ಎಡಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ತಾರಾವತಿ ಎ ಜು .31 ರಂದು ಸೇವೆಯಿಂದ ನಿವೃತ್ತರಾದರು. ಎಡಮಂಗಲ ಗ್ರಾಮದ ದೇವಸ್ಯ ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ತಿಮ್ಮಪ್ಪ ಗೌಡ ದೇವಸ್ಯ ಇವರ ಪತ್ನಿಯಾದ ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ . ಇವರು ಗುತ್ತಿಗಾರು ಗ್ರಾಮದ ಆರ್ನೋಜಿ ಕೃಷ್ಣಪ್ಪ ಗೌಡ ಮತ್ತು ಅಕ್ಕಯ್ಯ ದಂಪತಿಗಳ ಪುತ್ರಿ ಸ.ಹಿ.ಪ್ರಾ.ಶಾಲೆ ದೊಡ್ಡ ತೋಟದಲ್ಲಿ ಪ್ರಾಥಮಿಕ ಶಿಕ್ಷಣ , ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ , ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ . ನಂತರ ಸಿ.ಎಡ್ . ತರಬೇತಿಯನ್ನು ಶ್ರವಣಬೆಳಗೊಳದ ಹೇಮಾವತಿ ದೈಹಿಕ ಶಿಕ್ಷಣ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿರುತ್ತಾರೆ . 1985 ರಿಂದ ಸ.ಹಿ.ಪ್ರಾ.ಶಾಲೆ ಹರಿಹರಪಲ್ಲತ್ತಡ್ಕದಲ್ಲಿ 4 ವರ್ಷಗಳ ಸೇವೆ ಸಲ್ಲಿಸಿ , 1989 ರಲ್ಲಿ ಎಡಮಂಗಲ ಶಾಲೆಗೆ ವರ್ಗಾವಣೆಗೊಂಡು ಸುಮಾರು 31 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ . ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಜು .31 ರಂದು ನಿವೃತ್ತರಾದರು . ಇವರ ಹಿರಿಯ ಪುತ್ರಿ ಸುಪ್ರೀಯಾ ವಿವಾಹವಾಗಿ ರೋಶನ್ರೊಂದಿಗೆ ಕಡಬದ ಕೊಯಿಲದಲ್ಲಿ ನೆಲೆಸಿದ್ದಾರೆ . ಕಿರಿಯ ಪುತ್ರಿ ಯಶಸ್ವಿನಿ ಎಂ.ಬಿ.ಎ. ಪದವಿ ಮುಗಿಸಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
- Tuesday
- November 26th, 2024