ಪತ್ರಕರ್ತ ದುರ್ಗಾಕುಮಾರ್ ಗೆ ದಿ. ರಾಜೇಶ್ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿ

ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕದ ವತಿಯಿಂದ ನೀಡಲಾಗುವ ದಿ.ರಾಜೇಶ್ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿಗೆ ಸುಳ್ಯದ ಪ್ರತಿಭಾನ್ವಿತ ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಭಾಜನರಾಗಿದ್ದಾರೆ.

. . . . . . . . .

ಜನವಾಹಿನಿ ಪತ್ರಿಕೆಯ ವರದಿಗಾರರಾಗಿದ್ದ ರಾಜೇಶ್ ಶಿಬಾಜೆಯವರು ಹಲವು ವರ್ಷಗಳ ಹಿಂದೆ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಅವರ ಸ್ಮರಣಾರ್ಥ ಮಾಧ್ಯಮ ಗೌರವ ಪ್ರಶಸ್ತಿಯನ್ನು ಪತ್ರಕರ್ತರ ವೇದಿಕೆ ಪ್ರತಿವರ್ಷ ಕೊಡಲಾರಂಭಿಸಿತ್ತು.
ಈ ಬಾರಿಯ 2020 ರ ಸಾಲಿನ ಪ್ರಶಸ್ತಿಯನ್ನು ದುರ್ಗಾಕುಮಾರ್ ನಾಯರ್ ಕೆರೆಯವರಿಗೆ ನೀಡಲು ತೀರ್ಮಾನಿಸಲಾಗಿದೆ.

. . . . . . .

ಪತ್ರಕರ್ತ ದುರ್ಗಾಕುಮಾರ್ ರವರು ಸೃಜನಶೀಲ ಬರಹಗಾರರಾಗಿ ಹೆಸರು ಪಡೆದಿರುವ ಇವರ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸ್ಥಳೀಯ ವಾರಪತ್ರಿಕೆಯ ವರದಿಗಾರರಾಗಿ, ಕನ್ನಡ ಪ್ರಭ ಪತ್ರಿಕೆಯ ಸುಳ್ಯದ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು ಹಿಂದೆ ವಿಜಯ ಕರ್ನಾಟಕ, ಪಯಸ್ವಿನಿ ಪತ್ರಿಕೆಯ ವರದಿಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇವರು ಪತ್ನಿ ಪ್ರತಿಭಾ , ಪುತ್ರ ಅದ್ವೈತ್ ನಂದನ್, ಪುತ್ರಿ ಅದಿತಿ ಲಕ್ಷ್ಮಿ ಯವರೊಂದಿಗೆ ಎಲಿಮಲೆಯ ಜಬಳೆ “ಭೂಮಿಗೀತ” ದಲ್ಲಿ ನೆಲೆಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading