ರಸ್ತೆಯಲ್ಲಿ ಜರಿದು ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಕೊಡುವಂತೆ ಮನವಿ

. . . . . . . . .

ಸುಳ್ಯ ಹಳೆಗೇಟು ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಈ ಕಳೆದ ಮಳೆಗಾಲದಲ್ಲಿ ರಸ್ತೆ ಬದಿಯ ಬರೆ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿದ್ದು ಇದರ ಬಗ್ಗೆ ಗಮನ ಹರಿಸದೆ ಸಂಬಂಧಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಮುಂದೊಂದು ದಿನ ಈ ಸ್ಥಳದಲ್ಲಿ ಯಾವುದಾದರೂ ದುರ್ಘಟನೆಗಳು ಸಂಭವಿಸಿದಲ್ಲಿ ಇದಕ್ಕೆ ಹೊಣೆ ಯಾರು ಎಂದು ಸಮಾಜಿಕ ಕಾರ್ಯಕರ್ತ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷ ಆರ್ ಬಿ ಬಶೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಈ ರಸ್ತೆಯ ಮೂಲಕ ಸಂಚರಿಸುವ ವಾಹನ ದಾರರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯನ್ನು ಮಾಡಿಕೊಂಡಿರುತ್ತಾರೆ. ಈ ಪ್ರದೇಶವು ತಿರುವಿನಿಂದ ಕೂಡಿದ್ದು ವಾಹನದಲ್ಲಿ ಸಂಚರಿಸುವಾಗ ಮುಂದಿನಿಂದ ಬರುವ ವಾಹನವು ಈ ಬರೆ ಕುಸಿತದಿಂದಾಗಿ ಕಾಣಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading