ಸರಕಾರಿ ಪಿ ಯು ಕಾಲೇಜುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜ್ (ಜೂನೀಯರ್ ಕಾಲೇಜು) ವಿದ್ಯಾರ್ಥಿನಿ ಬಿ ಚಂದನ ವಾಷ್ಠರ್ ರವರು ಕಾಲೇಜಿನ ವಾಣಿಜ್ಯ , ಕಲೆ ಮತ್ತು ವಿಜ್ಞಾನದ ಒಟ್ಟು 305 ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ದ್ವಿತೀಯ ಪಿ ಯು ಪರೀಕ್ಷೆಯಲ್ಲಿ 600 ಅಂಕಗಳಿಗೆ 560 ಅಂಕಗಳನ್ನು ಪಡೆದು ಇಡೀ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ . ಮೈಸೂರಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುವಾಗ ಮೆಟ್ರಿಕ್ ವಾರ್ಷಿಕ ಪರೀಕ್ಷೆಯಲ್ಲೂ ಕೂಡ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಕ್ಕೆ ಮೈಸೂರು ರಾಜಮನೆತನದ ಶ್ರೀ ಯದುವೀರ ಮಹಾರಾಜರು ಚಂದನಾ ಅವರನ್ನು ಸಮ್ಮಾನಿಸಿ ಗೌರವಿಸಿದ್ದನ್ನು ಸ್ಮೃರಿಸಬಹುದು .ಸುಳ್ಯದ ಖ್ಯಾತ ಜ್ಯೋತಿಷಿ , ಚಿತ್ರ ನಿರ್ದೇಶಕ ಮತ್ತು ಸಾಹಿತಿಯಾದ ಎಚ್ .ಭೀಮರಾವ್ ವಾಷ್ಠರ್ ಮತ್ತು ಶ್ರೀಮತಿ ಯಶೋಧ ರವರ ಸುಪುತ್ರಿ ಆಗಿದ್ದಾಳೆ . ಸುಳ್ಯದ ಬೀರಮಂಗಲದಲ್ಲಿ ವಾಸಿಸುತ್ತಿದ್ದಾರೆ .
- Monday
- November 25th, 2024