Ad Widget

ಸಂಪುಟ ಪುನರ್ ರಚನೆ ಶೀಘ್ರ : ಸುಳ್ಯ ಶಾಸಕ ಎಸ್.ಅಂಗಾರ ಮಂತ್ರಿ ಸಾಧ್ಯತೆ ಹೆಚ್ಚು

ಬಿ.ಎಸ್ ಯಡಿಯೂರಪ್ಪ ‌ನೇತ್ರತ್ವದ ರಾಜ್ಯ ಸರ್ಕಾರವು ಒಂದು ವರ್ಷದ ಅವಧಿ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸುವ ಸಾಧ್ಯತೆ ಇದ್ದು, ಸುಳ್ಯ ಶಾಸಕ ಎಸ್.ಅಂಗಾರರು ಸಚಿವರಾಗುವ ಸಾಧ್ಯತೆ ನಿಚ್ಚಳವಾಗಿದೆ. ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಮುಜುರಾಯಿ ಇಲಾಖೆ ಮಂತ್ರಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೈ ಬಿಟ್ಟು ಇವರ ಬದಲಿಗೆ ಅಂಗಾರರನ್ನು ಮಂತ್ರಿ ಸ್ಥಾನಕ್ಕೆ ತರುವ ಸಾಧ್ಯತೆಯಿದೆ. ಕೋಟ ಶ್ರೀನಿವಾಸ ಪೂಜಾರಿಯವರನ್ನು ಮುಂದಿನ ದಿನಗಳಲ್ಲಿ ಪರಿಷತ್ ಸಭಾಪತಿ ಮಾಡುವ ಸಾಧ್ಯತೆಗಳಿದ್ದು, ಇದರಿಂದ ಕರಾವಳಿ ಭಾಗದ ಕೋಟಾದಡಿ ಸುಳ್ಯ ಶಾಸಕರನ್ನು ಮಂತ್ರಿ ಮಾಡಲಾಗುವುದು ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಅತ್ಯಂತ ಹಿರಿಯ ಹಾಗೂ ಯಾವುದೇ ಕಪ್ಪುಚುಕ್ಕೆ ಇಲ್ಲದ ಶಾಸಕರಾಗಿರುವ ಅಂಗಾರರಿಗೆ ಈ ಹಿಂದೆಯೇ ಶಾಸಕ ಸ್ಥಾನ ಒಲಿಯಬೇಕಿತ್ತು. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವಾದ ಕಾರಣ ಅಂಗಾರರು ಮಂತ್ರಿಯಾಗಿರಲಿಲ್ಲ. ಈ ಬಾರಿ ಹೈಕಮಾಂಡ್ ಮುಂದೆ ಅಂಗಾರರ ಹೆಸರು ಮುಂಚೂಣಿಯಲ್ಲಿದ್ದು, ಯಡಿಯೂರಪ್ಪನವರ ಪಟ್ಟಿಯಲ್ಲಿಯೂ ಅಂಗಾರರ ಹೆಸರು ಇದೆ ಎಂದು ಹೇಳಲಾಗುತ್ತಿದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!