ಪೈಂಬೆಚ್ಚಾಲು; ತ್ಯಾಗ ಬಲಿದಾನಗಳ ಮಹಾ ಸಂಕೇತವಾದ ಬಕ್ರೀದ್ ಹಬ್ಬವನ್ನು , ಪೈಂಬೆಚ್ಚಾಲಿನಲ್ಲಿ ಸರ್ಕಾರದ ನಿಯಮಗಳನ್ನೂ, ಉಲಮಾಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಹಳ ಸರಳ ಸಂಭ್ರಮದಿಂದ ಆಚರಿಸಲಾಯಿತು.
ಪೆರ್ನಾಳ್ ನಮಾಝ್ ಹಾಗು ಖುತುಬ ಕ್ಕೆ ಖತೀಬ್ ಉಸ್ತಾದ್ ಬಹು ಅಬ್ದುನ್ನಾಸಿರ್ ಸುಖೈಫಿ ನೇತೃತ್ವ ನೀಡಿದರು.
ಪೆರ್ನಾಳ್ ಸಂದೇಶ ಭಾಷಣ ಮಾಡಿದ ಅವರು ಸಮಸ್ಯೆಗಳು, ಸಂಕಷ್ಟಗಳು ಸದಾ ಮನುಷ್ಯರನ್ನು ಕಾಡುತ್ತಿರುತ್ತದೆ. ಆದರೆ ವಿಶ್ವಾಸಿಗಳು ಅದರಲ್ಲಿ ನಿರಾಶೆ ಹೊಂದದೆ, ಜೀವನದಲ್ಲಿ ಜಿಗುಪ್ಸೆಗೊಳಗಾಗದೆ, ಎಲ್ಲವನ್ನೂ ವಿಶ್ವಾಸದಿಂದ, ಆತ್ಮಸ್ಥೈರ್ಯ ದಿಂದ ಎದುರಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಇದಾಗಿದೆ ಈ ಬಕ್ರೀದ್ ನಮಗೆ ನೀಡುವ ಸಂದೇಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್, ಪ್ರ.ಕಾರ್ಯದರ್ಶಿ ಅಲ್ ಹಾಜ್ ಬಿ.ಯಂ.ಇಸ್ಮಾಯಿಲ್ ಸಖಾಫಿ, ಕೋಶಾಧಿಕಾರಿ ಕೆ.ಎಂ.ಮುಹಮ್ಮದ್ ಹಾಜಿ, ಉಪಾಧ್ಯಕ್ಷರಾದ ಟಿ.ಎಂ.ಅಬ್ದುಲ್ ರಹಿಮಾನ್, ಎಚ್.ಐ.ಎಮ್.ಅಧ್ಯಾಪಕರಾದ ಫಾರೂಖ್ ಮದನಿ ಸೆರ್ಕಳ, ಎಸ್ ವೈಎಸ್ ಮಾಜಿ ಅಧ್ಯಕ್ಷರಾದ ಪಿ.ಬಿ.ಮೂಸ ಹಾಜಿ, ಕಾರ್ಯದರ್ಶಿ ರಫಿಖ್ ಪಿ.ಎಂ. ಎಸ್ಸೆಸ್ಸೆಫ್ ಸೆಕ್ಟರ್ ಉಪಾಧ್ಯಕ್ಷರಾದ ಸಿದ್ದೀಖ್ ಸಖಾಫಿ ಪಿ.ಎ. ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ. ಎಂ. ಎಸ್ಕೆ ಎಸ್ಸೆಸ್ಸೆಫ್ ಅಧ್ಯಕ್ಷರಾದ ಅಬ್ದುಲ್ಲ ಫೈಝಿ ಡಿ.ಯಂ. ಸಹಿತ ಜಮಾಅತ್ ಹಾಗು ಊರಿನ ಸರ್ವ ಸಂಘಟನೆಗಳ ನಾಯಕರೂ, ಕಾರ್ಯಕರ್ತರೂ ಉಪಸ್ಥಿತರಿದ್ದರು.
- Thursday
- November 14th, 2024