Ad Widget

ಶುಭವಿವಾಹ : ಪ್ರಶಾಂತ್ – ಲತಾಶ್ರೀ

ನರ್ಲಡ್ಕ ಎಣ್ಮೂರು ಶ್ರೀ ಜನಾರ್ದನ ಆಚಾರ್ಯರ ಪುತ್ರ ಪ್ರಶಾಂತ್ ನರ್ಲಡ್ಕರ ವಿವಾಹವು ಪೇರಳಕಟ್ಟೆ ಶ್ರೀ ಕೊರಗಪ್ಪ ಆಚಾರ್ಯರ ಪುತ್ರಿ ಲತಾಶ್ರೀಯವರೊಂದಿಗೆ ನ.27 ರಂದು ಎಣ್ಮೂರು ಕೋಟಿ - ಚೆನ್ನಯ್ಯ ನಗರದ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.

ಹರಿಹರ ಪಲ್ಲತ್ತಡ್ಕ ಪಿಡಿಓ ಪ್ರೇಮ್ ಸಿಂಗ್ ಅಮಾನತು

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದು ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದ ಪ್ರಕರಣವೊಂದಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ನಡೆದಿತ್ತು....
Ad Widget

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿಯಾಗಿ ಪುತ್ತೂರು ಎಸಿ ಡಾ.ಯತೀಶ್ ಉಳ್ಳಾಲ್ ಇಂದು ಅಧಿಕಾರ ಸ್ವೀಕಾರ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರನ್ನು ಜಿಲ್ಲಾಧಿಕಾರಿ ನೇಮಕಗೊಳಿಸಿ ಆದೇಶಿಸಿದ್ದರು. ಇಂದು ಶ್ರೀ ಕ್ಷೇತ್ರದಲ್ಲಿ ಅವರಿಗೆ ಅಧಿಕಾರ ಹಸ್ತಾಂತರ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ , ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಪುಷ್ಪಲತಾ, ಕಛೇರಿ ಅಧೀಕ್ಷಕರಾದ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ಏನೆಕಲ್ಲು ಬೂದಿಪಳ್ಳ ಮಧುವನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಸುಬ್ರಹ್ಮಣ್ಯ ಗ್ರಾ.ಪಂ.ವ್ಯಾಪ್ತಿಯ ಏನೆಕಲ್ಲು ಬೂದಿಪಳ್ಳ ಮಧುವನ ಸಂಪರ್ಕಿಸುವ ರಸ್ತೆ 15 ನೇ ಹಣಕಾಸು ಯೋಜನೆಯಲ್ಲಿ ಕಾಂಕ್ರೀಟೀಕರಣ ಗೊಂಡಿದ್ದು ನ.27 ರಂದು ಉದ್ಘಾಟನೆಗೊಂಡಿತು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಿಡಿಓ ಮುತ್ತಪ್ಪ ದವಳಗಿ,ಗ್ರಾ.ಪಂ.ಮಾಜಿ ಸದಸ್ಯರಾದ ಹರೀಶ್ ಇಂಜಾಡಿ, ಶ್ರೀಮತಿ ಸುಶೀಲಾ ಆಚಾರ್ಯ, ಶ್ರೀಕೃಷ್ಣ ಕೋಟೆ, ಶ್ರೀಮತಿ ವರಲಕ್ಷ್ಮಿ, ಅರ್ಜುನ್ ಕೋಟೆ, ಸತೀಶ್ ಆಚಾರ್ಯ, ಕು|...

ಮೆಟ್ಟಿನಡ್ಕ : ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ

ಮೆಟ್ಟಿನಡ್ಕದ ಶ್ರೀ ದುರ್ಗಾ ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ನ.27 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ವಲಯ ತರಬೇತುದಾರರಾದ ಎನ್ನೆಂಸಿಯ ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಆಗಮಿಸಿ ಮಾತನಾಡಿದರು. ನಮ್ಮ ಜೀವನ ಇಂದು ಒತ್ತಡದ ಬದುಕಾಗಿದೆ.ಇದರಿಂದ ಹೊರಬಂದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದರು. ಜ್ಞಾನ...

ತೊಡಿಕಾನ – ಕುಂಟುಕಾಡು ಕಾಂಕ್ರಿಟ್ ರಸ್ತೆಗೆ ಗುದ್ದಲಿಪೂಜೆ

ತೊಡಿಕಾನ ಕುಂಟುಕಾಡು ರಸ್ತೆಯ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ನ.27 ರಂದು ತೊಡಿಕಾನ ಹಾಲು ಸೊಸೈಟಿ ಬಳಿ ನಡೆಯಿತು.ಎಪಿಎಂಸಿ ವತಿಯಿಂದ 7.5 ಲಕ್ಷ ಹಾಗೂ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಿಂದ 5 ಲಕ್ಷ ಒಟ್ಟು 12.5 ಲಕ್ಷ ಅನುದಾನದಲ್ಲಿ ರಸ್ತೆಯ ಕಾಂಕ್ರೀಟಿಕರಣ ನಡೆಯಲಿದ್ದು ಶಾಸಕ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ,...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಪುತ್ತೂರು ಎಸಿ ಡಾ.ಯತೀಶ್ ಉಳ್ಳಾಲ್ ನೇಮಕ

ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರನ್ನು ನೇಮಕ ಮಾಡಲಾಗಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಮೇಲಿನ ಉಲ್ಲೇಖದ ಆದೇಶದ ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 29 ರನ್ವಯ ದೇವಾಲಯದ ದೈನಂದಿನ ಆಡಳಿತ ನಿರ್ವಹಣೆ ಹಾಗೂ...

ಚಿಗುರು ಅರೆಭಾಷೆ ಕವನ ಸ್ಪರ್ಧೆ ಫಲಿತಾಂಶ ಪ್ರಕಟ – ಲಿಖಿತಾ ಗುಡ್ಡೆಮನೆ ಪ್ರಥಮ

ಚಿಗುರು ಕ್ರೀಡಾ ಮತ್ತು ಕಲಾ ಯುವಕಮಂಡಲ ಪೆರಾಜೆ ಇವರ ಆಶ್ರಯದಲ್ಲಿ ನಡೆದ ಹುತ್ತರಿ ಮತ್ತು ದೀಪಾವಳಿ ಎಂಬ ವಿಷಯಗಳ ಕುರಿತ ಚಿಗುರು ಅರೆಭಾಷೆ ಕವನ ಸ್ಪರ್ಧೆ 2020ರ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನ ವನ್ನು ಕುಮಾರಿ ಲಿಖಿತಾ ಗುಡ್ಡೆಮನೆಯವರ "ಹೂ ನರ್ಕುವ ಹಬ್ಬ" ಎಂಬ ಕವನ ಪಡೆದುಕೊಂಡಿದೆ, ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಕ್ರಮವಾಗಿ ಮನೋಜ್...

ಗುತ್ತಿಗಾರು : ಪ್ರೌಢಶಾಲಾ ವಿಭಾಗದ ನೂತನ ಕೊಠಡಿಗಳ ಉದ್ಘಾಟನೆ

ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನ.27 ರಂದು ನಡೆಯಿತು.ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಎಸ್ ಅಂಗಾರ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು "ಜನರ ಸಹಕಾರ ಇದ್ದರೆ ಯೋಜನೆ ಸರಿಯಾಸ ರೀತಿಯಲ್ಲಿ ಆಗುತ್ತದೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯೋಚನೆ ಉತ್ತಮ ಹಾಗೂ...

ಎಡಮಂಗಲ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕ್ ನಿಂದ ಗೌರವ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 106 ನೇ ವಾರ್ಷಿಕ ಮಹಾಸಭೆಯಲ್ಲಿ ಎಡಮಂಗಲ ಕೃಷಿ ಪತ್ತಿನ ಸಹಕಾರಿ ಸಂಘವು ವ್ಯವಹಾರದಲ್ಲಿ ಸಾಧಿಸಿದ ಪ್ರಗತಿಯನ್ನು ಗುರುತಿಸಿ ಗೌರವಿಸಿದರು. ಎಡಮಮಗಲ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ರಮೇಶ್ ದೊಳ್ತಿಲ ಇವರನ್ನು ಸಂಘದ ಪರವಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ...
Loading posts...

All posts loaded

No more posts

error: Content is protected !!