ಅಮರ ಸುದ್ದಿ ವಿಶೇಷ ವರದಿ ; ಹರಿಹರ ಪಳ್ಳತ್ತಡ್ಕ – ನಡುಗಲ್ಲು ಮುಖ್ಯ ರಸ್ತೆಯ ಬಾರಡ್ಕ ಸಮೀಪ ನಿರಂತರವಾಗಿ ಸಂಭವಿಸುತ್ತಿವೆ ವಾಹನ ಅಪಘಾತಗಳು ; ಎಚ್ಚರಿಕೆ ವಹಿಸಬೇಕಿದೆ ವಾಹನ ಸವಾರರು – ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಸ್ಥಳೀಯಾಡಳಿತ

(ವರದಿ : ಉಲ್ಲಾಸ್ ಕಜ್ಜೋಡಿ)
ಹರಿಹರ ಪಳ್ಳತ್ತಡ್ಕ – ನಡುಗಲ್ಲು ಮುಖ್ಯ ರಸ್ತೆಯ ಮಲ್ಲಾರ – ಬಾರಡ್ಕ ರಸ್ತೆಯಲ್ಲಿ ನಿರಂತರವಾಗಿ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಹರಿಹರ ಪಲ್ಲತ್ತಡ್ಕದಿಂದ ನಡುಗಲ್ಲು ಮಾರ್ಗವಾಗಿ ಗುತ್ತಿಗಾರು, ಸುಳ್ಯ ಸೇರಿದಂತೆ ಎಲ್ಲಾ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿರುವ ಇಲ್ಲಿ ಇದೀಗ ಹಲವಾರು ಸಮಯಗಳಿಂದ ಸಂಭವಿಸುತ್ತಿರುವ ಈ ನಿರಂತರ ಅಪಘಾತಗಳಿಂದಾಗಿ ವಾಹನ ಸವಾರರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಮೂರ್ನಾಲ್ಕು ದಿನಗಳ ಹಿಂದೆಷ್ಟೇ ಬಾರಡ್ಕ ಚಡಾವಿನಲ್ಲಿ ಟೆಂಪೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆಯೂ ನಡೆದಿತ್ತು. ಈ ಸ್ಥಳದಲ್ಲಿ ಹಾಗೂ ಈ ಸ್ಥಳದ ಆಸುಪಾಸಿನಲ್ಲಿ ಈ ಹಿಂದೆಯೂ ಕೂಡ ಹಲವು ಅಪಘಾತಗಳು ಸಂಭವಿಸಿದ್ದು, ಇದು ಒಂದು ರೀತಿಯಲ್ಲಿ ಆಕ್ಸಿಡೆಂಟ್ ಸ್ಪಾಟ್ ಎನ್ನುವಂತಾಗಿದೆ. ಆದ್ದರಿಂದ ಸ್ಥಳೀಯಾಡಳಿತ ಇತ್ತ ಗಮನಹರಿಸಿ ಅತೀ ಹೆಚ್ಚು ವಾಹನ ಅಪಘಾತಗಳು ಸಂಭವಿಸುತ್ತಿರುವ ಈ ಸ್ಥಳದಲ್ಲಿ ಅಲ್ಲಲ್ಲಿ “ಅಪಘಾತ ವಲಯ ಹಾಗೂ ವೇಗಮಿತಿ” ಸೂಚನಾ ಫಲಕಗಳನ್ನು ಅಳವಡಿಕೆ ಮಾಡುವುದರೊಂದಿಗೆ ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತಗಳನ್ನು ತಡೆಯವ ನಿಟ್ಟಿನಲ್ಲಿ ಕೈಗೊಳ್ಳಬಹುದಾದಂತಹ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದೇ ರೀತಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕೂಡ ಆದಷ್ಟು ಎಚ್ಚರಿಕೆಯಿಂದ ಸಂಚರಿಸಬೇಕಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading