕದಳ ಘಟಕ ಕಛೇರಿಯಲ್ಲಿ ನಡೆಯಿತು. ಪ್ರಭಾಕರ್ ರವರು 1993ರಲ್ಲಿ ಗೃಹರಕ್ಷಕದಳ ಸದಸ್ಯರಾಗಿ ಸೇರ್ಪಡೆಯಾಗಿ, 29 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತ ಬಂದಿರುತ್ತಾರೆ. ರಾಮಚಂದ್ರ ರವರು 2000 ರಲ್ಲಿ ಗೃಹರಕ್ಷಕದಳ ಸದಸ್ಯನಾಗಿ ಸೇರ್ಪಡೆಯಾಗಿ 22 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ,...

ಶಿಕ್ಷಕರ ಸಹಕಾರಿ ಸಂಘದ ನಿಂತಿಕಲ್ಲು ಶಾಖೆಯ ಉದ್ಘಾಟನಾ ಕಾರ್ಯಕ್ರಮ

ಶಿಕ್ಷಕರ ಸಹಕಾರ ಸಂಘ ಕಡಬ ಇದರ ನೂತನ ಶಾಖೆಯು ನಿಂತಿಕಲ್ಲಿನಲ್ಲಿ ಫೆ. 19 ರಂದು ನಿಂತಿಕಲ್ಲು ಸಾನಿಧ್ಯ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು. ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕ ಹಾಗೂ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಯವರು ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಸಹಕಾರಿ ಸಂಘಗಳ ಬಗ್ಗೆ...

ಕೊಡಗು ಸಂಪಾಜೆ : ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಕಾರ್ಯಕ್ರಮವು ಫೆ.19 ರಂದು ನಡೆಯಿತು. ಈ ಕ್ರಾರ್ಯಕ್ರಮದಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ, ವಿರಾಜಪೇಟೆ ಕ್ಷೇತ್ರ ಶಾಸಕರಾದ ಕೆ ಜಿ ಬೋಪಯ್ಯನವರು, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ...

ಕುಂಡಡ್ಕ : ಸ್ನೇಹ ಸೌಹಾರ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಕೂಟ

ಫ್ಯಾಮಿಲಿ ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ಪುರುಷರ 58 ಕೆ.ಜಿ.ವಿಭಾಗದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾಕೂಟ ಸ್ನೇಹ ಸೌಹಾರ್ದ ಟ್ರೋಫಿ- 2022 ಫೆ.19 ರಂದು ಕುಂಡಡ್ಕ ಶ್ರೀ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ವಠಾರದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ಕ್ರೀಡಾಕೂಟದ ಆಯೋಜನೆಯ ಹಿಂದೆ ಸಂಘಟಕರ ಪರಿಶ್ರಮ ಸಾಕಷ್ಟು ಇರುತ್ತದೆ....

ಕುಲ್ಕುಂದ : ಬಸವೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಬಸವೇಶ್ವರ ದೇವಸ್ಥಾನ ಬಸವನಮೂಲೆ ಕುಲ್ಕುಂದ ಇಲ್ಲಿ ಮಾ.01 ರಂದು ನಡೆಯುವ ಮಹಾಶಿವರಾತ್ರಿಯ ಆಮಂತ್ರಣ ಪತ್ರಿಕೆಯನ್ನು ಫೆ.19 ರಂದು ಶ್ರೀ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಇದರ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
Loading posts...

All posts loaded

No more posts

error: Content is protected !!