Ad Widget

ಸಂಪಾಜೆ : ರಾಷ್ಟ್ರಪತಿ ಪದಕ ಪುರಸ್ಕೃತ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಗೆ ಸನ್ಮಾನ

ರಾಷ್ಟ್ರಪತಿ ಪದಕ ಪುರಸ್ಕೃತ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ದಿವಾಕರ್ ಅವರನ್ನು ಚೆಂಬು ಹಾಗೂ ಸಂಪಾಜೆ ಗ್ರಾಮಸ್ಥರ ಪರವಾಗಿ ಸಂಪಾಜೆಯಲ್ಲಿ ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶ್ರೀ ಸೂರಜ್ ಹೊಸೂರು, ಕೊಡಗು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಹನೀಫ್ ಸಂಪಾಜೆ, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ...

ಕಮಿಲ-ಮೊಗ್ರದಲ್ಲಿ ಸೇತುವೆಗೆ ಒತ್ತಾಯ : ಹೊಳೆಯಲ್ಲಿ ದೀಪಾವಳಿ ಆಚರಣೆ

ಕಮಿಲ-ಮೊಗ್ರ ಸೇತುವೆ ರಚನೆಗೆ ಒತ್ತಾಯಿಸಿ ನಾಗರಿಕರು ಹಂತ ಹಂತದ ಹೋರಾಟ ಆರಂಭಿಸಿದ್ದಾರೆ. ಈ ನಡುವೆ ದೀಪಾವಳಿ ಸಂದರ್ಭ ಮೊಗ್ರ ಹೊಳೆಯಲ್ಲಿ ನಾಗರಿಕರು ಹಣತೆ ಬೆಳಗುವ ಮೂಲಕ ವಿನೂತನ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಾಡಿದರು. ಮೊಗ್ರ-ಏರಣಗುಡ್ಡೆ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಂಪೂರ್ಣ ಡಾಮರೀಕರಣಕ್ಕೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಹಕ್ಕೊತ್ತಾಯ ಆರಂಭವಾಗಿದೆ....
Ad Widget

ದೀಪಾವಳಿಯ ಸಡಗರದಲ್ಲಿ ಸುಳ್ಯದ ಜನತೆ – ಕೊರೊನ ಭೀತಿಯಿಂದ ಸಹಜ ಜೀವನದತ್ತ ಮರಳುತ್ತಿರುವ ಜನಸಾಮಾನ್ಯರು

ಹಲವು ತಿಂಗಳುಗಳಿಂದ ಕೋವಿಡ್ 19 ವೈರಸ್ಸಿನ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಹಬ್ಬ ಹರಿದಿನಗಳನ್ನು ಸಡಗರದಿಂದ ಆಚರಿಸಿಕೊಳ್ಳಲು ಸಾಧ್ಯವಾಗದೆ ನಗರ ಬೀದಿಗಳು, ಗ್ರಾಮೀಣ ಭಾಗಗಳು ಮಂಕಾಗಿದ್ದವು. ಆದರೆ ಕಳೆದ ಒಂದು ವಾರಗಳಿಂದ ದೀಪಾವಳಿಯ ಸಡಗರದಲ್ಲಿ ನಾಡಿನ ಜನತೆ ಮತ್ತೊಮ್ಮೆ ಸಹಜ ಜೀವನದತ್ತ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ. ನೂತನ ಬಟ್ಟೆ ಬರೆಗಳ ತಮ್ಮ ತಮ್ಮ ಮನೆಗೆ ಬೇಕಾದ ಆಹಾರ...

ಪ್ಲಾಸ್ಮಾ ಥೆರಪಿ ಮಾಡಿ ಮಾನವೀಯತೆ ಮೆರೆದ ಯುವ ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ

ನೆರೆಯ ಕೇರಳ ರಾಜ್ಯದ ಬಂದಡ್ಕದ ಮಕ್ಕಟ್ಟಿ ಹರೀಶ ಎಂ ಕೆ ಎಂಬವರು ಕೊರೊನ ಪಾಸಿಟಿವ್ ಗೆ ಒಳಗಾಗಿದ್ದು ಮಂಗಳೂರಿನ ಇಂಡಿಯಾನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಇವರಿಗೆ ಅತಿ ಅಗತ್ಯವಾಗಿ ಎ ಬಿ ಪಾಸಿಟಿವ್ ಬಂದಂತಹ ವ್ಯಕ್ತಿಯಿಂದ ರಕ್ತದ ಪ್ಲಾಸ್ಮ ತೆರಪಿ ಬೇಕಾಗಿದ್ದು , ಇತ್ತೀಚಿಗೆ ಕೊರೊನ ರೋಗಕ್ಕೆ ಒಳಗಾಗಿ ಗುಣಮುಖರಾಗಿದ್ದ ಸುಳ್ಯದ ನ್ಯಾಯವಾದಿ ಹಾಗು...

ತೊಡಿಕಾನ ದೇವರಗುಂಡಿ ಪಾವಿತ್ರ್ಯತೆ ಉಳಿಸುವ ಬಗ್ಗೆ ಶಾಸಕ ಬೋಪಯ್ಯರಿಗೆ ವಿ.ಎಚ್.ಪಿ ಮನವಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ತೊಡಿಕಾನ ದೇವರಗುಂಡಿ ಪುಣ್ಯಕ್ಷೇತ್ರದ ಪಾವಿತ್ರ್ಯತೆ ಉಳಿಯುವ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ವಿರಾಜಪೇಟೆ ಶಾಸಕರಾದ ಕೆ ಜಿ ಬೋಪಯ್ಯ ರಿಗೆ ಮನವಿ ನೀಡಲಾಯಿತು. ದೇವರಗುಂಡಿ ಪ್ರದೇಶದಲ್ಲಿ ಅಶ್ಲೀಲ ಚಿತ್ರೀಕರಣ ವಿಚಾರಕ್ಕೆ ಸಂಬಂಧಪಟ್ಟು, ತೊಡಿಕಾನ ದೇವಸ್ಥಾನ ಪರಿಸರದಲ್ಲಿ ಇನ್ನೂ ಮುಂದೆ ಈ ರೀತಿಯ ಪ್ರಕರಣ ಗಳು ನಡೆಯಬಾರದು ಈ...

ಕೊಲ್ಲಮೊಗ್ರು ಗ್ರಾ.ಪಂ.ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಾಮ ಪಂಚಾಯತು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿ, ಮಕ್ಕಳ ಕಲಿಕೆಗೆ ಆಶಾಕಿರಣವಾಗುವ ಉದ್ದೇಶದಿಂದ ಕೊಲ್ಲಮೊಗ್ರು ಗ್ರಾ.ಪಂ.ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ ಕ್ಕೆ ದಿನಾಂಕ ನ.14 ರಂದು ಚಾಲನೆ ನೀಡಲಾಯಿತು.

ಹರಿಹರಪಲ್ಲತ್ತಡ್ಕ : ಬಿದ್ದು ಸಿಕ್ಕಿದ ಉಂಗುರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಿಶನ್ ಖಂಡಿಗೆ

ನ 13 ರಂದು ಗುತ್ತಿಗಾರಿನಿಂದ ಹರಿಹರಕ್ಕೆ ಬರುತ್ತಿರುವ ವೇಳೆ ರಾಕೇಶ್ ಮುಳ್ಳುಬಾಗಿಲು ರವರ ಚಿನ್ನದ ಉಂಗುರ ಕಳೆದು ಹೋಗಿತ್ತು. ಈ ಉಂಗುರ ಹರಿಹರಪಲ್ಲತ್ತಡ್ಕ ದ ಖಂಡಿಗೆ ಸ್ಟೋರ್ ಮಾಲಕ ಕೃಷ್ಣಪ್ಪ ರವರ ಪುತ್ರ ಕಿಶನ್ ಗೆ ಸಿಕ್ಕಿತ್ತು. ರಾಕೇಶ್ ಮುಳ್ಳುಬಾಗಿಲು ರವರ ಉಂಗುರ ಕಳೆದು ಹೋಗಿರುವ ವಿಷಯ ತಿಳಿದು ಅವರಿಗೆ ಹಿಂತಿರುಗಿಸಿ ಕಿಶನ್ ಖಂಡಿಗೆ ಪ್ರಾಮಾಣಿಕತೆ...

ಸುಳ್ಯದಲ್ಲಿ ಪ್ರಥಮವಾಗಿ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರಕ್ಕೆ ಎಲಿಮಲೆ ಉದಯ ಟೈಲರಿಂಗ್ ನಲ್ಲಿ ಚಾಲನೆ – ಸೆಲ್ಕೋ ಫೌಂಡೇಶನ್‌ ನೆರವು

ಸುಳ್ಯದಲ್ಲಿ ಪ್ರಥಮ ಬಾರಿಗೆ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ ಅಳವಡಿಸಿದ ಸುಸಜ್ಜಿತ ಮಳಿಗೆಯ ಉದ್ಘಾಟನಾ ಸಮಾರಂಭವು ಎಲಿಮಲೆ ಉದಯ ಟೈಲರಿಂಗ್ ಮತ್ತು ಗಣೇಶ ಕ್ಲೋತ್ ಸೆಂಟರ್ ಕೇಪಳಕಜೆ ಕಾಂಪ್ಲೆಕ್ಸ್ ಎಲಿಮಲೆ ಯಲ್ಲಿ ಇಂದು ನಡೆಯಿತು. ಶಾಸಕರಾದ ಎಸ್.ಅಂಗಾರ ಉದ್ಘಾಟನೆಯನ್ನು ನೆರವೇರಿಸಿ ಸ್ವ-ಉದ್ಯೋಗದಿಂದ ದೇಶದ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು. ಸೆಲ್ಕೋ ಫೌಂಡೇಶನ್ ಬೆಂಗಳೂರು ಇದರ ಎ.ಜಿ.ಓ.ಜಯಪ್ರಕಾಶ್...

ಅರಂತೋಡು : ಓದುವ ಬೆಳಕು ಕಾರ್ಯಕ್ರಮಕ್ಕೆ ಚಾಲನೆ

ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿ, ಮಕ್ಕಳ ಕಲಿಕೆಗೆ ಆಶಾಕಿರಣವಾಗುವ ಉದ್ದೇಶದಿಂದ ಅರಂತೋಡು ಗ್ರಾ.ಪಂ.ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ತಾ.ಪಂ.ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಮಾಜಿ ಅಧ್ಯಕ್ಷ ಶಿವಾನಂದ ಕುಕ್ಕುಂಬಳ, ಮಾಜಿ ಸದಸ್ಯ ಕೇಶವ ಅಡ್ತಲೆ, ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ ಗ್ರಾ.ಪಂ‌.ಪಿಡಿಓ ಜಯಪ್ರಕಾಶ್ ಎಂ‌.ಆರ್.,...

ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ಹೋಮ

ರಾಷ್ಟ್ರೀಯ ಆಯರ್ವೇದ ದಿನದ ಅಂಗವಾಗಿ ಬೆಳ್ಳಾರೆಯ ನೆಟ್ಟಾರು ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ಹೋಮ ನ.13 ರಂದು ಆಚರಿಸಲಾಯಿತು. ಡಾ| ತಿರುಮಲೇಶ್ವರ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!