ಸುಳ್ಯ ನ್ಯಾಯಾಲಯದಲ್ಲಿ ಲೋಕ ಅದಾಲತ್ – 273 ಪ್ರಕರಣ ಇತ್ಯರ್ಥ – 9 ವರ್ಷಗಳಿಂದ ಬಾಕಿ ಇದ್ದ ಜಾಗದ ವಿವಾದ ಇತ್ಯರ್ಥ

ಸುಳ್ಯ ನ್ಯಾಯಾಲಯದಲ್ಲಿ ಇಂದು ಲೋಕ ಅದಾಲತ್ ನಡೆದಿದು ಒಟ್ಟು 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ ಗೊಂಡಿರುತ್ತದೆ.. 

. . . . . . . . .

ಲೋಕ ಅದಾಲತ್ ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 251 ಪ್ರಕರಣಗಳಲ್ಲಿ 172 ಪ್ರಕರಣಗಳು ರೂ. 1,04,51,000/- ಇತ್ಯರ್ಥ ಗೊಂಡಿರುತ್ತದೆ… ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 155 ರಲ್ಲಿ 142 ಪ್ರಕರಣಗಳು ರೂ. 5,00,000/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 96 ರಲ್ಲಿ 30 ಪ್ರಕರಣಗಳು ರೂ. 99,51,000/- ರ ಮೂಲಕ ಇತ್ಯರ್ಥಗೊಂಡಿರುತ್ತದೆ.)

. . . . . . .

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 109 ಪ್ರಕರಣಗಳಲ್ಲಿ 101 ಪ್ರಕರಣಗಳು ರೂ. 19,79,486/- ಇತ್ಯರ್ಥ ಗೊಂಡಿರುತ್ತದೆ… ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 96 ರಲ್ಲಿ 90 ಪ್ರಕರಣಗಳು ರೂ. 19,79,486/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 13 ರಲ್ಲಿ 11 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡಿರುತ್ತದೆ.)

(Pre litigation cases) ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ ಬ್ಯಾಂಕ್ recovery 19 ಪ್ರಕರಣಗಳು ರೂ. 38,76,870/- ಕ್ಕೆ ಇತ್ಯರ್ಥ ಗೊಂಡಿರುತ್ತದೆ.. ಆಸ್ತಿ ತೆರಿಗೆಯು 5958 ಜನರಿಂದ ರೂ. 62,79,439/- ಸಂಗ್ರಹವಾಗಿರುತ್ತದೆ. ಸುಳ್ಯ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಟ್ರಾಪಿಕ್ ಕೇಸುಗಳಿಂದ 1723 ಜನರಿಂದ ರೂ. 7,63,000/- ಸಂಗ್ರಹವಾಗಿರುತ್ತದೆ.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 9 ವರ್ಷ ಹಾಗೂ 6 ವರ್ಷಗಳಿಂದ ಬಾಕಿ ಇದ್ದಂತಹ ಆಸ್ತಿ ವಿವಾದ ಪ್ರಕಾರಣವೂ ಲೋಕ್ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥಗೊಂಡಿರುತ್ತದೆ

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶ್ರೀಮತಿ ಟಿ. ದಮಯಂತಿ ಸೋಮಯ್ಯಾ ಹಾಗೂ ವಕೀಲ ಸಂಧಾನಕಾರರಾಗಿ ಶ್ರೀ. ಮೊಹಮ್ಮದ್ ರಶೀದ್ ರವರು ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶ್ರೀ ಚಿರಾಗ್ ಸಿ. ಹಾಗೂ ವಕೀಲ ಸಂಧಾನಕಾರರಾಗಿ ರಾಬಿಯ ಕೆ. ಎ. ಇವರು ಇದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading