ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ‘ಮುಂಗಾರು ಮೇಳ’ಕ್ಕೆ ಸುಳ್ಯದ ಗ್ರಾಹಕರಿಗೆ ಇನ್ನೂ ಕೇವಲ 3 ದಿನಗಳು ಮಾತ್ರ

ಸುಳ್ಯ, ಜೂ. 19: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಲಾದ ‘ಮುಂಗಾರು ಮೇಳ’ಕ್ಕೆ ಇನ್ನೂ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಗ್ರಾಹಕರು ಈ ವಿಶೇಷ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರಾದ ಬಲರಾಮಾ ಆಚಾರ್ಯರು ತಿಳಿಸಿದ್ದಾರೆ.

. . . . . . . . .

ಇತ್ತೀಚಿನ ದಿನಗಳಲ್ಲಿ ಚಿನ್ನದ ದರವು ಸುಮಾರು ₹15,000ರಿಂದ ₹13,300 ರ ಮಟ್ಟಕ್ಕೆ ಇಳಿಕೆಯಾಗಿರುವುದು ಆಭರಣ ಖರೀದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಇದರೊಂದಿಗೆ ಮುಂಗಾರು ಮೇಳದ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶವನ್ನು ಒದಗಿಸುತ್ತಿವೆ.

. . . . . . .

ಮುಂಗಾರು ಮೇಳದ ಅಂಗವಾಗಿ ಆಯ್ದ ಸರಗಳ ತಯಾರಿಕೆ ಶುಲ್ಕದಲ್ಲಿ 8%ರಿಂದ ಹಾಗೂ ಆಯ್ದ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕದಲ್ಲಿ 12%ರಿಂದ ಆರಂಭವಾಗುವ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಜೊತೆಗೆ EF-VVS ಗುಣಮಟ್ಟದ ವಜ್ರಾಭರಣಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು,ಹಳೆಯ ಚಿನ್ನದ ವಿನಿಮಯಕ್ಕೆ ಚಿನ್ನದ ದರದಲ್ಲಿ 0% ಕಡಿತ ಹಾಗೂ 916 ಹಾಲ್‌ಮಾರ್ಕ್ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಅಭಿರುಚಿಗೆ ತಕ್ಕ ವಿಶೇಷ ಆಭರಣಗಳ ವಿಶಾಲ ಸಂಗ್ರಹ, ಇಂದಿನ ಟ್ರೆಂಡಿಂಗ್ ಡಿಸೈನ್‌ಗಳ ಅದ್ಭುತ ಕಲೆಕ್ಷನ್‌ಗಳೊಂದಿಗೆ ತಮ್ಮ ಕನಸಿನ ಆಭರಣಗಳನ್ನು ಆಯ್ಕೆಮಾಡುವ ಅವಕಾಶವನ್ನು ಈ ಮುಂಗಾರು ಮೇಳ ಒದಗಿಸುತ್ತಿದೆ.

ಶುಭ ಸಮಾರಂಭಗಳಿಗಾಗಿ ಆಭರಣ ಖರೀದಿಸಲು ಯೋಜಿಸಿರುವವರಿಗೆ ಈ ಮೇಳ ಅತ್ಯುತ್ತಮ ಅವಕಾಶವಾಗಿದೆ. ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮುಡಬಿದ್ರೆ ಶಾಖೆಗಳಲ್ಲಿ ನಡೆಯುತ್ತಿರುವ ಈ ಮೇಳಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಮುಂಗಾರು ಮೇಳ – ಉಳಿತಾಯದ ಮಳೆ, ಸಂತಸದ ಖರೀದಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading