ಎಸ್.ಎಸ್.ಎಲ್.ಸಿ 2019-20 ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನೀಯನಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನುಷ್ ಎ.ಎಲ್ ರವರ ಮನೆಗೆ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ನಿಯೋಗವು ಭೇಟಿ ನೀಡಿ ಸಮಿತಿಯ ವತಿಯಿಂದ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಅಭಿನಂದನಾ ಫಲಕ ಹಾಗೂ ಸಿಹಿತಿಂಡಿ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕ ಅಬ್ದುರ್ರಹ್ಮಾನ್ ಮೊಗರ್ಪಣೆ, ಸುಳ್ಯ ಡಿವಿಷನ್ ನಾಯಕರಾದ ಜುನೈದ್ ಸಖಾಫಿ ಜೀರ್ಮುಕ್ಕಿ, ಹಸೈನಾರ್ ನೆಲ್ಲಿಕಟ್ಟೆ, ಸ್ವಾದಿಖ್ ಮಾಸ್ಟರ್ ಕಲ್ಲುಗುಂಡಿ, ರಿಯಾಝ್ ನೆಕ್ಕಿಲ, ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷ ಜಬ್ಬಾರ್ ಹನೀಫಿ, ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ, ಸಾಬಿತ್ ನಿಂತಿಕ್ಕಲ್, ರಹ್ಮಾನ್ ಎಣ್ಮೂರು ನಿಯೋಗದಲ್ಲಿದ್ದರು.
- Thursday
- October 31st, 2024