ದನ ಸಾಗಾಟ ಪ್ರಕರಣ – ಕೊಲೆ ಯತ್ನ ಆರೋಪಿಗೆ ಜಾಮೀನು

ಜುಲೈ 14 ರಂದು ಆರೋಪಿ ಅಬ್ದುಲ್ ಫಾರೂಕ್ ಎಂಬವರು ತನ್ನ ಪಿಕ್ ಅಪ್ ವಾಹನದಲ್ಲಿ ಎರಡು ದನ ಮತ್ತು ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಪುತ್ತೂರು ಸುಳ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜ್ಯೋತಿ ಸರ್ಕಲ್ ಬಳಿ ಕಾಯುತ್ತಿದ್ದು ಸದ್ರಿ ವಾಹನವನ್ನು ಠಾಣೆಯ ಹೆಚ್ ಸಿ ಒಬ್ಬರು ನಿಲ್ಲಿಸಲು ಸೂಚಿಸಿದಾಗ ಪಿಕ್ ಅಪ್ ವಾಹನದ ಚಾಲಕನು ವಾಹನವನ್ನು ನಿಲ್ಲಿಸದೆ ಸಿಬ್ಬಂದಿಗೆ ತಲವಾರವನ್ನು ತೋರಿಸುತ್ತ ಸಿಬ್ಬಂದಿಯ ಮೇಲೆ ಪಿಕ್ ಅಪ್ ವಾಹನವನ್ನು ಹಾಯಿಸುವರೇ ಪ್ರಯತ್ನ ಪಟ್ಟಿದ್ದು ಆ ಸಂದರ್ಭ ಸಿಬ್ಬಂದಿಯವರು ತಪ್ಪಿಸಿಕೊಳ್ಳುವ ಸಮಯ ಮಣ್ಣು ರಸ್ತೆಗೆ ಹಾರಿದ್ದು ಚಾಲಕನು ಪಿಕ್ ಅಪ್ ವಾಹನವನ್ನು ನಿಲ್ಲಿಸದೆ ಮುಂದೆ ಚಲಾಯಿಸಿಕೊಂಡು ಹೋಗಿ ಸುಳ್ಯ ಜೂನಿಯರ್ ಕಾಲೇಜು ಬಳಿಯಿರುವ ರಸ್ತೆಯೊಂದರಲ್ಲಿ ಪಿಕ್ ಅಪ್ ವಾಹನ ಮತ್ತು ಜಾನುವಾರುವನ್ನು ಬಿಟ್ಟು ಡಯಾನ ಎಂಬವರ ಮನೆಗೆ ಓಡಿಹೋಗಿ ಬಾಗಿಲು ಹಾಕಿಕೊಂಡರು ಎಂದು ಆರೋಪಿಸಲಾಗಿತ್ತು .ಆ ವೇಳೆಗೆ ಪೊಲೀಸರು ಬಂದು ಆತನನ್ನು ಬಂಧಿಸಿ ಪಿಕ್ ಅಪ್ ವಾಹನ ಮತ್ತು ಜಾನುವಾರು ಸಮೇತ ಠಾಣೆಗೆ ತೆಗೆದುಕೊಂಡು ಹೋಗಿ ಐ ಪಿ ಸಿ ಸೆಕ್ಷನ್ 353 , 307 , 212 , ಜೊತೆಗೆ 34 ಅಲ್ಲದೆ ಇನ್ನಿತರ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿದ್ದರು . ಬಳಿಕ ಆರೋಪಿಯನ್ನು ಕೊವಿಡ್ ಟೆಸ್ಟ್ ಗೆ ಒಳಪಡಿಸಿದಾಗ ಕೊರೊನ ಪಾಸಿಟಿವ್ ಇರುವುದು ದೃಢವಾಗಿತ್ತು . ಹಾಗಾಗಿ ಅರೋಪಿಯನ್ನು ಕೆಲ ದಿನಗಳ ಕಾಲ ಸುಳ್ಯದ ಸರಕಾರಿ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ನೀಡಿ ಗುಣವಾದ ಬಳಿಕ ಮಂಗಳೂರು ಜೈಲಿಗೆ ರವಾನಿಸಲಾಗಿತ್ತು .ಈ ಮದ್ಯೆ ಅರೋಪಿ ಪರ ಜಾಮಿನು ಅರ್ಜಿಯನ್ನು ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಲಾಗಿ ಅರೋಪಿ ಆ.4 ರಂದು ಷರತ್ತುಬದ್ಧ ಜಾಮಿನು ಆದೇಶವನ್ನು ಮಂಜೂರು ಮಾಡಿದೆ .ಆರೋಪಿಯ ಪರವಾಗಿ ವಕೀಲರಾದ ಎಂ ವೆಂಕಪ್ಪ ಗೌಡ , ರಾಜೇಶ್ ಬಿ ಜಿ ವಾದಿಸಿದ್ದರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading