ದೇಶದ ಸಂವಿಧಾನದಲ್ಲಿ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗವನ್ನು ಗುರುತಿಸಲಾಗುತ್ತಿದೆ. ದೇಶದ ಇನ್ನಿತರ ಅಂಶಗಳಾದ ಆರೋಗ್ಯ, ಕಲೆ,ಸಾಹಿತ್ಯ, ವಿಜ್ಞಾನ,ಇವುಗಳು ಯಾವುದನ್ನು ಉದ್ಯಮವಾಗಿ ಬಿಂಬಿಸ ಲಾಗುತ್ತಿಲ್ಲ. ಅದೇ ರೀತಿ ಪತ್ರಿಕೆಗಳು ಕೂಡ ಪತ್ರಿಕಾರಂಗ ವಾಗಿಯೇ ಇರಬೇಕೇ ವಿನಹ ಯಾವತ್ತಿಗೂ ಪತ್ರಿಕೋದ್ಯಮ ವಾಗ ಬಾರದು. 1843 ರಿಂದ 1947 ರವರೆಗೆ ದೇಶದಲ್ಲಿ ಪತ್ರಿಕಾರಂಗ ದೇಶದಲ್ಲಿ ಜಾಗೃತಿ ಮತ್ತು ಸ್ವಾತಂತ್ರ್ಯ ಕ್ರಾಂತಿಯನ್ನು ಉಂಟು ಮಾಡುತ್ತಿತ್ತು. ಪತ್ರಿಕಾರಂಗವೂ ಜನರಿಗೆ ಜಾಗೃತಿಯನ್ನು ಮೂಡಿಸಬೇಕೇ ವಿನಹ ಭಯಬೀತ ಗೊಳಿಸುವುದು ಸರಿಯಲ್ಲ ಎಂದು ಜುಲೈ 30ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಸುಳ್ಯ ಕಾರ್ಯನಿರತಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಶಿವರಾಮ ಕಾರಂತ ಬಾಲವನ ಪುತ್ತೂರು ಇದರ ಆಡಳಿತ ಅಧಿಕಾರಿ ಸುಂದರ್ ಕೇನಾಜೆ ತಮ್ಮ ಅನಿಸಿಕೆಯನ್ನು ಮಂಡಿಸಿದರು. ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳು ತುಂಬಾ ಆತಂಕದಲ್ಲಿದೆ. ಇದಕ್ಕೆಲ್ಲ ಮೂಲ ಕಾರಣ ಜನಸಾಮಾನ್ಯರು ಈ ವ್ಯವಸ್ಥೆಯಿಂದ ದೂರ ಸರಿಯುತ್ತಿರುವುದು. ಈ ರೀತಿಯಾ ದಲ್ಲಿ ಬಹಳಷ್ಟುಸಂಕಷ್ಟವನ್ನು ಮುಂದಿನ ದಿನಗಳಲ್ಲಿ ಮಾಧ್ಯಮಗಳು ಎದುರಿಸಬೇಕಾದಿತ್ತು ಎಂದು ಆತಂಕವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸುಳ್ಯ ತಾ ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಮಾತನಾಡಿ ಮಾಧ್ಯಮಗಳಿಂದಾಗಿ ಗ್ರಾಮ ಮತ್ತು ನಗರದಲ್ಲಿ ಉಂಟಾಗುವ ವಿವಿಧ ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಅದಕ್ಕೆ ಕೂಡಲೇ ಸ್ಪಂದಿಸುವ ಅವಕಾಶ ನಮಗೆ ಲಭಿಸುತ್ತದೆ.ಪತ್ರಿಕಾ ಸ್ವತಂತ್ರ ನಿಷ್ಪಕ್ಷವಾಗಿ ಮುಂದುವರಿಯಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುಳ್ಯ ಪೊಲೀಸ್ ಠಾಣಾಧಿಕಾರಿ ಎಂಆರ್ ಹರೀಶ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಕಂಡುಬರುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆನ್ಲೈನ್ ನ್ಯೂಸುಗಳು ಎಂದಿಗೂ ಮುದ್ರಣ ಮಾಧ್ಯಮಕ್ಕೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಇದರಿಂದ ದೂರ ಸರಿಯಲಿದ್ದಾರೆ. ಪತ್ರಿಕಾರಂಗವೂ ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳ ಕಾಲ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ ಶಂಕರ್ ಪೆರಾಜೆ ರವರನ್ನು ಸಂಘದ ವತಿಯಿಂದ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಮರ ಸುಳ್ಯ ಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನ ಪಾರೆ ವಹಿಸಿದ್ದರು.
ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯ ಗಂಗಾಧರ ಕಲ್ಲಪಳ್ಳಿ, ಸಂಘದ ಗೌರವಾಧ್ಯಕ್ಷ ತೇಜೇಶ್ವರ್ ಕುಂದಲ್ಪಾಡಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್, ತಾಲೂಕು ಸಮಿತಿ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಯುವಜನಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಸಮಾಜಿಕ ಕಾರ್ಯಕರ್ತ ಡಿಎಂ ಶಾರಿಕ್, ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕೋ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ವಕ್ತಾರ ನಂದರಾಜ್ ಸಂಕೇಶ್, ಭವಾನಿ ಶಂಕರ್ ಕಲ್ಮಡ್ಕ, ನ.ಪಂ ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಹನೀಫ್ ನಾವೂರು, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಸಮಿತಿ ಸದಸ್ಯರುಗಳಾದ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿ , ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಸಂಘದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ವಂದಿಸಿದರು. ಸಂಘದ ಉಪಾಧ್ಯಕ್ಷ ಲೋಕೇಶ್ ಗುಡ್ಡಮನೆ, ಕೋಶಾಧಿಕಾರಿ ಸತೀಶ್ ಹೊದ್ದೆಟ್ಟಿ, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಸಹಕರಿಸಿದರು. ಕು. ಮೇಘಾ ಕೃಷ್ಣ ಪ್ರಾರ್ಥಿಸಿದರು.