Ad Widget

ಸುಬ್ರಹ್ಮಣ್ಯ : ರವಿ ಕಕ್ಕೆಪದವುರವರ ಮನೆಯಲ್ಲಿ ಸಾಧಕರಿಗೆ ಸನ್ಮಾನ

ಸುಬ್ರಹ್ಮಣ್ಯದ ಉದ್ಯಮಿ ಆರ್ಯಭಟ, ಜೇಸೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವುರವರ ಮನೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದ ಅನುಷ್ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿದ್ಯಾರತ್ನ ಸೇರಿದಂತೆ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜೇಸೀ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಸುಬ್ರಹ್ಮಣ್ಯ ಜೇಸೀ ಮೂಲಕ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಜೇಸಿ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಜೇಸಿ ಪ್ರದೀಪ್ ಬಾಕಿಲ, ಪೂರ್ವ ಜೇಸಿಐ ರಾಷ್ಟ್ರೀಯ ನಿರ್ದೇಶಕ ಜೇಸಿ ಚಂದ್ರಶೇಖರ್ ನಾಯರ್, ವಲಯಾಧಿಕಾರಿಗಳಾದ ಜೇಸಿ ಶೇಷಗಿರಿ ನಾಯಕ್, ಜೇಸಿ ಸುದೀಪ್ ಕುಮಾರ್ ಇತರರು ಆಗಮಿಸಿದ್ದರು. ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಇದರ ಅಧ್ಯಕ್ಷ ಮಣಿಕಂಠ ಕಾರ್ಯದರ್ಶಿ ಸವಿತಾ ಭಟ್, ಜೇಸಿರೆಟ್ ಆಶಾ ಶೇಷಕುಮಾರ್, ಜೂನಿಯರ್ ಜೇಸಿಯ ಕೌಶಿಕ್, ಕುಮಾರಸ್ವಾಮಿ ವಿದ್ಯಾಲಯದ ಉಪಾಧ್ಯಕ್ಷ ಶಿವರಾಮ ಯೇನೆಕಲ್ಲು, ಸದಸ್ಯರುಗಳಾದ ವೆಂಕಟರಾಜ್ ಸುಬ್ರಹ್ಮಣ್ಯ, ಯಜ್ಞೇಶ್ ಆಚಾರ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಸಾದ ಮುನಿಯಂಗಳ, ಅನುಷ್ ನ ಪೋಷಕರಾದ ಲೋಕೇಶ್ ಎಣ್ಣೆಮಜಲು, ಶ್ರೀಮತಿ ಉಷಾ ಲೋಕೇಶ್, ಗುತ್ತಿಗೆದಾರ ಪ್ರಕಾಶ್ ಕುಂದಾಪುರ, ಜೇಸಿ ಮೋಹನ್ ದಾಸ್ ರೈ ಸೇರಿದಂತೆ ಅನೇಕ ಮಂದಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಗಳಾದರು. ಪರ್ವತಮುಖಿ ಫ್ರೆಂಡ್ಸ್ ವತಿಯಿಂದ ಗೋಪಾಲ್ ಎಣ್ಣೆಮಜಲು, ಶಿಕ್ಷಕರಕ್ಷಕ ಸಂಘದ ವತಿಯಿಂದ ಪ್ರಸಾದ ಮುನಿಯಂಗಳ ಅನುಷ್ ನನ್ನು ಗೌರವಿಸಿದರು.
ಇದೇ ಸಂದರ್ಭದಲ್ಲಿ ರವಿ ಕಕ್ಕೆಪದವುರವರು ಪ್ರತೀ ವರ್ಷದಂತೆ ಈ ವರ್ಷವೂ ಕೊಡುಗೆಯಾಗಿ ನೀಡಲು ಕಟ್ಟಿಸಿದ ಮನೆಯನ್ನು ಜೇಸಿ ಮಣಿಕಂಠರವರಿಗೆ ಹಸ್ತಾಂತರಿಸಿದರು. ಪುರುಷೋತ್ತಮ ಎಂಬವರಿಗೆ ಇನ್ನೊಂದು ಮನೆ ನಿವೇಶನವನ್ನು ಕೊಡುಗೆಯಾಗಿ ನೀಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!