ರಾಜ್ಯದ ಎಲ್ಲಾ ಎಸ್ಕಾಂ ಗಳಲ್ಲಿ ಸುಮಾರು 15-20 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ರಾತ್ರಿ ಹಗಲು ಕಡಿಮೆ ವೇತನಕ್ಕೆ ದುಡಿಯುತ್ತಿರುವ ಕಾರ್ಮಿಕರ ಬಗ್ಗೆ ಸರಕಾರ ಕಾಳಜಿ ವಹಿಸುತ್ತಾ ಕಣ್ಣು ಬಿಟ್ಟಂತೆ ಕಂಡುಬರುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡ ಮುಖ್ಯಮಂತ್ರಿ ಪತ್ರ ಬರೆದು ” ಸರಕಾರಕ್ಕೆ ಹೊರೆಯಾಗದಂತೆ ಸರಕಾರದಿಂದಲೇ ನೇರ ಗುತ್ತಿಗೆ ಮುಖಾಂತರ ವೇತನ ನೀಡಬೇಕು” ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು.
ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ಬಗ್ಗೆ ಎಲ್ಲಾ ಎಸ್ಕಾಂ ಗಳಿಗೆ ಪ್ರಶ್ನಿಸಿದ್ದು ನೇರಗುತ್ತಿಗೆ ಕಾರ್ಮಿಕರನ್ನಾಗಿ ಪರಿಗಣಿಸುವ ಬಗ್ಗೆ, ತೆಲಂಗಾಣ ಸರಕಾರ ಗುತ್ತಿಗೆ ಕಾರ್ಮಿಕರನ್ನು ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿರುವಂತೆ ಇಲ್ಲಿಯೂ ಮಾಡಲು ಸಾಧ್ಯವಿದೆಯೇ ಎಂದು ಮಾಹಿತಿಯೊಂದಿಗೆ ಅಭಿಪ್ರಾಯ ನೀಡುವಂತೆ ಸೂಚಿಸಿದೆ.
- Monday
- November 25th, 2024