📝 *ಪೂರ್ಣಿಮಾ ಪಂಜ ಚೊಕ್ಕಾಡಿ*
ಹಿಂದಿನಿಂದಲೂ ಶಿಕ್ಷಣದ ಮಹತ್ವವನ್ನು ಅರಿತಿರುವ ಜನ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ಕಾಳಜಿ ವಹಿಸಿರುವುದು ನಿಜ. ಗುರುಕುಲ ಪದ್ಧತಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ಆಧಾರಿಸಿಕೊಂಡು ಗುರುವಿನ ಬಳಿ ಬಂದು ಶಿಷ್ಯ ಶಿಕ್ಷಣ ಪಡೆಯುವಂತ ಪದ್ಧತಿ, ತದನಂತರ ಕ್ರಮೇಣ ಶಿಕ್ಷಣದಲ್ಲಿ ಬದಲಾವಣೆ ಕಂಡು ಗುರು ಶಿಷ್ಯರು ಒಂದೇಡೆ ಸೇರಿ ಅಲ್ಲಿಯೇ ಶಿಕ್ಷಣವನ್ನು ಮುಂದುವರಿಸುವ ಶಾಲೆ , ಮಕ್ಕಳಿಗೆ ನೀಡುವ ಕ್ರಿಯಾತ್ಮಕ ಚಟುವಟಿಕೆ, ಉತ್ತಮ ಪಾಲ್ಗೊಳ್ಳುವಿಕೆ, ಎಲ್ಲವೂ ಗಮನಿಸಿದರೆ ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ವ್ಯತ್ಯಾಸ ದ ಬೆಳವಣಿಗೆ ಏರಿಕೆಯಾಗುತ್ತಲೇ ಇದೆ.
ಆದರೆ ಈಗ ಇಂತಹ ಪರಿಣಾಮಕಾರಿಯಾದ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವೇ? ಈಗಿರುವ ಕೊರೋನಾ ಸಮಸ್ಯೆಯ ಕಾರಣಗಳಿಂದ ಶಿಕ್ಷಣದ ಬದಲಾವಣೆಯ ಹೊರೆಯನ್ನು ನಾವೇ ಭರಿಸಿಕೊಳ್ಳಬೇಕಷ್ಟೆ.
ಪೊಷಕರು ಮಕ್ಕಳಿಗೆ ಅದನ್ನು ಮಾಡಬೇಡ ಇದನ್ನು ಮಾಡಬೇಡ ಎಂದು ಹೇಳುವವರೆ ಹೆಚ್ಚು. ಅದರಲ್ಲೂ ತಂತ್ರಜ್ಞಾನ ಯುಗ. ಶಾಲೆಯಲ್ಲಿ ಮೊಬೈಲ್ ಬಳಕೆ ಶಿಕ್ಷರಿಗೂ ನಿಷಿದ್ಧ ವಾಗಿತ್ತು, ಸರ್ಕಾರದ ಆದೇಶವು ಹೌದು. ಮಕ್ಕಳಿಗೂ ಮೊಬೈಲ್ ಬಳಸಬಾರದೆಂದು ಹೇಳಿರುವ ಶಿಕ್ಷಣ ತಜ್ಞರು, ಅದನ್ನೇಲ್ಲಾ ಅನುಸರಿಸದ ಪೋಷಕರು ಈ ಕಾಲದಲ್ಲಿ ಮೊಬೈಲ್ ನ್ನೇ ಕೊಟ್ಟು ಸಮಧಾನ ಪಡಿಸುವ ಪೊಷಕರು. ಮನೆಯಲ್ಲಿ ಎಲ್ಲರೂ ಮೊಬೈಲ್ ನೋಡಿಕೊಂಡು ಕೂತರೆ ಮಕ್ಕಳು ಮೊಬೈಲ್ ಬೇಕು, ನನಗೂ ಮೊಬೈಲ್ ಕೊಡಿಸಬೇಕೆನ್ನುವುದರಲ್ಲಿ ತಪ್ಪಿಲ್ಲ. ಮಕ್ಕಳು ಕೇಳಿದ್ದಲ್ಲಿ ಕೆಲವು ಪೊಷಕರು ಏನೂ ಅರಿವಿಲ್ಲದಾಗೆ ನರ್ತಿಸಿ ಮಕ್ಕಳಿಗೆ ಪ್ರತಿಯೊಬ್ಬರಿಗೂ ಒಂದೊಂದರಂತೆ ಕೊಡಿಸುತ್ತಿದ್ದರು.
ಮೊಬೈಲ್ ಮಕ್ಕಳಿಗೆ ನೀಡದೇ ಇರೋಣ ವೆಂದರೆ ಕೊರೋನ ಬಿಟ್ಟಿತ್ತಾ!!? ಈ ವರ್ಷ ದ ಎಲ್ಲ ಶಿಕ್ಷಣವು ಮೊಬೈಲ್ ನ ಆಧರಿಸಿ ನಿಂತಿದೆ. ಮೊಬೈಲ್ ನ ಆಗು- ಹೋಗಿನ ಬಗ್ಗೆ ತಿಳಿದವರು, ನನಗೂ ಬೇಡ , ನಮ್ಮ ಮಕ್ಕಳಿಗೂ ಮೊಬೈಲ್ ಬೇಡ, ಅಯ್ಯೋ !!! ಮೂರು ನಾಲ್ಕು ತಿಂಗಳಿನಿಂದ ಮಕ್ಕಳು ಮೊಬೈಲ್ ನಲ್ಲಿಯೇ ಸಮಯ ಕಳೆಯುತ್ತಾರೆಂದು ಮಕ್ಕಳ ಹಿತದೃಷ್ಟಿಯಿಂದ ಮೊಬೈಲ್ ನ್ನೇ ಮಾರಾಟ ಮಾಡಿಬಿಟ್ಟ ಸಂಗತಿಯು ಇದೆ. ಈಗ ಅನ್ ಲೈನ್ ತರಗತಿ ಪ್ರಾರಂಭವಾಗುವುದು ಎಂದಾಗ ಕಷ್ಟದಲ್ಲಿರುವವರು ಮೊಬೈಲ್ ಖರೀದಿ ಮಾಡಿಕೊಂಡರು, ದುಡಿಮೆ, ಸಂಬಳ ಇಲ್ಲದ ಬಡ ಪೊಷಕರ ಪರಿಸ್ಥಿತಿ ಏನಾಗಿರಬಹುದು.?!
ಆನ್ ಲೈನ್ ತರಗತಿಗೆ ವಿರೋಧ ವ್ಯಕ್ತವಾಯಿತು ನಿಜ, ಆದರೆ ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸಿದಾಗ ಆನ್ ಲೈನ್ /ಆಡಿಯೋ, ವಿಡಿಯೋ ಮೂಲಕವಾದರೂ ಒಂದಿಷ್ಟು ಕಲಿತಾರು ಎಂದುಕೊಂಡವರು ಇದ್ದಾರೆ. ಮೂರು ನಾಲ್ಕು ತಿಂಗಳಿನಿಂದ ಮಗುವಿಗೆ ನೀಡಬೇಕಾದ ಶಿಕ್ಷಣ ಇಲ್ಲವಂತಾಗಿದೆ. ಯಾವುದೇ ಪ್ರತಿಭೆಯನ್ನು ಪ್ರೋತ್ಸಾಹಿಸುವ ತರಗತಿಯು ಇಲ್ಲವಾಗಿದೆ. ಮಗು ಮನೆಯಲ್ಲಿ ಇದ್ದು ಕಲಿಯುವುದಾದರೇನು?? ಪೋಷಕರು ಇವುಗಳನ್ನು ಓದಿ ಬರೆ ಎಂದರೆ ಅದನ್ನು ಕೇಳದ ಮಕ್ಕಳು ಇದ್ದಾರೆ, ಶಂಖದಿಂದಲೇ ಬಂದರೆ ತೀರ್ಥ ಎನ್ನುವಂತೆ ಶಿಕ್ಷಕರ ಮುಖಾಂತರ ಹೇಳಿದ್ದೆಲ್ಲಾ ಕೆಲಸ ಕಾರ್ಯ ಮಾಡುತ್ತಾನೆಂದು, ಆನ್ ಲೈನ್ ಶಿಕ್ಷಣಕ್ಕೆ ಸೈ ಎನ್ನುವವರ ಸಂಖ್ಯೆ ಇದೆ. ಹೇಗಾದರೂ ಆಗಲಿ ಯಾವುದೇ ಪರ್ಯಾಯ ದಾರಿ ಇಲ್ಲದಾಗ ಇರುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು.. ಮೊಬೈಲ್ ಎಂದರೆ ಮಕ್ಕಳಿಗೆ ಇಷ್ಟವಾದ ವಸ್ತು, ಕ್ಲಾಸ್ ನೆಪದಲ್ಲಿ ಮಕ್ಕಳ ಕೈಯಲ್ಲಿಯೇ ಮೊಬೈಲ್ ಇರುವುದಂತೂ ಸತ್ಯ, ಹಾಗೆ ಇನ್ನು ಅದರ ಉಪಯೋಗ, ದುರುಪಯೋಗದ ಬಗ್ಗೆ ಯೋಚಿಸಿದರೆ ಮೊಬೈಲ್ ನ್ನೇ ಆಧಾರಿಸುವ ಜಗತ್ತು ಇನ್ನು ಅದೆಷ್ಟೋ ಪರಿಣಾಮ ಮಕ್ಕಳ ಮೇಲೆ, ಆರೋಗ್ಯ ದ ಮೇಲೆ ಪರಿಣಾಮ ಬೀರುವ ಸಂಗತಿಗಳು ಇನ್ನೂ ನೋಡಬೇಕಿದೆ.
ಮಕ್ಕಳಿಗೂ ಮನೆಯಲ್ಲಿರುವುದು ಬೇಜಾರಾಗಿದೆ. ವಾಟ್ಸಪ್ ನಲ್ಲಿ ನೋಟ್ಸ್ ತರಗತಿ ನೀಡಿದಾಗ ಅವುಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಖ್ಯೆ ಹೆಚ್ಚು.
ಆದರೆ ಇದು ಎಲ್ಲವೂ ಮಕ್ಕಳ ಆಸಕ್ತಿ ಮೇಲೆ ನಿಂತಿದೆ.
ಮಕ್ಕಳಿಗೆ ನನಗೆ ಶಿಕ್ಷಣ ಬೇಕು, ಓದಲು ಬರೆಯಲು ಬೇಕು. ಹೊಸ ಪಠ್ಯಪುಸ್ತಕ ಬೇಕು, ಕೊರೋನಾ ಮುಗಿಯುವವರೆಗೂ ಶಾಲೆಗೆ ಹೋಗೋ ಪರಿಸ್ಥಿತಿಯೇ ಇಲ್ಲವೆಂದು ಮಕ್ಕಳಿಗೂ ಅರಿವಾಗಿದೆ. ಮಕ್ಕಳು ಶಾಲೆ ಗೆ ಬಂದು ಶಿಕ್ಷಣ ಪಡೆದುಕೊಳ್ಳುವ ವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಮರೆಮಾಚಿದೆ. ಈ ಶೈಕ್ಷಣಿಕ ವರ್ಷ ಶೂನ್ಯವೇ, ಹಾಗೆ ಕೊರೋನಾ ಸಂಖ್ಯೆ ಏರಿಕೆಯಾಗಿರುವುದರಿಂದ ಶಾಲಾ ಪ್ರಾರಂಭ ಬಗ್ಗೆ ಯೋಚನೆ ಮಾಡುವುದು ವ್ಯರ್ಥ. ಮನೆ ಮನೆಗೆ ಹೋಗಿ ಶಿಕ್ಷಣ ನೀಡಲು ಅಸಾಧ್ಯ.
ಆನ್ ಲೈನ್ ತರಗತಿಗಳು ಹಳ್ಳಿಗಳಲ್ಲಿ ಅಸಾಧ್ಯ. ಆದರೂ ಶಿಕ್ಷಕರಿಗೂ ಮಕ್ಕಳಿಗೂ ಪೊಷಕರಿಗೂ ಅನಿವಾರ್ಯವಾಗಿದೆ. ಮೊಬೈಲ್ ನಲ್ಲಿ ಕಲಿಕೆಯ ಬಗ್ಗೆ ಆಗು -ಹೋಗಿನ ಬಗ್ಗೆ ಯೋಚಿಸಿದರೆ ಮಕ್ಕಳಿಗಂತೂ ಬೇರೆ ಯಾವ ರೂಪ
ದಲ್ಲಿಯೂ ಶಿಕ್ಷಣ ಸಿಗುವುದು ಅನುಮಾನ.
ಆಡಿಯೋ ಮುಖಾಂತರ ಕಳುಹಿಸುದಾದರೆ, ಮಗುವಿಗೂ ನೋಡುವ ಬದಲು ಕೇಳುವ ಅವಕಾಶ ಸಿಕ್ಕಿದಂತಾಗುತ್ತದೆ. ಅದರ ಜೊತೆಗೆ ಮಕ್ಕಳ ಕೈಯಲಿಯೊಂದು ಪಠ್ಯ ಪುಸ್ತಕ ಇದ್ದರೆ ಮಗುವಿಗೂ ಅರ್ಥೈಸುವಲ್ಲಿ ಶಿಕ್ಷಕರು ಸಮರ್ಥರಾಗುತ್ತಾರೆ. ಹಾಗೆ ಮಗುವಿಗೆ ಮೊಬೈಲ್ ನ್ನು ನೋಡಲು ನೀಡುವುದರ ಬದಲು ದೂರದಲ್ಲಿಟ್ಟು ಆಲಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಒಟ್ಟಿನಲ್ಲಿ ಮಗು ಶಿಕ್ಷಣವನ್ನು ಪಡೆಯಬೇಕು ಇಲ್ಲವಾದಲ್ಲಿ ಶಿಕ್ಷಣ ಮಹತ್ವ ಕಳೆದುಕೊಳ್ಳುವುದು ಅಂತು ಸತ್ಯ.
ಕೊರೋನಾ ಸಂಖ್ಯೆ ಹೆಚ್ಚಳವಾಗುವುದನ್ನು ನೋಡಿದರೆ ಮಗು ಶಾಲೆಯಲ್ಲಿ ಹೋಗಿ ಶಿಕ್ಷಣ ಕಲಿಯುವ ಬಗ್ಗೆ ಯೋಚನೆ ಮಾಡಬೇಕಿಲ್ಲ. ಆದರೂ ಈಗ ನಡೆಸುವ ಆನ್ ಲೈನ್ ಕಲಿಕೆಯು ಕಲಿಯುವ, ಆಸಕ್ತಿ ಇರುವ ಮಕ್ಕಳಿಗೆ 75% ಪರಿಣಾಮಕಾರಿಯಾದಿತು. ಮಗುವಿನ ಕಲಿಯುವ ಮಟ್ಟ ಈಗಾಗಲೇ ಕುಂಠಿತವಾಗುತ್ತಿದೆ. ಈ ಹಿಂದೆ ಕಲಿತಿರುವ ಶಿಕ್ಷಣ ಈ, ಮೂರು ನಾಲ್ಕು ತಿಂಗಳಿನಲ್ಲಿಯೇ ಅಕ್ಷರ ಪರಿಚಯವಿಲ್ಲವಂತಾಗಿದೆ. ಇನ್ನು ಮುಂದಕ್ಕೆ ಕಲಿತಿರುವ ವಿಷಯಗಳನ್ನು ಮರೆಯದಂತೆ ಮಾಡಲು ಇದೊಂದು ಶಿಕ್ಷಕರ ಪ್ರಯತ್ನದ ದಾರಿ. ಎಷ್ಟೊಂದು ಶಿಕ್ಷಕರು ಈ ತರಗತಿಗಳಿಗೆ ಕಷ್ಟ ಪಟ್ಟು ಮೊಬೈಲ್ ನಲ್ಲಿಯೇ ಪೂರ್ವ ತಯಾರಿ ಮಾಡಿಕೊಂಡು ಕೆಲವೊಂದು ಶಿಕ್ಷಕರಿಗೆ ಕಡಿಮೆ ಸಂಬಳಕ್ಕೆ, ಇಂಟರ್‌ನೆಟ್ ಗೂ ಹಣವಿಲ್ಲದೆ ಸಂಬಳವಿಲ್ಲದೆ ಮಕ್ಕಳ ಭವಿಷ್ಯ ಕ್ಕಾಗಿ ದುಡಿಯುತ್ತಿದ್ದಾರೆ. ಹಾಗೆ ಪೊಷಕರು ದುಡಿಮೆ ಇಲ್ಲದೆ ಹಣ ಇಲ್ಲದೆ ಇಂಟರ್‌ನೆಟ್ ಮಕ್ಕಳ ಭವಿಷ್ಯ ಕ್ಕಾಗಿ ಬೇಕೆಂದು ಕಡು ಬಡವರು ಕೂಡ ಅನಿವಾರ್ಯತೆಯಿಂದ ಬಳಸುತ್ತಿದ್ದಾರೆ. ಅಥವಾ ವಾರಕ್ಕೊಂದು ಸಲ ಯಾವುದೇ ಇಂಟರ್‌ನೆಟ್ ಮೊಬೈಲ್ ಸೌಲಭ್ಯವನ್ನು ಹೊಂದದ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡು ಅಂತರವನ್ನು ಕಾಯ್ದು ಜ್ಞಾನಾರ್ಜನೆ ಮಾಡಲು ಅವಕಾಶ ಇರುವ ಕಾರಣ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಕಾರ್ಯ ಉತ್ತಮವೆಂದು ಹೇಳಬಹುದು ಹಾಗೂ ಪ್ರತಿಯೊಂದು ಪೊಷಕರು ನಮ್ಮ ಪ್ರಯತ್ನ ಕ್ಕೆ ಮಕ್ಕಳಿಗೆ ವಿಷಯಗಳ ತಲುಪಿಸುವ ಕೊಂಡಿಯಾಗಲಿ. ಕೊರೋನಾ ಪ್ರತಿಯೊಬ್ಬರ ಬದುಕನ್ನು ಬದಲಾಯಿಸಿದಲ್ಲದೆ ಶಿಕ್ಷಣದ ದಿಕ್ಕನ್ನು ಬದಲಾಯಿಸಿತು.ಮಾದರಿ ಶಿಕ್ಷಣದಲ್ಲೂ ಬದಲಾವಣೆ ಕಂಡಿತು, ಮಕ್ಕಳಿಗಂತೂ ಕೊರೊನಾನಿಂದಾಗಿ ಈ ಹೊಸ ಆನ್ ಲೈನ್ ಶಿಕ್ಷಣ ಮುಂದಕ್ಕೂ ಮರೆಯದಂತಿದೆ.