
ಚೆನ್ನಾವರ ಎಸ್ ವೈಎಸ್ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಈದುಲ್ ಅಝ್ಹಾ ಪ್ರಯುಕ್ತ 50 ಕುಟುಂಬಗಳಿಗೆ ಈದ್ ಆಚರಿಸಲು ಬೇಕಾದ ತುಪ್ಪಕ್ಕಿ,ತುಪ್ಪ , ಸಕ್ಕರೆ ಪಾನೀಯಪದಾರ್ಥ, ತರಕಾರಿ, ಮಸಾಲ ಪದಾರ್ಥಗಳನ್ನೊಳಗೊಂಡ ಕಿಟ್ ವಿತರಿಸಲಾಯ್ತು.
ಪ್ರಸ್ತುತ ಕಿಟ್ ಗಳಿಗಾಗಿ ಸಂಘಟನೆಯ ಹೆಚ್ಚಿನ ಕಾರ್ಯಕರ್ತರು ವಿದೇಶದಿಂದಲೂ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರವನ್ನು ನೀಡಿರುತ್ತಾರೆ.
ಈ ಕಾರ್ಯ ಪ್ರವೃತ್ತಿಗೆ ಸಹಕರಿಸಿದ ಎಲ್ಲರಿಗೂ ಪ್ರತ್ಯೇಕ ಪ್ರಾರ್ಥನೆಯನ್ನು ನಡೆಸಲಾಯ್ತು.
ಜಮಾಅತ್ ಅಧ್ಯಕ್ಷ ಕರೀಮ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, KCF ಕಾರ್ಯಕರ್ತ ಯೂಸುಫ್ ಹಾಜಿ ಸ್ವಾಗತಿಸಿದರು. ಸಿ.ಪಿ ಅಬೂಬಕರ್ ಮದನಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು. ಎಸ್ ವೈಎಸ್ ಅಧ್ಯಕ್ಷ ಇಸ್ಮಾಈಲ್ ಸಅದಿ, ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಈಲ್ ಹನೀಫಿ, ಇಕ್ಬಾಲ್ ಮದನಿ, ಮುಹಮ್ಮದ್ ಹಾಜಿ ಸಿಪಿ, ಅಮೀನ್ ಝುಹ್ರಿ , ಮುತ್ತಲಿಬ್ ಹಾಜಿ, ಅಬ್ದಲ್ಲ ಪಿ.ವಿ, ಅಹ್ಮದ್ ಕುಂಞಿ, ನಿಝಾರ್ ಮುಸ್ಲಿಯಾರ್ , ಶಂಸುದ್ದೀನ್ ಎಮ್ ಸಿ, ಅಬ್ದುನ್ನಾಸಿರ್ ಎಪಿ, ಆಸಿಫ್ ಪಿಎಮ್, ಮುನಾಝ್, ಅಬ್ದುಲ್ ಬಾಸಿತ್ ಮೊದಲಾದವರು ಉಪಸ್ಥಿರಿದ್ದರು.