Ad Widget

ಜಾನುವಾರು ಸಾಗಾಟಗಾರರ ಮೇಲೆ ದಾಳಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ ಬೆನ್ನಲ್ಲೇ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಮತ್ತು ದಿಢೀರ್ ವರ್ಗಾವಣೆ – ಎಸ್.ಡಿ.ಪಿ.ಐ ಖಂಡನೆ

ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ದಾಳಿ ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದ.ಕ ಜಿಲ್ಲಾಧಿಕಾರಿಯವರು ಆದೇಶ ನೀಡಿದ ಕಾರಣಕ್ಕಾಗಿ ಸಂಘಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಧಿಕಾರಿಯವರನ್ನೇ ಕೊಲೆ ಮಾಡುವಂತಹ ಘೋರ ಸಂದೇಶ ರವಾನಿಸಿರುವುದು ಮತ್ತು ಜಿಲ್ಲಾಧಿಕಾರಿಯವರು ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ದಿಢೀರ್ ಆಗಿ ಸರ್ಕಾರ ವರ್ಗಾವಣೆ ಮಾಡಿರುವುದು ಆಘಾತಕಾರಿ ನಡೆ ಮತ್ತು ಸರ್ವಾಧಿಕಾರದ ಪರಮಾವಧಿಯಾಗಿದೆ ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ. ಸಂಘಪರಿವಾರದ ಗೂಂಡಾಗಳಿಗೆ ಈ ರೀತಿಯ ಕೊಲೆ ಬೆದರಿಕೆಯಂತಹ ಹೇಳಿಕೆ ನೀಡಲು ಪ್ರೇರಣೆ ಮತ್ತು ಧೈರ್ಯವೇನೆಂದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ,ದಾಳಿ ನಡೆಸಿದಂತಹ ಸಂದರ್ಭದಲ್ಲಿ ದಾಳಿ ಕೋರರ ಮೇಲೆ ಲಘು ಸೆಕ್ಷನ್ ಹಾಕಿದ್ದು ಮತ್ತು ಕೆಲವೊಂದು ಕಡೆಗಳಲ್ಲಿ ಪ್ರಕರಣವನ್ನು ದಾಖಲಿಸದೆ ಗೂಂಡಾಗಳನ್ನು ಬೆಳೆಯಲು ಪೋಲಿಸ್ ಇಲಾಖೆ ಬಿಟ್ಟದ್ದೇ ಇಂತಹ ಹೇಳಿಕೆ ಕೊಡಲು ಕಾರಣವಾಗಿರುತ್ತದೆ. ಕೆಲವು ಪೋಲಿಸ್ ಅಧಿಕಾರಿಗಳು ಸಂಘಪರಿವಾರದವರೊಂದಿಗೆ ಈ ಕಾರ್ಯಕ್ಕೆ ನೇರವಾಗಿ ಸಂಪರ್ಕ ಇಟ್ಟುಕೊಂಡು ಶಾಮೀಲಾಗಿರುವುದರಿಂದಲೇ ಇಂತಹ ಘಟನೆಗಳು ಪದೇ ಪದೇ ಪುನರಾವರ್ತನೆ ಯಾಗ್ತಾಲೇ ಇರುವುದು, ಹಾಗಾಗಿ ಉನ್ನತ ಪೋಲಿಸ್ ಅಧಿಕಾರಿಗಳು ದ.ಕ ಜಿಲ್ಲೆಯ ಪೋಲಿಸ್ ವ್ಯವಸ್ಥೆಯನ್ನು ಪುನರ್ ರೂಪೀಕರಿಸಬೇಕು ಹಾಗೂ ಸಂಘಪರಿವಾರದ ಗೂಂಡಾಗಳೊಂದಿಗೆ ಕೆಟ್ಟ ಕೆಲಸಕ್ಕೆ ಆತ್ಮೀಯ ಸಂಬಂಧವನ್ನು ಹೊಂದಿರುವ ಅಧಿಕಾರಿಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಹಾಗೂ ದ.ಕ ಜಿಲ್ಲೆಗೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲೆಯ ಶಾಂತಿ ಸಾಮರಸ್ಯವನ್ನು ಕಾಪಾಡಲು ದಿಟ್ಟ ಹೆಜ್ಜೆ ಇಡಬೇಕು.
ಅದೇ ರೀತಿ ಜಿಲ್ಲಾಧಿಕಾರಿಯವರ ಹೇಳಿಕೆಯ ಬೆನ್ನಲ್ಲೇ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದು ಹಲವಾರು ಊಹಾಪೋಹ ಮತ್ತು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ.
ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಅಧಿಕಾರಿಗಳಿಗಳನ್ನು ಬಿಜೆಪಿ ಸರ್ಕಾರ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತದೆ. ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ ವಾಗಿದೆ.
ದ.ಕ ಜಿಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಯಾಗಿದ್ದ ಸಶಿಕಾಂತ್ ಸೆಂಥಿಲ್ ಸರ್ ಸೇರಿದಂತೆ ಹಲವಾರು ಐಪಿಎಸ್ & ಐಎಎಸ್ ಅಧಿಕಾರಿಗಳು ಬಿಜೆಪಿ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದು ರಾಜೀನಾಮೆ ಸಲ್ಲಿಸಿರುವುದೆಲ್ಲವೂ ಬಿಜೆಪಿ ಸರ್ಕಾರ ಹೇಗೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಕೆಲವೊಂದು ಉದಾಹರಣೆಗಳಾಗಿದೆ.
ಆದ್ದರಿಂದ ಪೋಲಿಸ್ ಇಲಾಖೆ ಕೂಡಲೇ ಜಿಲ್ಲಾಧಿಕಾರಿಗೆ ಹಾಕಿರುವ ಕೊಲೆ ಬೆದರಿಕೆ ಸಂದೇಶವನ್ನು ಲಘುವಾಗಿ ಪರಿಗಣಿಸದೇ ಸಂದೇಶ ರವಾನಿಸಿದ ಸಂಘಪರಿವಾರದ ಗೂಂಡಾಗಳ ಮೇಲೆ ಸ್ವಯಂ ಪ್ರೇರಿತವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಉತ್ತರ ಪ್ರದೇಶದ ಬುಲಂದರ್ ಶಾ ಪೋಲಿಸ್ ಇನ್ಸ್ಪೆಕ್ಟರ್ ಸುಬೋದ್ ಕುಮಾರ್ ರವರಿಗೆ ಬೆದರಿಕೆ ಕರೆ ಮತ್ತು ಸಂದೇಶವನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದು ಅವರ ಹತ್ಯೆಗೆ ಕಾರಣವಾಗಿತ್ತು.ಹಾಗಾಗಿ ಈ ಬೆದರಿಕೆ ಸಂದೇಶವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು.
ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸುವಂತಹ ಸಂಘಪರಿವಾರದ ಗೂಂಡಾಗಳ ಮೇಲೆ ತಕ್ಷಣವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಸೆಕ್ಷನ್ ಗಳನ್ನು ಹಾಕಿ ಕಾನೂನು ಕ್ರಮ ಜರುಗಿಸಬೇಕು.
ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!