Ad Widget

ಡಿ.05: ಕಳಂಜದ ತಂಟೆಪ್ಪಾಡಿಯಲ್ಲಿ ನಿನಾದ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ ಹಾಗೂ ಕಾಲಮಿತಿ ಯಕ್ಷಗಾನ

ದೆಹಲಿ ಮಿತ್ರ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ಆಶಯದಂತೆ ಕಳಂಜ ಗ್ರಾಮದ ಸುತ್ತಮುತ್ತಲಿನ ಜನರಿಗೆ ಅವರ ಗ್ರಾಮದ ಕಿಟಕಿಯಿಂದಲೇ ಸಾಂಸ್ಕೃತಿಕ ಜಗತ್ತಿನ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ, ಎಲ್ಲರನ್ನೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರೊಂದಿಗೆ ಸಾಂಸ್ಕೃತಿಕವಾಗಿ ಬೆಸುಗೆ ಹಾಕುವ ಪ್ರಯತ್ನವಾಗಿ ಬೆಳ್ಳಾರೆ ಸಮೀಪದ ಕಳಂಜ ಗ್ರಾಮದ ತಂಟೆಪ್ಪಾಡಿ ಎಂಬಲ್ಲಿ 'ನಿನಾದ ಸಾಂಸ್ಕೃತಿಕ ಕೇಂದ್ರ'ವು ರೂಪುಗೊಳ್ಳುತ್ತಿದ್ದು...

ಸೀತಾರಾಮ ಪಲ್ಲೋಡಿಯವರಿಗೆ ಡಾಕ್ಟರೇಟ್

ಸೀತಾರಾಮ ಪಲ್ಲೋಡಿ ನೆಲ್ಯಾಡಿ ಯುನಿವರ್ಸಿಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪಂಜದ ಸೀತಾರಾಮ ಪಲ್ಲೋಡಿಯವರು ಪಿ.ಹೆಚ್.ಡಿ. ಪದವಿ ಪಡೆದುಕೊಂಡಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಲೋಕೇಶ್ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ "ದಕ್ಷಿಣ ಕನ್ನಡದಲ್ಲಿ ರಾಜಕೀಯ ಪತ್ರಿಕೋದ್ಯಮ : ಆಯಾಮ ಮತ್ತು ಪ್ರಭಾವ ( C 1840 – 1956)" ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ...
Ad Widget

ಅರಣ್ಯ ಇಲಾಖೆಯವರ ಮೇಲೆ ದೂರಿ ನಮ್ಮನ್ನು ಎರಡು ವರ್ಷ ಕತ್ತಲೆಯಲ್ಲಿಟ್ಟಿದ್ದೀರಿ ಎಂದು ಮೆಸ್ಕಾಂ ಮೇಲೆ ಆಕ್ರೋಶಗೊಂಡ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ

ಸುಳ್ಯ ತಾ.ಪಂ ಕಚೇರಿಯಲ್ಲಿ ನ.೨೫ರಂದು ನಡೆದ ಕೆಡಿಪಿ ಸಭೆಯಲ್ಲಿ ಈ ಭಾರಿ ಹಲವು ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನೋತ್ತರಗಳು ಹಾಗೂ ಪ್ರಗತಿ ಪರಿಶೀಲನಾ ಸಭೆ, ಚರ್ಚೆ ಇಂದು ನಡೆಯಿತು . ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಅಧಿಕಾರಿಗಳ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ವಿವಿಧ ಸಮಸ್ಯೆಗಳ ಪರಿಶೀಲನಾ ಸಭೆಯು ನಡೆದು ಕಳೆದ ಎರಡು ವರ್ಷಗಳಿಂದ ಮಂಡೆಕೋಲು ಬೈಲಿನಲ್ಲಿ...

ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಚುನಾವಣೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ಪಕ್ಷ ಈ ಚುನಾವಣೆಗೆ ಸಲಹೆಗಳನ್ನು ನೀಡುವುದಾಗಲೀ ಇದರ ಬಗ್ಗೆ ಸಭೆಯನ್ನು ನಡೆಸುವುದಾಗಲೀ ಮಾಡಿರುವುದಿಲ್ಲ: ಎನ್.ಜಯಪ್ರಕಾಶ್ ರೈ

ಅಲ್ಪಂಖ್ಯಾತ ವಿವಿದ್ದೋದ್ದೇಶ ಸಹಕಾರಿ ಸಂಘ ಇದರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಹಸ್ತಾಕ್ಷೇಪವನ್ನು ಮಾಡಲಿಲ್ಲ. ಪಕ್ಷದ ನಾಯಕರುಗಳು ಪಕ್ಷದ ಹೆಸರನ್ನು ಹೇಳಿ ಸ್ಪರ್ಧಿಸಿ ಸೋತಾಗ ಪಕ್ಷದ ತಲೆಗೆ ಕಟ್ಟುವುದು ಸರಿಯಾದ ವಿಧಾನವಲ್ಲ. ಪಕ್ಷವು ಇವರಿಗೆ ಬಿ'ಫಾರಂ ನೀಡಿ ಚುನಾವಣೆಗೆ ನಿಲ್ಲಲ್ಲು ಕಳುಹಿಸಿರುವುದಿಲ್ಲ. ಸಂಘದಲ್ಲಿ ಬಹುತೇಕ ನಾಯಕರು ನಮ್ಮದೇ ಪಕ್ಷದವರಾದ ಕಾರಣ ಹೊಸ ಮುಖಗಳಿಗೆ...

ನ.ಪಂ ಮುಖ್ಯಾಧಿಕಾರಿ ಎಂ.ಆರ್ ಸ್ವಾಮಿ ಯವರಿಂದ ನಗರದಲ್ಲಿ ದಿಢೀರ್ ದಾಳಿ: ಪುಟ್‌ಫಾತ್‌ಗಳ ಮೇಲೆ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದವರ ತೆರವು

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿಯವರ ವರ್ಗಾವಣೆಯ ಅಧಿಕಾರ ಸ್ವೀಕರಿಸಿಕೊಂಡಿರುವ ಎಂ.ಆರ್ ಸ್ವಾಮಿಯವರು ನ.೨೫ರಂದು ಬೆಳಗ್ಗೆ ಸುಳ್ಯ ನಗರದ ಮುಖ್ಯರಸ್ತೆಯ ಕೆಲವು ತರಕಾರಿ ಮತ್ತು ಹಣ್ಣಿನ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ ಅಂಗಡಿ ಮಾಲಕರು ತಮ್ಮ ಸಾಮಾಗ್ರಿಗಳನ್ನು ಸಾರ್ವಜನಿಕರು ನಡೆದಾಡುವ ಪುಟ್‌ಫಾತ್‌ ಗಳ ಮೇಲೆ ಇರಿಸಿ ವ್ಯಾಪಾರ ಮಾಡುತ್ತಿದ್ದವರನ್ನು ಗಮನಿಸಿ ಕೂಡಲೇ ಕಾರ್ಯಾಚರಣೆ ನಡೆಸಿ ಸ್ಥಳದಿಂದ...

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಆಗ್ರಹಿಸಿ ವಿ ಹೆಚ್ ಪಿ ವತಿಯಿಂದ ಸರಕಾರಕ್ಕೆ ಮನವಿ

ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ಹಿಂದು ಅರ್ಚಕರ ನಿಯುಕ್ತಿ ಹಾಗೂ ತ್ರಿಕಾಲ ಪೂಜಾ ವ್ಯವಸ್ಥೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ವಿ ಹೆಚ್ ಪಿ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಗೌರವಾಧ್ಯಕ್ಷ ಗಣಪತಿ...

ಗೂನಡ್ಕ : ಗ್ರಾಮಸ್ಥರೇ ಹಣ ಸಂಗ್ರಹಿಸಿ ರಸ್ತೆ ದುರಸ್ತಿ

ಗೂನಡ್ಕದಿಂದ ದರ್ಕಾಸ್ ಸಂಪರ್ಕಿಸುವ ರಸ್ತೆಯ ಡಾಮರಿಕರಣ ಶಿಥಿಲ ಗೊಂಡಿದ್ದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಇದನ್ನು ಮನಗಂಡ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ. ಕೆ ಅಬೂಸಾಲಿರವರ ನೇತೃತ್ವದಲ್ಲಿ ದಾನಿಗಳಿಂದ ಧನ ಸಂಗ್ರಹಿಸಿ ನ.25 ರಂದು ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ದುರಸ್ತಿಗೊಳಿಸಿದರು. ಈ ಸಂದರ್ಭದಲ್ಲಿ ಗೂನಡ್ಕ ದರ್ಕಾಸ್ ನಿವಾಸಿಗಳಾದ ಸಂಶುದ್ದೀನ್ ಆಟೋ,ಚಂದ್ರವಿಲಾಸ,...

ಬೆಳ್ಳಾರೆ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ಆರಂಭ

ಬೆಳ್ಳಾರೆ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.25ರಿಂದ ಆರಂಭಗೊಂಡಿದ್ದು, ಈ ಪ್ರಯುಕ್ತ ಬೆಳಿಗ್ಗೆ ಪ್ರಾರ್ಥನೆ , ದೀಪೋಜ್ವಲನ ಹಾಗೂ ಏಕಾಹ ಭಜನೆ ನಡೆಯಿತು. ನ.25ರ ಬುಧವಾರದಿಂದ ಮೊದಲ್ಗೊಂಡು ಡಿ.01ರ ಮಂಗಳವಾರದವರೆಗೆ ಏಕಾಹಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯಲಿದೆ. ಉತ್ಸವಾದಿಗಳ ಅಂಗವಾಗಿ ನ.25 ರ ಬುಧವಾರದಂದು ಬೆಳಿಗ್ಗೆ ಗಂಟೆ 10-00ಕ್ಕೆ ಪ್ರಾರ್ಥನೆ...
error: Content is protected !!