Ad Widget

ಸುಬ್ರಹ್ಮಣ್ಯ : ಕುಸುಮ ಸಾರಂಗದ ವತಿಯಿಂದ ನಡೆದ ಆನ್ಲೈನ್ ಸ್ಪರ್ಧೆಯ ಫಲಿತಾಂಶ ಪ್ರಕಟ

ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ರಂಗ ಘಟಕ ಕುಸುಮ ಸಾರಂಗವೂ ಆಸಕ್ತ ಪ್ರತಿಭೆಗಳಿಗಾಗಿ ಏಕಪಾತ್ರಾಭಿನಯ, ಕವನ ವಾಚನ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಕೇರಳ ಹಾಗೂ ಮುಂಬೈಯಿಯ ಪ್ರತಿಭೆಗಳು ಕೂಡ ಭಾಗವಹಿಸಿದ್ದರು. ಈ ಮೊದಲು ತಿಳಿಸಿದಂತೆ ‘ಪ್ರಥಮ ಸುತ್ತಿನಲ್ಲಿ ಆಯ್ಕೆಯಾದ ಕವನ ವಾಚನ ಮತ್ತು ಏಕಪಾತ್ರಾಭಿನಯದ ಹತ್ತು ವಿಡಿಯೋಗಳನ್ನು ಅಂತಿಮ ಸುತ್ತಿನ ನಿರ್ಣಯಕ್ಕಾಗಿ ಕುಸುಮಾ ಸಾರಂಗ ಫೇಸ್‌ಬುಕ್‌ ಪೇಜ್ ಗೆ ಅಪ್ಲೋಡ್ ಮಾಡಿ, ವಿಡಿಯೋಗಳಿಗೆ ಬರುವ ಲೈಕ್ಸ್ ಗಳನ್ನು ಅಂಕಗಳಾಗಿ ಪರಿವರ್ತಿಸಿ ನಿರ್ಣಾಯಕರು ನೀಡುವ ಅಂಕಗಳಿಗೆ ಸೇರಿಸಲಾಗುವುದು’ ಎಂದು ತಿಳಿಸಲಾಗಿತ್ತು. ಆದರೆ ನಿರ್ಣಾಯಕರ ಹಾಗೂ ನಿರ್ದೇಶಕರ ಅಭಿಪ್ರಾಯದಂತೆ ಅದನ್ನು ಅಪ್ಲೋಡ್ ಮಾಡಿರುವುದಿಲ್ಲ, ನೇರವಾಗಿ ಫಲಿತಾಂಶ ನೀಡಲಾಗಿದೆ.
ಈ ಸ್ಪರ್ಧೆಗಳ ಫಲಿತಾಂಶದ ಪ್ರಕಟಗೊಂಡಿದ್ದು ಡ್ರಾಯಿಂಗ್ ಕಿರಿಯರ ವಿಭಾಗದಲ್ಲಿ ಅನೂಪ್ ಎ ಮಂಗಳೂರು ಪ್ರಥಮ, ನೇಹಾ ಬಾಲಡಿ ಯೇನೆಕಲ್ ದ್ವಿತೀಯ, ಹಿರಿಯರ ವಿಭಾಗದಲ್ಲಿ ಶರತ್ ಡಿ.ಕೆ ಪಂಜ ಪ್ರಥಮ, ಪೂಜಾಶ್ರೀ ಎ.ಯಸ್ ಅಜ್ಜಾವರ ದ್ವಿತೀಯ, ಕವನ ವಾಚನದಲ್ಲಿ ಮಂಜು ಕಾಸರಗೋಡು ಪ್ರಥಮ, ಡಾ.ರಾಶಿ ಯಂ ಆರ್ ಸುಳ್ಯ ದ್ವಿತೀಯ, ಏಕಪಾತ್ರಾಭಿನಯದಲ್ಲಿ ಸುಶ್ಮಿತಾ ಹೆಚ್. ದೇಲಂಪಾಡಿ ಕಾಸರಗೋಡು ಪ್ರಥಮ, ಮಹಾಲಕ್ಷ್ಮಿ ಯಂ. ಪಿ ಉಡುಪಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಈ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಕಾರಾಂ ಯೇನೆಕಲ್, ಕುಸುಮ ಸಾರಂಗದ ನಿರ್ದೇಶಕ ಹಾಗೂ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಗೋವಿಂದ ಯನ್, ಉಪನ್ಯಾಸಕಿ ಪುಷ್ಪಾ ಡಿ, ಪತ್ರಕರ್ತ, ರಂಗಕರ್ಮಿ ಹರ್ಷಿತ್ ಪಡ್ರೆ ಸಹಕರಿಸಿದ್ದಾರೆ. ಅನಿಲ್ ಕರ್ಕೆರ ನಿರ್ವಸಿದ್ದಾರೆ. ವಿಜೇತರರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣ ಪತ್ರವನ್ನು ಒಂದು ತಿಂಗಳ ಒಳಗಾಗಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!