Ad Widget

ಮಾಜಿ ಶಾಸಕ ಕೂಜುಗೋಡು ಕಟ್ಟೆಮನೆ ದಿ. ವೆಂಕಟ್ರಮಣ ಗೌಡರ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ನೇತೃತ್ವದಲ್ಲಿ ಇಂದು 2 ವಿಶೇಷ ಲಕೋಟೆಗಳು ಬಿಡುಗಡೆಗೊಳಿಸಲ್ಪಟ್ಟಿತು . ಪುತ್ತೂರು ಅಂಚೆ ವಿಭಾಗೀಯ ತರಬೇತಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧಾರ್ಮಿಕ ಚಿಂತನಕಾರ , ಸಾಮಾಜಿಕ ಸುಧಾರಕ , ರಾಜಕೀಯ ಹುರಿಯಾಳು ಮದ್ರಾಸು ರಾಜ್ಯದಡಿಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಅವಿಭಜಿತ ಪುತ್ತೂರು ಕ್ಷೇತ್ರದಿಂದ ಪ್ರಥಮ ಬಾರಿಗೆ ಚುನಾಯಿತರಾದ ಶ್ರೀ ಕೂಜಗೋಡು ಕಟ್ಟೆಮನೆ ದಿವಂಗತ ವೆಂಕಟ್ರಮಣ ಗೌಡರ 115 ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ವಿಶೇಷ ಲಕೋಟೆ , ಮತ್ತು ಪಶ್ಚಿಮ ಘಟ್ಟದಲಿ ಕಂಡುಬರುತ್ತಿರುವ ಅಳಿವಿನಂಚಿನಲ್ಲಿರುವ ಸಿಂಗಳೀಕ ಅಥವಾ ಸಿಂಹ ಬಾಲದ ಮಂಗನ ಭಾವಚಿತ್ರವಿರುವ ವಿಶೇಷ ಲಕೋಟೆಗಳನ್ನು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾಗಿರುವ ಸಭಾಧ್ಯಕ್ಷ ಕೆ.ವಿ.ಅನಂತರಾಮು ಅವರು ಅನಾವರಣ ಗೊಳಿಸಿದರು .

. . . . .

ಜೋಸೆಫ್ ರೋಡ್ರಿಗಸ್ , ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕರು ಸಭಾ ಉಪಸ್ಮಿತರನ್ನು ಸ್ವಾಗತಿಸಿದರು . ಮುಖ್ಯ ಅತಿಥಿಗಳಾದ ದಿವಂಗತ ವೆಂಕಟ್ರಮಣ ಗೌಡರ ಸುಪುತ್ರರಾದ ಟಿ.ವಿ. ಸುಧೀರ್ ಅವರು ಇಲಾಖೆಯ ಈ ಕಾರ್ಯವನ್ನು ಶ್ಲಾಘಿಸಿದರು . ಇನ್ನೊಬ್ಬ ಅತಿಥಿಗಳಾದ ಜೆರಾಲ್ಡ್ ವಿಕ್ರಮ್ ಲೋಬೋ , ಹಿರಿಯ ವೈಜ್ಞಾನಿಕ ಅಧಿಕಾರಿ , ಪಿಲಿಕುಳ ಜೈವಿಕ ತೋಟ , ಮಂಗಳೂರು ಇವರು ಮಾತನಾಡಿ ನಶಿಸುತ್ತಿರುವ ವನ್ಯ ಜೀವಿಗಳ ಸಂತಾನಾಭಿವೃದ್ಧಿಯ ಬಗ್ಗೆ ಸರಕಾರವು ಜೈವಿಕ ಇಲಾಖೆಯ ಮೂಲಕ ಕೈಗೊಂಡಿರುವ ವಿವಿಧ ಯೋಜನೆಗಳನ್ನು ವಿವರಿಸಿದರು ಹಾಗೂ ಸಿಂಗಳೀಕನ ವಿಶೇಷ ಲಕೋಟೆಯ ಅನಾವರಣದ ಮೂಲಕ ಜನ ಜಾಗೃತಿಯನ್ನು ಮೂಡಿಸುತ್ತಿರುವ ಇಲಾಖಾ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು . ಹಿರಿಯ ಅಂಚೆ ಅಧೀಕ್ಷಕರು ಮಾತನಾಡಿ ಕೋವಿಡ್ 19 ಸಾಂಕ್ರಾಮಿಕ ರೋಗದ ಈ ಪರಿಸ್ಮಿತಿಯಲೂ , ವಿಶೇಷ ಲಕೋಟೆಯ ಬಿಡುಗಡೆಗೆ ಶ್ರಮಿಸಿದ ಎಲಾ , ಸಹನೌಕರರನ್ನೂ ಹಿರಿಯ ಅಧಿಕಾರಿಗಳನ್ನೂ ಮತ್ತು ಭಾವಚಿತ್ರದ ವಿನ್ಯಾಸ ಹಾಗೂ ಲಕೋಟೆಯಲ್ಲಿ ಮುದ್ರಿತ ಪದಪುಂಜಕ್ಕೆ ಸಹಾಯ ಮಾಡಿದ ಎಲ್ಲರನ್ನೂ ಸ್ಮರಿಸಿಕೊಂಡರು . ಸಾರ್ವಜನಿಕರು ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಲು ವಿನಂತಿಸಿದರು . ಶ್ರೀ ಮೋಹನ್ ಬಿ , ಸ್ನಾನೀಯ ಸಹಾಯಕ ಅಂಚೆ ಅಧೀಕ್ಷಕರು ವಂದನಾರ್ಪಣೆಗೈದರು . ಸಭೆಯಲ್ಲಿ ಶ್ರೀ ಲೋಕನಾಥ , ಸಹಾಯಕ ಅಂಚೆ ಅಧೀಕ್ಷಕರು , ಪುತ್ತೂರು ಉಪವಿಭಾಗ , ಪುತ್ತೂರು , ಶ್ರೀ ಸುದೀಪ್ ಕುಮಾರ್ , ಅಂಚೆ ನಿರೀಕ್ಷಕರು , ಸುಳ್ಳ ಉಪ ವಿಭಾಗ , ಸುಳ್ಯ , ಶ್ರೀ ಗುರುಪ್ರಸಾದ್ ಮಾರುಕಟ್ಟೆ ಕಾರ್ಯನಿರ್ವಹಣಾಧಿಕಾರಿ , ಹಾಗೂ ವಿಭಾಗೀಯ ಕಛೇರಿಯ ನೌಕರರು ಉಪಸ್ಮಿತರಿದ್ರರು , ಶ್ರೀ ಉದಯೇಶ ಕೆದಿಲಾಯರು ಕಾರ್ಯಕ್ರಮವನ್ನು ನಿರೂಪಿಸಿದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!