Ad Widget

*ಸುಳ್ಯ ತಾಲೂಕಿನಾದ್ಯಂತ ಬಕ್ರೀದ್ ಹಬ್ಬದ ಸಂಭ್ರಮ*

ಮುಸಲ್ಮಾನ ಬಾಂಧವರ ಪವಿತ್ರ ಹಬ್ಬಗಳಲ್ಲಿ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ಬಕ್ರೀದ್ ಹಬ್ಬವು ಇಂದು ತಾಲೂಕಿನಾದ್ಯಂತ ಸಂಭ್ರಮದ ಕಳೆಯನ್ನು ಕಂಡಿತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಮಸೀದಿಗಳ ದ್ವಾರಗಳು ಇಂದು ತೆರೆಯಲ್ಪಟ್ಟವು.  ಈ ಬಾರಿಯ ಹಬ್ಬದ ನಮಾಜಿನಲ್ಲಿ ಮಸೀದಿಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸರಕಾರವು ಈಗಾಗಲೇ ಆದೇಶವನ್ನು ನೀಡಿದ್ದು, ತಾಲೂಕಿನ ಎಲ್ಲಾ ಮಸೀದಿಗಳ ಆಡಳಿತ ಸಮಿತಿ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸ್ಥಳೀಯ ಜಮಾಹತ್ ರಿಗೆ ನಮಾಜಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದರು.

. . . . .

ಅದರಂತೆ ಮಸ್ಜಿದ್ ಗಳಿಗೆ ನಮಾಜಿಗೆ ಬರುವ ಎಲ್ಲಾ ಮುಸಲ್ಮಾನ ಬಾಂಧವರು ತಮ್ಮ ತಮ್ಮ ಮನೆಗಳಿಂದ ಅಂಗ ಸ್ಥಾನವನ್ನು ನಿರ್ವಹಿಸಿಕೊಂಡು ನಮಾಜಿನಲ್ಲಿ ಬಳಸುವ  ಮುಸಲ್ಲವನ್ನು ತಮ್ಮ ತಮ್ಮ ಮನೆಗಳಿಂದ ತಂದು ಮಸೀದಿಗಳಲ್ಲಿ ಅಂತರವನ್ನು ಪಾಲಿಸಿಕೊಂಡು ನಮಾಜನ್ನು ನಿರ್ವಹಿಸಿದರು. ಅಂತರ ಪಾಲಿಸುವ ಉದ್ದೇಶಗಳಿಂದ ಈ ಬಾರಿಯ ಹಬ್ಬಗಳಲ್ಲಿ ಯಾರೂ ಕೂಡ ಆಲಿಂಗನ ವನ್ನು ಮಾಡಿಕೊಳ್ಳದೆ, ಹಸ್ತಲಾಘವ ಮಾಡಿಕೊಳ್ಳದೆ ಇರುವುದು ಕಂಡು ಬಂದಿತು. ಮಸೀದಿ ಪರಿಸರಗಳಲ್ಲಿ ನಮಾಜ್ ಮುಗಿದನಂತರ ಜನ ಸೇರದಂತೆ ಕಟ್ಟುನಿಟ್ಟಿನ ಕ್ರಮವನ್ನು ವಹಿಸಿಕೊಂಡಿದ್ದರು.
ಒಟ್ಟಿನಲ್ಲಿ ಬಹಳ ದಿನಗಳ ನಂತರ ಮಸೀದಿ ಆವರಣದಲ್ಲಿ ಒಂದಾದ ಮುಸಲ್ಮಾನ ಬಾಂಧವರು ಸಡಗರದಿಂದ ಈದ್ ಆಚರಿಸಿಕೊಂಡರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!